ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 34

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 34

0Shares

ಕಷ್ಟದಲ್ಲಿರುವವನ ಕೈ ಹಿಡಿಯುವಾಗ,ವೇದಾಂತ ಕೇಳುವ ಬದಲು ಅವನ ಪಸರಿಸ್ತಿತಿಯನ್ನಷ್ಟೇ ನೋಡೋಣವೇ ??

ವಿನಯ ಅಂದು ಆ ಒಂದು ವಾಟ್ಸಪ್ ಸಂದೇಶ ನೋಡಿ ನಿರ್ಧರಿಸಿ ಬಿಟ್ಟಿದ್ದ,ನಾನಿನ್ನು ಯಾವುದೇ ಭಿಕ್ಷುಕರಿಗೆ ಹಣ ಕೊಡುವುದೇ ಇಲ್ಲ ಬೇಕಾದರೆ ಊಟ ತೆಗೆಸಿಕೊಡುತ್ತೇನೆ ಎಂದು.ಈ ರೀತಿ ಹಣ ಕೊಡುವುದರಿಂದ ಅವರಿಗೆ ಹಣದ ರುಚಿ ಹತ್ತಿಸಿ ಭಿಕ್ಷೆ ಬೇಡಲು ನಾವೇ ಉತ್ತೇಜನ ಕೊಟ್ಟ ಹಾಗೆ ಆಗುತ್ತದೆ ಎಂಬುವುದು ಆ ಸಂದೇಶದ
ಸಾರಾಂಶ ವಾಗಿತ್ತು,ವಿನಯನಿಗೂ ಈ ಮಾತು ಸರಿ ತೋರಿತ್ತು ..

ಇನ್ನೇನು ಆ ಪಾರ್ಕ್ ಇಂದ ಹೊರ ಹೋಗಬೇಕು ಅನ್ನುವಸ್ಟರಲ್ಲಿ ಒಂದು ಕೈ ಅಲ್ಲಿ ಜೋಳಿಗೆ ಇನ್ನೊಂದು ಕೈಯಲ್ಲಿ ಸುಮಾರು 4 ವರ್ಷದ ಮಗುವನ್ನೆತ್ತಿ ಕೊಂಡ ಕೊಳಕು ಸೀರೆ ಉಟ್ಟ ಸುಮಾರು 35 ವರ್ಷದ ಹೆಂಗಸೊಬ್ಬಳು ಮಗುವನ್ನು ತೋರಿಸಿ ಕೈ ಅಲ್ಲಿ ಚಿಲ್ಲರೆ ಹಣದೊಂದಿಗೆ ಭಿಕ್ಷೆ ಕೇಳುತಿದ್ದಳು ..

ತಕ್ಷಣ ವಿನಯ್ ಹೇಳಿದ “ನೋಡಮ್ಮ ಪಕ್ಕದ ಹೋಟೆಲ್ಗೆ ನಡಿ ನಿನಗೆ ಊಟ ಕೊಡಿಸುತ್ತೇನೆ” ಎಂದಾಗ ಊಟ ಬೇಡ ಸರ್ ಒಂದೈದು ರೂಪಾಯಿ ಭಿಕ್ಷೆ ನೀಡಿ ಎಂದದ್ದು ವಿನಯ್ ನ ಸಿಟ್ಟು ಏರಲು ಕಾರಣವಾಗಿತ್ತು

“ನಿಮ್ಮಿಂದ ವೇ ಈ ದೇಶ ಹಾಳಾಗೋದು,ದುಡ್ಡು ದುಡ್ಡು ದುಡ್ಡು ಊಟ ಬೇಡ ಆಂತಿಯಲ್ಲ ಎಷ್ಟು ಸೊಕ್ಕು ನಿನಗೆ ಕೊಳಕು ಜನ ತೊಲಗಿಲ್ಲಿಂದ ” ಕಠೋರ ಪದ ಪ್ರಯೋಗಕ್ಕೆ ಆ ವಾಟ್ಸಪ್ ಸಂದೇಶವೇ ಪ್ರೇರಣೆ ಯಾಗಿತ್ತು ವಿನಯನಿಗೆ😔 …..

