ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 33

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 33

0Shares


ಅಂದು ತಾವು ಅವಮಾನ ಮಾಡಿದ್ದ ಅದೇ ಮಾವಿನ ಮರದೆದುರು ಸಂಪೂರ್ಣ ಬೆತ್ತಲಾಗಿ ನಿಂತಿದ್ದವು ಇಂದು ಈ ಸಾಗುವಾನಿ ಮರಗಳು‼️

ಅಂದು ಆತ ತಾನು ಖರೀದಿಸಿದ 1 ಎಕರೆ ಸಾಗುವಾನಿ ಮರಗಳ ಪ್ಲಾಂಟೇಶನ್ ಗೆ ಸುತ್ತು ಹೊಡೆಯುತಿದ್ದ, ತನ್ನ ರೈಟರ್
ಜೊತೆ ,ಬೆಳೆದ ದೊಡ್ಡ ದೊಡ್ಡ ಮರಗಳನ್ನು ನೋಡಿ ಖುಷಿ ಇಂದಿದ್ದ ಇನ್ನೇನು ಹೊರಬರಬೇಕು ಅಲ್ಲೊಂದು ಮಾವಿನ ಮರ ಇತ್ತು …ಇಷ್ಟೊಂದು ಬೆಲೆಬಾಳುವ ಮರಗಳ ನಡುವೆ ಇರುವ ಆ ಮಾವಿನ ಮರ ಅವನಿಗೆ ನಿಷ್ಪ್ರಯೋಜಕವಾಗಿ ಕಂಡಿತು ..ಆ ನಿಷ್ಪ್ರಯೋಜಕ ಮರ ವನ್ನು ಕಡಿದು ಬಿಸಾಕುವಂತೆ ತನ್ನ ರೈಟರ್ಗೆ ಹೇಳಿ ಮುಂದೆ ನಡೆದ

ಯಜಮಾನ ಹಾಗೆ ಹೇಳಿ ಹೋಗಿದ್ದನ್ನು ಕೇಳಿದ ಸಾಗುವಾನಿ ಮರ ಗಳು ಗಟ್ಟಿಯಾಗಿ ವ್ಯಂಗ್ಯ ವಾಗಿ ನಗುತ್ತಿದ್ದವು,ಮಾವು ತನಗಾದ ಅವಮಾನ ದಿಂದ ತಲೆ ತಗ್ಗಿಸಿ ನಿಂತು ಕೊಂಡಿತು.ತನ್ನದೆಂದು ಒಂದು ದಿನ ಬಂದೆ ಬರುವುದು ಎಂದೇ ನಂಬಿತ್ತು ಮಾವು ಬುದ್ದಿವಂತ ರೈಟರ್ ಮಾವನ್ನು ಕಡಿಯದೆ ಹಾಗೇ ಬಿಟ್ಟಿದ್ದ ..

ಇದಾಗಿ ಕೆಲವು ತಿಂಗಳು ಕಳೆದಿರಬಹುದು,ಆ ಯಜಮಾನನ ತಂದೆ ತೀರಿ ಹೋಗುತ್ತಾರೆ ,ಮನೆಯಲ್ಲಿ ಸ್ಮಶಾನ ಮೌನ ..ಅವರನ್ನು ಸುಡಲು ಗಂಧದ ಮರದ ತುಂಡನ್ನೇ ತಂದಿದ್ದ ಆದರೆ ಸಂಪ್ರದಾಯ ದ ಪ್ರಕಾರ ಈ ಸಂದರ್ಭ ದಲ್ಲಿ ಸ್ವರ್ಗ ಪ್ರಾಪ್ತಿ ಆಗಬೇಕಾದರೆ ಮಾವಿನ ಮರ ದ ತುಂಡೊಂದು ಅನಿವಾರ್ಯ ವಿತ್ತು

ಮನೆಯಲ್ಲೇ ಬೆಳೆದ,ಅಥವ ಮನೆಗೆ ಸೇರಿದ ಮಾವು ಇದ್ದಿದ್ದರೆ ಉತ್ತಮ ವಿತ್ತು ಎಂಬ ಅಭಿಪ್ರಾಯ ಬಂದಿತ್ತು ಆದರೆ ಎಲ್ಲಿ ಹುಡುಕಿದರೂ ಮಾವಿನ ಮರ ಇರಲಿಲ್ಲ ಅದು ಯಜಮಾನ ನ ಚಿಂತೆಗೆ ಕಾರಣವಾಗಿತ್ತು

