ಆಗುವುದೆಲ್ಲ ಒಳ್ಳೆಯದಕ್ಕೆ

ಆತ ಪ್ರತಿ ದಿನ ಬೆಳಿಗ್ಗೆ 3 ಕಲ್ಲು ಗಳನ್ನು ಆ ಮರಕ್ಕೆ ಹೊಡೆಯುತಿದ್ದ ಮೊದ ಮೊದಲು ಸುಮ್ಮನೆ ಹೊಡೆಯುತಿದ್ದ ಈಗೀಗ ಅದು ಅಭ್ಯಾಸ ವಾಗಿ ಬಿಟ್ಟಿತ್ತು .ಆತನಿಗೆ ಅದೊಂದು ಸುಮ್ಮನೆ ಸಮಯ ವ್ಯರ್ತ ಕೆಲಸ ವಾಗಿತ್ತು 😔…
ಅದೇ ಮರದಲ್ಲಿ ವಾಸ ಮಾಡುತಿದ್ದ ಆ ಗೀಜಗನ ಹಕ್ಕಿಗೆ ಆತ ಎಸೆಯುತಿದ್ದ ಕಲ್ಲು ಕಿರಿ ಕಿರಿ ಎನಿಸುತಿತ್ತು😔 ..ತನ್ನ ಸಂಗಾತಿ ಯೊಂದಿಗೆ ಮರದ ಟೊಂಗೆ ಯಲ್ಲಿ ಗೂಡು ಕಟ್ಟಿ ಖುಷಿ ಕುಶಿಯಲ್ಲಿತ್ತು ಇನ್ನೇನು ಮೊಟ್ಟೆ ಇಟ್ಟು ಸುಂದರ ಪರಿವಾರದ ಕನಸು ಕಾಣುತಿದ್ದ ದಿನದಿಂದ ಕಲ್ಲು ಗಳು ಅದರ ತಲೆ ಮೇಲಿಂದಲೇ ಹಾಯ್ದು ಹೋಗಲಾರಂಭಿಸಿದ್ದವು..ಆತ ಕಲ್ಲುಎಸೆಯುವುದನ್ನು ಯಾವಾಗ ನಿಲ್ಲಿಸುತ್ತಾನೆ ಎಂದು ಅಸೆ ಇಂದ ಕಾಯುತಿದ್ದವು , ಮೊಟ್ಟೆ ಇಡಲು😔..ಒಂದು ತಿಂಗಳಿಂದ ಆ ಹುಡುಗನಿಗೆ ಶಪಿಸುತಿದ್ದವು ಹಕ್ಕಿಗಳು …
ಅಂದು ಹುಡುಗ ಎಸೆದ ಕಲ್ಲು ಮಾತ್ರ ಅದೇ ಮರದಲ್ಲಿದ್ದ ದೊಡ್ಡ ಕಣಜ ದ ಗೂಡಿಗೆ ಬಿದ್ದಿತ್ತು …ಆ ಗೂಡನ್ನು ಈ ಹಕ್ಕಿಗಳು ಗಮನಿಸಿರಲೇ ಇಲ್ಲ.
ಒಮ್ಮೆಗೇ, ಕಣಜ ಗಳು ಆಕ್ರಮಣ ಮಾಡಿದ್ದವು ಹುಡುಗ ಓಡಿದ್ದ, ಗೀಜಗನ ಗೂಡಿನ.ತುಂಬೆಲ್ಲ ಕಣಜಗಳು ಹಕ್ಕಿ ಗಳೇನೋ ಹಾರಿ ಪಾರದವು ಆದರೆ …ದೇವರ ದಯೆ ಇನ್ನೂ ಮೊಟ್ಟೆ ಇಟ್ಟಿರಲಿಲ್ಲ, ಇಟ್ಟಿದ್ದರೆ ಆ ಮರಿಗಳು ಇಂದು ಕಣಜಗಳ ದಾಳಿಯಲ್ಲಿ ಸಾಯುತಿದ್ದವು🥱🥱..ಅವುಗಳನ್ನು ಅಲ್ಲಿಂದ ಸಾಗಿಸುವುದು ಅಸಾಧ್ಯ ದ ಮಾತಾಗಿತ್ತು ..ಕೊನೆಗೂ ದೇವರು ಆ ಹುಡುಗನ ರೂಪದಲ್ಲಿ ಕಲ್ಲು ಹೊಡೆದು ನಮ್ಮ ಮರಿಗಳನ್ನು ಉಳಿಸಿದ್ದ ..ನಿಜಕ್ಕೂ ಆ ಭಗವಂತ ದಯಾ ಮಯಿಯಾಗಿದ್ದ…🙏🙏
ಹುಡುಗನಿಗೂ, ಭಗವಂತನಿಗೂ ಧನ್ಯವಾದ ಹೇಳುತ್ತಾ 2 ಗೀಜಗ ಹಕ್ಕಿಗಳು ಬೇರೊಂದು ಮರ ಹುಡುಕುತ್ತ ಹೋಗಿದ್ದವು ಅಲ್ಲಿಂದ🙏 ….
ಕತೆ ಎಷ್ಟೊಂದು ಮಾರ್ಮಿಕ ವಾಗಿದೆ ಅಲ್ಲವೇ ?ಅದೆಷ್ಟೋಸಲ
ನಮಗೆ ನಷ್ಟ ವಾದಾಗ ಸೋಲಾದಾಗ ನಾವೆಲ್ಲ ಭಗವಂತನನ್ನು ದೂರುತಿರುತ್ತೇವೆ ,ಅದೆಷ್ಟೋ ಬಾರಿ ಅವನಿಗೆ ಬಯ್ಯುತ್ತಿರುತ್ತೇವೆ😔 ..ಆದರೆ ಇಂದಿನ ನಷ್ಟ ಸೋಲುಗಳು ನಾಳೆಯ ಬಹುದೊಡ್ಡ ಲಾಭ ದ ಯಶಸ್ಸಿನ ಮೊದಲ ಹೆಜ್ಜೆಯೇ ಆಗಿದೆ ಎಂಬುದು ಆ ಭಗವಂತನ ಲೆಕ್ಕಾ ಚಾರ ಆಗಿರುತ್ತದೆ ನೆನಪಿರಲಿ
…ಹಾಗಾಗಿ ಇಷ್ಟೇ ಯೋಚಿಸಿ ಮುನ್ನಡೆಯಿರಿ ಜೀವನದಲ್ಲಿ …

🙏🙏 ಆಗುವುದೆ ಲ್ಲಾ..ಒಳ್ಳೆಯದಕ್ಕೆ …🙏🙏
🔴🔴🔴🔴🔴🔴
ನಿಮ್ಮ ಪ್ರತಿಕ್ರೀಯೆ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ
🔴🔴🔴🔴🔴🔴
ಡಾ ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
ನಿಮ್ಮ ಅನಿಸಿಕೆ ಗಳನ್ನೂ ನೇರವಾಗಿ ನನಗೆ ತಿಳಿಸಿ ..
🔴🔴🔴🔴🔴🔴
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