ಇವನ ರೌದ್ರಾವತಾರ ನೋಡಿ ಹೆದರಿದ ಬಿಕ್ಷುಕಿ ತಲೆ ಬಗ್ಗಿಸಿ ಮುಂದೆ ನಡೆದಿದ್ದಳು ಇದೆಲ್ಲ ಈಗೀಗ ಅವಳಿಗೆ ಅಭ್ಯಾಸವಾಗಿತ್ತು😔 ..
ಅಲ್ಲೇ ಸಮೀಪದಲ್ಲಿ ಮರದ ಕೆಳಗೆ ಹೋಗಿ ಕೂತವಳೇ ಮಗುವಿನ ತಲೆ ಮುಟ್ಟಿ ನೋಡುತ್ತಾಳೆ ಜ್ವರ ಕೊತ..ಕೊತ ಕುದಿಯುತ್ತಿತ್ತು😔…ತನ್ನ ಜೋಳಿಗೆ ಹುಡುಕಿದರೆ ಅಲ್ಲಿ ಜ್ವರದ ಸಿರಪ್ ಇತ್ತು ಮುಚ್ಚಳ ತೆಗೆದರೆ ಅಲ್ಲಿ ಒಂದು ಹನಿ ಕೂಡ ಉಳಿದಿರಲಿಲ್ಲ😔 ,ಕೈಯಲ್ಲಿದ್ದ ಚಿಲ್ಲರೆ ಲೆಕ್ಕ ಹಾಕಿದ್ದಳು 22’ರೂ ಮಾತ್ರವೇ ಇತ್ತು 😔 ಓಡೋಡಿ ಹೋದಳು ಆ ಸಿರಪ್ ನ ಬಾಟಲಿ ಯೊಂದಿಗೆ ಮೆಡಿಕಲ್ ಗೆ, ಸಿರಪ್ ಕೊಡಲು ಹೇಳಿದ್ದಳು ಸಿರಪ್ ಗೆ 40 ರೂ ಆಗಿತ್ತು ತನ್ನಲ್ಲಿ ಹಣ ಇಲ್ಲ ಎಂದಳು ..ಮತ್ತೆ ಅಂಗಡಿಯಾತ ಬೈಗುಳ ಶುರುಮಾಡಿದ ..ಸಿರಪ್ ಅನ್ನು ಒಳಗೆ ಇಟ್ಟು,😔 ” ಎಲ್ಲೆಲ್ಲಿಂದ ಬರುತ್ತವೆ ದರಿದ್ರ ದವು ಬೆಳಿಗ್ಗೆ ಬೆಳಿಗ್ಗೆ ….”ಮಗುವಿನ ಜ್ವರದ ಬಗ್ಗೆ ಹೇಳಬೇಕೆಂದು ಕೊಂಡಳು ಅವನ ಸಿಟ್ಟು ತುಂಬಿದ ಮುಖ ನೋಡಿ ಹೆದರಿದಳು ಅವಳ ಕಣ್ಣಲ್ಲಿ ನೀರಿತ್ತು ಈಗೀಗ ಅದು ಸಾಮಾನ್ಯವಾಗಿ ಬಿಟ್ಟಿತ್ತು ಅವಳಿಗೆ …ತಲೆ ತಗ್ಗಿಸಿ ಅಲ್ಲಿಂದ ಹೊರ ಬಂದಳು ಆ ತಾಯಿ 😔😔

