ಕಟುಕರು ಪ್ರತಿಯೊಂದು ವೃತ್ತಿ ಯಲ್ಲೂ ಇರುತ್ತಾರೆ🙏🙏 ….
ಆತ ಕೋಳಿ ಅಂಗಡಿ ಯಲ್ಲಿ ಕೋಳಿ ಕೊಚ್ಚಿ ಕೊಚ್ಚಿ ತನ್ನ ಗ್ರಾಹಕರಿಗೆ ಕೊಡುವ ಕೆಲಸ ಮಾಡುವ ವ್ಯಕ್ತಿ .ಪ್ರತಿದಿನ 50 ರಷ್ಟು ಕೋಳಿ ಕತ್ತರಿಸಿದರೆ,ಕೆಲವು ದಿನ 100+ಕೋಳಿ ಕತ್ತರಿಸುತಿದ್ದ …
ಅಂದು ದೊಡ್ಡ ಕಾರ್ ಅಲ್ಲಿ ಬಂದ ವ್ಯಕ್ತಿಯೊಬ್ಬ ಹೇಳಿದ್ದ ಆ ಮಾತುಗಳು ಅವನ ಎದೆ ಯನ್ನು ಈಟಿಯಂತೆ ತಿವಿಯುತಿತ್ತು..ಆತ 3 ಕೆಜಿ ಕೋಳಿ ಖರೀದಿಸಲು ಬಂದಿದ್ದ ಈತ ಕೋಳಿ ಕತ್ತರಿಸುತ್ತಿದ್ದಾಗ ಹೇಳಿದ್ದ ..” ಅಯ್ಯ ಕಟುಕ ಆ ಕೋಳಿ ಸಾಯುವ ಮೊದಲು ಅದೆಷ್ಟು ಬಾರಿ ನಿನ್ನನ್ನು ಶಪಿಸಿರಬೇಡ ನೀನು ಹಾಳಾಗಿ ಹೋಗು ಎಂದು ದಿನಕ್ಕೆ ಅದೆಷ್ಟು ಕೋಳಿಗಳ ಶಾಪ ನಿನ್ನ ಮೇಲಿರಬೇಡ?ನಿನ್ನದು ಅದೆಂತ ದರಿದ್ರ ಜೀವನ ?ನಿನ್ನ ಮುಂದಿನ ಜನ್ಮ ಅದೆಷ್ಟು ಕೆಟ್ಟದಿರಬಹುದು ಎಂದಿದ್ದ ಆತ…😔😔😔
ನಿಜಕ್ಕೂ ವಿಚಲಿತ ನಾಗಿದ್ದ ಹಲವು ವರ್ಷ ಗಳಿಂದ ಇದೇ ಇವನ ವೃತ್ತಿಯಾಗಿತ್ತು .ಹೆಂಡತಿ2 ಮಕ್ಕಳ ಹೊಟ್ಟೆ ತುಂಬಿಸಬೇಕಿತ್ತು😔,ಇಂದು ಮೊದಲ ಬಾರಿ ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡಿತ್ತು ಅವನಲ್ಲಿ 😔,ಆದರೆ ಮಾಡಲೇ ಬೇಕಿತ್ತು ಸಂಜೆ ಮನೆಗೆ ಹೋಗುವಾಗ ತಿಂಡಿಗಾಗಿ,ಊಟಕ್ಕಾಗಿ ತನ್ನ ಕೈನೋಡುವ ಮಕ್ಕಳ ಮುಗ್ಧ ಮುಖ ನೆನಪಾಗಿ ದುಃಖದ ಲ್ಲೆ ಕೋಳಿಯ ಕತ್ತಿಗೆ ಕಚಕ್ ಎಂದು ಕತ್ತಿ ಇಟ್ಟಿದ್ದ 😔😔
ಅಷ್ಟರಲ್ಲಿ ಅಲ್ಲೊಂದು ವಿದ್ಯಮಾನ ನಡೆದಿತ್ತು ,ಯಾರೋ ಸ್ಕೂಟರ್ ಅಲ್ಲಿ ಬಂದ ವ್ಯಕ್ತಿ ಯೊಬ್ಬ ತನ್ನಲ್ಲಿ ಕೋಳಿ ಆರ್ಡರ್ ಮಾಡಿ ದ ದೊಡ್ಡ ಕಾರ್ ನ ವ್ಯಕ್ತಿಯಲ್ಲಿ ಜೋರು ಜೋರಾಗಿ ಮಾತನಾಡುತಿದ್ದ.ಸಡನ್ ಅಪ್ಸೆಟ್ ಆದ ಈ ವ್ಯಕ್ತಿ ಕೋಳಿ ತಗೊಂಡು ಕಾರ್ ಅಲ್ಲಿ ಅಲ್ಲಿಂದ ಹೊಗಿ ಬಿಟ್ಟಿದ್ದ …
ಅಲ್ಲಿದ್ದ ವ್ಯಕ್ತಿ ಮಾತ್ರ ತಲೆಮೇಲೆ ಕೈ ಹೊತ್ತು ನಿಂತಿದ್ದ ..ಕೋಳಿ ಅಂಗಡಿಯವ ಏನಾಯಿತು ಎಂದು ವಿಚಾರಿಸಿದ …