ಅಲ್ಲಿಗೆ ಬಂದ ರೈಟರ್ ತನ್ನ ಯಜಮಾನ ನ ಚಿಂತೆಯನ್ನು ಗಮನಿಸಿದವನೇ ಕಿವಿಯಲ್ಲಿ ಉಸುರಿದ..”ನಿಮ್ಮ ಸಾಗುವಾನಿ ಪ್ಲಾಂಟೇಶನ್ ಅಲ್ಲಿ ದೊಡ್ಡ ಮಾವಿನ ಮರ ಇದೆಯಲ್ಲ” ಎಂದಾಗ ಯಜಮಾನನ ಮುಖ ಅರಳಿತ್ತು ..
ಕ್ಷಣದಲ್ಲಿ ಅಲ್ಲಿಗೆ ಹೋಗಿ ಮರವನ್ನು ಗಟ್ಟಿಯಾಗಿ ಅಪ್ಪಿ ಹಿಡಿದಿದ್ದ ..ಅಂದು ನಿರ್ಲಕ್ಷ ಮಾಡಿದ್ದ ಅದೇ ಮರ ಇಂದು ತನ್ನ ಮಾನ ಕಾಪಾಡಿತ್ತು..ಯಜಮಾನ ನ ಕಣ್ಣಲ್ಲಿ ನೀರಿತ್ತು ತನ್ನ ಮನಸ್ಸಲ್ಲೇ ಹೇಳಿದ್ದ ಅಂದು ಯಾಕೂ ಬೇಡ ಎಂದಿದ್ದ ಮರ ವೊಂದು ಇಂದು ಇಡೀ ಪ್ಲಾಂಟೇಶನ್ ಅಲ್ಲಿ ಇರುವ ಮರ ಗಳಿಗಿಂತ ದುಬಾರಿ ಮರ ವಾಗಿತ್ತು ತನ್ನ ಪಾಲಿಗೆ…ಮತ್ತೆ ಹೋಗಿ ಮರವನ್ನು ತಬ್ಬಿ ಹಿಡಿದಿದ್ದ ..ಮರ ತನ್ನೆಲ್ಲ ನೋವನ್ನೂ ಮರೆತಿತ್ತು..ಖುಷಿ ಯಿಂದ ಜೋರಾಗಿ ಗಾಳಿ ಬೀಸಿತ್ತು,ಗಳಿಗೆ ಸಮೀಪದ ಸಾಗುವಾನಿ ಮರಗಳ ಎಲೆ ಉದುರಿತ್ತು..ಅಂದು ತಾವು ಅವಮಾನ ಮಾಡಿದ್ದ ಅದೇ ಮಾವಿನ ಮರ ದೆದುರು ಎಲೆ ಉದುರಿ ಸಂಪೂರ್ಣ ಬೆತ್ತಲಾಗಿದ್ದವು ಅಲ್ಲಿ
😔😔😔

ನಾವೂ ಹಾಗೆ ಅದೆಷ್ಟೋ ಬಾರಿ ಹಣದ ಮದ ದಿಂದಲೋ,ಅದಿಕಾರದ ಮದ ದಿಂದಲೋ ಇನ್ನೊಬ್ಬರನ್ನು ನಿಷ್ಪ್ರಯೋಜಕ ಎಂದು ಕರೆಯುವುದುಂಟು😔 ಆದರೆ ನೆನಪಿಡಿ ಭಗವಂತನ ಸೃಷ್ಟಿಯಲ್ಲಿ ನಿಷ್ಪ್ರಯೋಜಕ ಎಂದು ಇಲ್ಲವೇ ಇಲ್ಲ ಹಾಗಾಗಿ ಆತ ನಿಷ್ಪ್ರಯೋಜಕ ಎಂದು ಬೆರಳು ತೋರುವ ಮೊದಲು 3 ಬಾರಿ ಯೋಚಿಸಿ ಯಾಕೆಂದರೆ ನಿಮ್ಮದೇ ಕೈಯ್ಯ ಒಂದು ಬೆರಳು ನಿಷ್ಪ್ರಯೋಜಕ ಎಂದು ಅವನನ್ನು ತೋರಿಸಿದರೆ ಉಳಿದ 3 ಬೆರಳು ನಿಮ್ಮನ್ನೇ ತೋರಿಸುತ್ತಿರುತ್ತದೆ…ಮುಂದೊಂದು ದಿನ ಅವನೆದುರು ಬೆತ್ತಲಾಗುವ ಮುನ್ನ ಎಚ್ಚರಗೊಳ್ಳಿ …🙏🙏
🔴🔴🔴🔴🔴🔴

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now