ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 22

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 22

0Shares

ಮಾತಿನ ಮೋಡಿ

ಆತ ದೊಡ್ಡ ಜ್ಯೋತಿಷಿ ಅಂದು ವಿಶಾಲ ವಾದ ಪಾರ್ಕ್ ಒಂದರಲ್ಲಿ ಭಾಷಣ ಮಾಡಲು ತಯಾರಾಗಿದ್ದ..ವಿಶಾಲ ವಾದ ಸರೋವರದ ದಡ ದಲ್ಲಿ ವೇದಿಕೆ ನಿರ್ಮಾಣ ಗೊಂಡಿತ್ತು.
ಆತ ವಿಚಾರವಾದಿ ಅದೇ ಪಾರ್ಕ್ ನ ಮುಂಭಾಗದಲ್ಲಿ ಕೂತಿದ್ದ ಆತ ಜ್ಯೋತಿಷ್ಯ ಜಾತಕ ಇದನ್ನೆಲ್ಲಾ ನಂಬುತ್ತಿರಲಿಲ್ಲ…

ಸರೋವರ ದಲ್ಲಿ ಕೊಕ್ಕರೆ ಯೊಂದು ಮೀನುಗಳನ್ನು ತಿನ್ನು ತಿತ್ತು ..ಸರೋವರ ಒಂದು ಬದಿ ಯಲ್ಲಿ ನೀರು ಆರುತಿತ್ತು,ಮೀನುಗಳು ಸುಲಭವಾಗಿ ಕೊಕ್ಕರೆಯ ಹೊಟ್ಟೆ ಸೇರುತಿತ್ತು
.
ಆ ಜ್ಯೋತಿಷಿ ಶುರು ಹಚ್ಚಿ ಕೊಂಡಿದ್ದ “ನೋಡಿ ಇಂದು ಶುಭ ಶುಕ್ರವಾರ ಇಂದಿನ ಭವಿಷ್ಯ ದಲ್ಲಿ ಸರ್ವೇ ಜನೋ ಸುಖಿನೋ ಅಂತಿದೆ ಹಾಗಾಗಿ ಮನುಷ್ಯ ನಾದಿ ಯಾಗಿ ಜಗತ್ತಿನ ಪ್ರತಿಯೊಂದು ಜೀವಿಯೂ ಇಂದು ಸಂತೋಷ ವಾಗಿಯೇ ಜೀವಿಸುತ್ತಿದೆ. ಆಗೋ ಅಲ್ಲಿ ನೋಡಿ ದೂರದ ಸರೋವರ ಅಲ್ಲಿ ಒಂದಷ್ಟು ಕೊಕ್ಕರೆ ಗಳೂ ಮೀನುಗಳನ್ನು ತಿಂದು ಎಷ್ಟೊಂದು ಸುಖಿಯಾಗಿ ಜೀವಿಸುತ್ತಿದೆ…ಇದೊಂದು ಉದಾಹರಣೆ ಮಾತ್ರ ಎಂದಾಗ ನೆರೆದ ಎಲ್ಲಾ ಸಭಿಕರು ಜೋರಾಗಿ ಕರತಾಡನ ಗೈದಿದ್ದರು

ಇಷ್ಟು ಹೊತ್ತು ಸುಮ್ಮನೆ ಕೂತಿದ್ದ ವಿಚಾರ ವಾದಿ ಮಾತ್ರ ತಕ್ಷಣ ಗಟ್ಟಿ ಯಾಗಿ ಕೂಗಿ ಹೇಳಿದ …ಸ್ವಾಮಿ ನನಗೊಂದು ದೌಟು ….ಇಡೀಸಭೆ ಸ್ಮಶಾನ ಮೌನ
“ಆ ಕೊಕ್ಕರೆ ಯನ್ನು ತೋರಿಸಿ ವಿಶ್ವವೆಲ್ಲ ಖುಷಿ ಯಾಗಿದೆ ಅಂದಿರಲ್ಲ ಸ್ವಾಮಿ ನಾನು ಒಪ್ಪು ವುದಿಲ್ಲ,ಅದೇ ಸರೋವರದಲ್ಲಿರುವ ಮೀನು ಗಳನ್ನೊಮ್ಮೆ ನೋಡಿ ಬೆಳಿಗ್ಗೆ ಬೆಳಿಗ್ಗೆ ಆ ಕೊಕ್ಕರೆ ಗಳಿಗೆ ಆಹಾರ ವಾಗುತ್ತಿದೆ.ಅವುಗಳ ಪಾಲಿಗೆ ಕರಾಳ ದಿನವಲ್ಲವೇ?ಇಂದು, ಮತ್ತೆ ಹೇಗೆ ಶುಭ ಶುಕ್ರವಾರ ಶುಭದಿನ ಎಂದಿರಿ ನೇರವಾಗಿಯೇ ಕೇಳಿದ್ದ ಜ್ಯೋತಿಷಿಯಲ್ಲಿ..🙏

