ಬದುಕ ಬದಲಿಸುವ ಕತೆಗಳು

ಬದುಕ ಬದಲಿಸುವ ಕತೆಗಳು

0Shares

ಕಥೆ ಸಂಖ್ಯೆ 3

ನಗುವು ಬರುತಿದೆ ಎನಗೆ ನಗುವು ಬರುತಿದೆ😂😂

ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ

ಅಂದು ರಮೇಶ್ ರಾವ್ ಅದೇ ಗುಂಗಿನಲ್ಲಿ ಕಾರು ಚಲಾಯಿಸುತ್ತಿದ್ದರು..ಬೆಂಗಳೂರ್ ನಲ್ಲಿ ಕಂಪನಿ ಒಂದರಲ್ಲಿ ಉದ್ಯೋಗಿ ಯಾಗಿದ್ದು ನಿನ್ನೆಯಷ್ಟೇ ತಮ್ಮ ತಂದೆಯ ವೈಕುಂಠ ಸಮಾರಾಧನೆ ಮುಗಿಸಿ ಹೋಗಲು ಊರಿಗೆ ಬಂದಿದ್ದರು ಊರಲ್ಲಿ ಅವರ ತಮ್ಮ ಸತೀಶ್ ರಾವ್ ಮನೆಯಲ್ಲಿ ವಾಸವಾಗಿದ್ದ..

ಅಂದು ಅವರಿಗೆ ಒಂದು ವಿಷಯ ತಿಳಿದಿತ್ತು, ಇಬ್ಬರೇ ಮಕ್ಕಳಿದ್ದಾಗ ತಂದೆಯ ಅಸ್ತಿ ಸಮಪಾಲಾಗಬೇಕಿತ್ತು ಆದರೆ ತಮ್ಮ ಎಲ್ಲ ಆಸ್ತಿಯನ್ನು ಅವನ ಹೆಸರಿಗೆ ತಂದೆ ಯಿಂದ ಬರೆಯಿಸಿ ಕೊಂಡಿದ್ದ ..
ರಮೇಶ ರಿಗೆ ನಿಜಕ್ಕೂ ಬೇಸರವಾಗಿತ್ತು ಒಡಹುಟ್ಟಿದ ತಮ್ಮನ ಬಗ್ಗೆ..ಎಷ್ಟೊಂದು ಬೇಸರ ಪಟ್ಟಿದ್ದರೆಂದರೆ ಇನ್ನು ಊರಿಗೆ ಬರುವುದೇ ಇಲ್ಲ ಎಂದು ಯೋಚಿಸಿದ್ದರು…
ತಮ್ಮನಿಗೆ ಮನ ಮುಟ್ಟುವಂತೆ ಮೊಬೈಲ್ ಅಲ್ಲಿ ಸಂದೇಶವೊಂದನ್ನು ಟೈಪ್ ಮಾಡಿದ್ದರು ರಾತ್ರಿ ಬಸ್ ಗೆ ಕುಟುಂಬ ಸಮೇತ ಹೊರಡಬೇಕಿತ್ತು..ತಮ್ಮ ಈ ದೊಡ್ಡ ಸಂದೇಶಕ್ಕೆ ಮನಸ್ಸಿಗೆ ನಾಟುವ ಹೆಸರು(ಹೆಡ್ಡಿಂಗ್) ಕೊಡಲು ಯೋಚಿಸುತ್ತಿದ್ದರು ..
ಯೋಚಿಸುತಿದ್ದವರಿಗೆ ಅಲ್ಲೊಂದು ಡೀಪ್ ಟರ್ನ್ ಇದ್ದದ್ದು ಗೊತ್ತಾಗಲೇ ಇಲ್ಲ ಇನ್ನೊಂದು ಬದಿಯಲ್ಲಿ ಬಂದ ಟ್ರಕ್ ಅನ್ನು ಗಮನಿಸಿರಲೇ ಇಲ್ಲ..ಇಬ್ಬರು ಸರಿಯಾದ ಸಮಯಕ್ಕೆ ಬ್ರೇಕ್ ಒತ್ತಿದ್ದರು..

ಆದರೂ ಟ್ರಕ್ ನ ಚಕ್ರ ಕಾರ್ ನ ಹಿಂಬದಿಗೆ ತಾಗಿ ಕಾರು ಒಂದು ಬದಿ ನುಜ್ಜು ಗುಜ್ಜಾಗಿತ್ತು..ಒಂದು ವೇಳೆ ಇವರು ಬ್ರೇಕ್ ಹಾಕದಿದ್ದರೆ ಟ್ರಕ್ ನ ಚಕ್ರದಡಿ ಕಾರು ಪುಡಿ ಆಗುತಿತ್ತು, ಹಾಗೆ ಆ ಟ್ರಕ್ ಡ್ರೈವರ್ ಬ್ರೇಕ್ ಹಾಕದಿದ್ದಿದ್ದರೆ ಟ್ರಕ್ ಇವರ ಕಾರ್ ಅನ್ನು ಅಡಿ ಹಾಕಿ ಮುಂದುವರಿಯುತಿತ್ತು. ಅದೇ ಟ್ರಕ್ ಎಡಕ್ಕೆ ಹೋಗಿದ್ದರೆ 16 ಫೀಟ್ ಆಳದ ಕಂದಕಕ್ಕೆ ಬೀಳುತಿತ್ತು …