ಕೈಯಲ್ಲಿದ್ದ ಮಗು ಮಾತ್ರ ಅಳುತಿತ್ತು 😔😔
ದೇವರಲ್ಲಿ ಮೊರೆ ಇಟ್ಟಳು ದೇವಾ ರಕ್ಷಿಸು ಎಂದು ಅದಷ್ಟೇ ಮಾಡಬಹುದಿತ್ತು ಅವಳಿಗೆ, ಅಷ್ಟರಲ್ಲಿ ಯಾರೋ ಅದೇ ಸಿರಪ್ ಅನ್ನು ಕೊಟ್ಟಿದ್ದರು🙏, ದೇವರೇ ಕೊಟ್ಟಿರಬೇಕೆಂದು
ಕೊಟ್ಟವರ ಮುಖವೂ ನೋಡದೇ ಒಂದು ಮುಚ್ಚಳ ಸಿರಪ್ ಮಗುವಿನ ಬಾಯಿಗೆ ಹಾಕಿ ಸಮಾಧಾನ ಮಾಡುತಿದ್ದಳು …ಮತ್ತೆ ತಲೆ ಎತ್ತಿ ನೋಡಿದರೆ ಆಗ ಬೈದಿದ್ದ ವಿನಯ ಅಲ್ಲಿದ್ದ …ಕೈಯಲ್ಲಿ 2 ಕಟ್ಟು ಊಟ ,ಮಗುವಿಗೆ ಲ್ಯಾಕ್ಟೋಜನ್ ಹಾಲು ,ಹಾಲಿನ ಬಾಟಲ್ ಜೊತೆಗೆ 500 ರೂ ಕೊಟ್ಟು ಹೋದ ,ಆಗ ಬೈದದ್ದಕ್ಕೆ ಪ್ರಾಯಶ್ಚಿತ್ತ ಮಾಡಿ ಕೊಂಡಿದ್ದ ಈತ,ಆ ಹೆಂಗಸು ನೀರು ತುಂಬಿದ ಕಣ್ಣು ಗಳಲ್ಲಿ ಕೈಮುಗಿದು ನಿಂತಿದ್ದಳು ..ಆಕೆಗೆ ಮಾತ್ರ ಅಂದು ವಿನಯ ದೇವರಾಗಿ ಕಂಡಿದ್ದ😔😔 …
ವಿನಯನು ಅಲ್ಲಿಂದ ಬೇಗ ಬೇಗ ಹೋಗಿದ್ದ..

ಆ ವಾಟ್ಸಪ್ ಸಂದೇಶವನ್ನು ಡಿಲೀಟ್ ಮಾಡುವ ಅನಿವಾರ್ಯತೆ ಇತ್ತು ಆತನಿಗೆ….

ಹೌದು ಆತ ಪೊಲೀಸ್ ನವ ಸರಕಾರದ ಸಂಬಳ ಬರುತ್ತೆ ,ಆಕೆ ಭಿಕ್ಷೆ ಬೇಡಿ ಲಕ್ಷ ಲಕ್ಷ ಸಂಪಾದಿಸು ತ್ತಾಳೆ,ಆತ ನಪುಂಸಕನ ವೇಷದಲ್ಲಿ ದಿನಕ್ಕೆ 10000+ಸುಲಿಗೆ ಮಾಡುತ್ತಾನೆ ಎನ್ನುತ್ತೇವೆ, ಎಲ್ಲ ಒಪ್ಪೋಣ ಆದರೆ ಎಲ್ಲಾ ಬೆರಳು ಒಂದೇ ಅಲ್ಲವಲ್ಲ ಅವರಲ್ಲೂ ನಿಜವಾಗಿ ಕಷ್ಟದಲ್ಲಿ ಇರುವವರು ಇರುತ್ತಾರಲ್ಲವೇ?? ಯಾವುದೇ ವಾಟ್ಸಪ್ ಸಂದೇಶ ಗಳನ್ನು ಕಣ್ಣು ಮುಚ್ಚಿ ಸತ್ಯ ಎಂದು ಒಪ್ಪಿಕೊಳ್ಳದೆ …ಇಂತಹ ಸಂಕಷ್ಟ ದಲ್ಲಿರುವ ಜನರ ಕೈ ಹಿಡಿಯೋಣ🙏🙏 …

ಇನ್ನು ಮುಂದೆ….

ಕಷ್ಟ ದಲ್ಲಿರುವವನ ಕೈ ಹಿಡಿಯುವಾಗ,ವೇದಾಂತ ಕೇಳುವ ಬದಲು ಅವನ ಪಸರಿಸ್ತಿತಿಯನ್ನಷ್ಟೇ ನೋಡೋಣವೇ ??
🔴🔴🔴🔴🔴🔴

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now