ಆತ ಅಳುತ್ತ ಹೇಳಿದ ನಾನು ಹೆಂಡತಿ ಸರಕಾರಿ ನೌಕರಿ ಯಲ್ಲಿದ್ದು ನಮ್ಮ 10 ವರ್ಷದ ಒಟ್ಟು ಉಳಿತಾಯ ದಿಂದ ಮನೆ ಕಟ್ಟಲೆಂದು 15 ಲಕ್ಷ ಸ್ಥಳಕ್ಕೆಂದು, ಈ ವ್ಯಕ್ತಿಗೆ ಕೊಟ್ಟಿದ್ದೆವು ..ಯಾವುದೊ ಕೆರೆಗೆ ಮಣ್ಣು ತುಂಬಿಸಿ ದ ಜಾಗ ವನ್ನು ನಮಗೆ ಕೊಟ್ಟಿದ್ದಾನೆ ಮೋಸ ಮಾಡಿ, ಅಲ್ಲಿ ಮನೆ ಕಟ್ಟಲು ಅಡಿಪಾಯ ತೊಡುವಾಗಲೇ ವಿಷಯ ಗೊತ್ತಾಗಿದ್ದು😔 ಈತ ನಮ್ಮ 10 ವರ್ಷದ ದುಡಿಮೆಯ ಹಣ ತಿಂದು ನಮ್ಮ ಜೀವನವನ್ನೇ ಹಾಳು ಮಾಡಿ ಹೋಗಿದ್ದಾನೆ ಮನೆಹಾಳ..ಈತ
ಹಾಳಾಗಿ ಹೋಗುತ್ತಾನೆ ಆತನ ಹೆಂಡತಿ ಮಕ್ಕಳು ಹಾಳಾಗುತ್ತಾರೆ ನೀರು ತುಂಬಿದ ಕಣ್ಣಲ್ಲಿ ಶಾಪ ಹಾಕುತಿದ್ದ 😔😔
ಕಟುಕ ನಿಗೆ ದುಃಖ ವಾಗಿತ್ತು ..ಈಗಷ್ಟೇ ಆತ ಹೇಳಿದ್ದ ಮಾತುಗಳು ನೆನಪಿಗೆ ಬಂತು …ಮನಸ್ಸಲ್ಲೇ ಹೇಳಿದ “ನನಗೆ ಶಪಿಸುವ ಕೋಳಿ ಹೆಚ್ಚೆಂದರೆ ಒಂದೆರಡು ಬಾರಿ ಶಪಿಸಬಹುದು ಆದರೆ ಇವ ಮಾಡಿದ ಕೆಲಸಕ್ಕೆ ಬಡ ಜನರು ತಮ್ಮ ಕೊನೆ ಯುಸಿರು ಇರುವ ತನಕ ಅದೆಷ್ಟು ಬಾರಿ ಶಪಿಸಿರಬಹುದು?”😔…ಕೋಳಿ ಕಡಿ ವವನು ಮಾತ್ರ ಕಟುಕ ಅಲ್ಲ ತನ್ನ ವೃತ್ತಿ ಯಲ್ಲಿ ಇನ್ನೊಬ್ಬರ ತಲೆ ಕಡಿವ ,ಮೋಸ ಮಾಡುವ ಪ್ರತಿಯೊಬ್ಬರೂ ಕಟುಕರೇ **😔😔 …..
*ಎಂಬ ಸತ್ಯ ದ ಅರಿವಾಗುತ್ತಲೇ ತನ್ನ ವೃತ್ತಿಯ ಮೇಲೆ ಅವನಿಗಿದ್ದ ಜಿಗುಪ್ಸೆ ಮಾಯವಾಗಿತ್ತು*….
ಹೌದು ನೀನು ಯಾವುದೇ ವೃತ್ತಿ ಮಾಡು ಪ್ರಾಮಾಣಿಕತೆ ಇರಲಿ ನಿನ್ನಲ್ಲಿ, ಕೇವಲ ನಿನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡಿ ಸಂಪಾದಿಸಿದ ಹಣ ಖಂಡಿತ ನಿನ್ನ ಸರ್ವನಾಶಕ್ಕೆ ಕಾರಣ ವಾಗುವುದರಲ್ಲಿ ಸಂದೇಹ ವೇ ಇಲ್ಲ .ಹಾಗೆ ಮಾಡಿದ್ದಲ್ಲಿ ಆ ಜನರ ಶಾಪ ನಿತ್ಯ ನಿನ್ನ ನ್ನು ಕಟುಕನನ್ನಾಗಿಸುತ್ತಿರುತ್ತದೆಹಾಗಾಗಿ ನೆನಪಿಡಿ*
.
.
.
ಕಟುಕರು ಪ್ರತಿಯೊಂದು ವೃತ್ತಿಯಲ್ಲೂ ಇರುತ್ತಾರೆ ….😔😔
🔴🔴🔴🔴🔴🔴
ನಿಮ್ಮ ಪ್ರತಿಕ್ರೀಯೆ ನನ್ನ ವಾಟ್ಸಪ್ ನಂಬರ್ ಗೆ ಮಾಡಿ
9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now