ಸಿಟ್ಟುಗೊಂಡಿದ್ದ ಟ್ರಕ್ ಚಾಲಕ ಕೂಗಿ ಕೊಂಡು ಬೈದಿದ್ದ .. ಯಾಕೋ ಅಷ್ಟ್ ಅರ್ಜೆಂಟ್ ಇಬ್ರು ಹೋಗೋವಲ್ಲಿ ಹೋಗೆ ಹೋಗ್ತೀವಿ ಒಂದು ಐದು ನಿಮಿಷ ಹೆಚ್ಚು ಕಮ್ಮಿ ಅಷ್ಟಕ್ಕೇ ಏನ್ ಜೀವ ಯೇಳಿತದೊ ನಿಂಗ .. ರಮೇಶ್ ರಾವ್ ರ ಕಾರು ಹಿಂಬದಿ ನುಜ್ಜುಗುಜ್ಜಾಗಿತ್ತು..ದಾರಿ ಹೋಕರೆಲ್ಲ ಯೋಚಿಸಿದ್ದರು ಈಗ ಭಯಂಕರ ಜಗಳ ಇದೆ ಎಂದು 🥱…
ತಮ್ಮದೇ ತಪ್ಪು ಎಂದು ತಿಳಿದಿದ್ದ ರಮೇಶರಾವ್ ರು ನಗುತ್ತ ಸಾರೀ ಅಣ್ಣ ತಪ್ಪಾಯ್ತು ಎಂದು ಕಾರಲ್ಲೇ ಕೈ ಮುಗಿದು ನಕ್ಕು ಮುಂದು ವರಿದಿದ್ದರು..
ಅವರ ಮುಖದಲ್ಲಿ ವಿಷಾದವಿರಲಿಲ್ಲ ನಗುವಿತ್ತು, ಗೆಲುವಿನ ನಗು ಆ ಟ್ರಕ್ ಚಾಲಕ ನ ಬೈಗುಳಲ್ಲೂ ಒಂದು ಅರ್ಥವಿತ್ತು.
ತಕ್ಷಣ ತಮ್ಮನಿಗೆ ಬರೆದಿದ್ದ ಸಂದೇಶಕ್ಕೆ ಹೆಡ್ಡಿಂಗ್ ಕೊಟ್ಟಿದ್ದರು …

“ಹೋಗೋ ಸಮಯ ಬಂದಾಗ ಇಬ್ರು ಹೋಗೇ ಹೋಗ್ತೀವಿ ಒಂದು ಐದು ವರ್ಷ ಹೆಚ್ಚು ಕಮ್ಮಿ ಅಷ್ಟೇ ಅಷ್ಟರೊಳಗೆ ಜೀವ ಯೇಳಿದಿದ್ದ ನಿಂಗೆ”

ಮೆಸೇಜ್ ತಮ್ಮನಿಗೆ ಕಳುಹಿಸಿದ್ದರು ..ಸೆಂಟ್ ಆಗಿತ್ತು ರಮೇಶ್ ರಾವ್ ಗೆ ಈಗ ನೆಮ್ಮದಿ ಆಗಿತ್ತು….
.🙏😉🙏

ನಿಜಕ್ಕೂ ಈ ಮಾತು ನಮಗೆ ನಿಮಗೆಲ್ಲ ಅನ್ವಯಿಸುವ ಮಾತು ಯೊಚಿಸಿ ನೋಡಿ ಹುಟ್ಟಿದ ಮನುಷ್ಯ ಯಾರು ಶಾಶ್ವತ ವಲ್ಲ ಹಾಗಿದ್ದ ಮೇಲೆ ತಮ್ಮನ ಆಸ್ತಿ ಅಣ್ಣನ ಆಸ್ತಿ ತಂಗಿ ಅಕ್ಕನ ಆಸ್ತಿ ಹೊಡೆಯುವ ಅಸೆ ಬೇಕೇ ?? ಸಮಯ ಬಂದಾಗ ನಮ್ಮ ಸ್ವಂತ ಅಸ್ತಿ (ಎಲುಬು) ಕೊಂಡೊಯ್ಯಲು ಆಗದ ನಾವುಗಳು ಬದುಕಿರುವಾಗ ಈ ನಶ್ವರ ಆಸ್ತಿಗಾಗಿ ಹೊಡೆದಾಡಿ ಕೊಳ್ಳುವ ದಾಯಾದಿಗಳನ್ನೂ ನೋಡುವಾಗ ನಿಜಕ್ಕೂ ನಗುವು ಬರುತಿದೆ, ಎನಗೆ ನಗುವು ಬರುತಿದೆ🤣🤣
..
ಅಲ್ಲವೇ???
😂🤣😂🤣
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
(9945130630)
ವಾಟ್ಸಪ್
ಉಡುಪಿ
(ನಿಮ್ಮ ಪ್ರತಿಕ್ರಿಯೆ ನಮಗೆ ಅಮೂಲ್ಯ )
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now