ಈ ಭಾರಿ ಜ್ಯೋತಿಷಿ ಸೋಲುತ್ತಾನೆ ಎಂದೇ ಯೋಚಿಸಿದ್ದ ,ಸ್ವಲ್ಪ ವಿಚಲಿತ ನಾದಂತೆ ಕಂಡು ಬಂದರೂ,ಜ್ಯೋತಿಷಿ ಹೇಳಿದ “ನೋಡು ಈ ಪ್ರಪಂಚ ದಲ್ಲಿ ನಾವು ಜೀವಿಸುವುದು ಹೆಚ್ಚೆಂದರೆ 100 ವರ್ಷ ಮಾತ್ರ ಈಗ 2021 ನೆಯ ವರ್ಷ ಅಂದರೆ,ಉಳಿದ 1921 ವರ್ಷ ಕೂಡ ಭೂಮಿ ಇತ್ತು ಹಾಗಾದರೆ ನಾವೆಲ್ಲಿದ್ದೆವು? ಉತ್ತರ ಸ್ಪಷ್ಟ ನಮ್ಮ ಇರುವಿಕೆ ಈ ಭೂಮಿ ಮೇಲೆ ಕೆಲವೇ ವರ್ಷ ಮಾತ್ರ ಉಳಿದ ಹೆಚ್ಚಿನ ಸಮಯ ಭಗವಂತನ ಜೊತೆಯೇ ಇರಬೇಕು ಹಾಗಾಗಿ ನಮ್ಮ ಶ್ರೇಷ್ಠ ಕ್ಷಣಗಳು ಅವು, ಹಾಗಾಗಿ ಆ ಮೀನುಗಳು ಸಾಯುವುದಲ್ಲ ತಮ್ಮ ಜೀವನದ ಶ್ರೇಷ್ಠ ಕ್ಷಣಗಳನ್ನು ಸವಿಯುತಿದ್ದವು ಅಷ್ಟೇ ಹಾಗಾಗಿ ಇಂದು ಅವಕ್ಕೂ ಶುಭದಿನವೇ ತಾನೇ?
ಎಂದಾಗ ವಿಚಾರ ವಾದಿ ಬಾಯಿ ಮುಚ್ಚಿದ್ದ ..ತುಂಬಿದ ಸಭೆ ಮತ್ತೆ ಚಪ್ಪಾಳೆ ತಟ್ಟಿತ್ತು ..ಸಮಯೋಚಿತ ಮಾತುಗಾರಿಕೆ ಜ್ಯೋತಿಷಿ ಯನ್ನು ಆಪತ್ತಿನಿಂದ ರಕ್ಷಿಸಿತ್ತು
ಮಾತು ಬಲ್ಲವನಿಗೆ ಜಗಳ ವಿಲ್ಲಾ ಎಂಬ ನುಡಿ ನಮ್ಮ ಸಮಾಜದಲ್ಲಿ ರುವ ಕೆಲವು ಕಪಟ ಜ್ಯೋತಿಷಿ ಗಳು ,ಜಾತಕ ಹೇಳುವವರು,ಭವಿಷ್ಯ ಹೇಳುವವರು ಮುಂತಾದ
ಜನಕ್ಕೋಸ್ಕರ ವೇ ಮಾಡಿದ್ದಿರಬೇಕು ಅಲ್ಲವೇ


🔴🔴🔴🔴🔴🔴
ಡಾ ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
ನಿಮ್ಮ ಅನಿಸಿಕೆ ಗಳನ್ನೂ ನೇರವಾಗಿ ನನಗೆ ತಿಳಿಸಿ ..
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now