ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 17

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 17

0Shares

ಗಂಡು ಮೇಲಾ?..ಹೆಣ್ಣು ಮೇಲಾ??….🙏🙏

ಮಗಳ ಚೊಚ್ಚಲ ಹೆರಿಗೆಗಾಗಿ ತಂದೆ, ತಾಯಿ, ಗಂಡ ಮತ್ತು ಅತ್ತೆ ಹೊರಗಡೆ ಕಾದಿದ್ದರು..ಒಳಗೆ ಡಾ.ನಿರ್ಮಲ ರಾವ್..ನಾರ್ಮಲ್ ಡೆಲಿವರಿಗಾಗಿ ಕಾಯುತಿದ್ದರು ..ಹುಡುಗಿ ನೋವನುಭವಿಸುತಿದ್ದಳು, ವೈದ್ಯರು ಕೇಳಿದರು “ಮಗು ಹೆಣ್ಣು ಬೇಕೋ ಗಂಡೂ?”..ನೋವಲ್ಲೂ ಕೂಗಿ ಹೇಳಿದಳು ಆಕೆ, ಗಂಡಾಗಲಿ ಮ್ಯಾಮ್ ಇಷ್ಟು ನೋವು ಅನುಭವಿಸುವ ಕರ್ಮ ನನಗೆ ಇರಲಿ,”😔 ಹೆಣ್ಣಾಗಿದ್ದಕ್ಕೆ ಬೇಸರವಿತ್ತು ಆಕೆಯಲ್ಲಿ ….ಡೆಲಿವರಿ ಗೆ ಇನ್ನೂ ಸ್ವಲ್ಪ ಹೊತ್ತಿತ್ತು ಹೊರ ಬಂದು ಕೂತರು ವೈದ್ಯರು

ಗಂಡನನ್ನು ಅದೇ ಪ್ರಶ್ನೆ ಕೇಳಿದರು ಗಂಡು ಮಗು ಬೇಕಾ ? ಹೆಣ್ಣಾ ?…”ಹೆಣ್ಣಾಗಿರಲಿ” ತಕ್ಷಣ ಅವನಂದ ..ಆ ಮಗು ಮನೆಗೆ ಭಾಗ್ಯ ಲಕ್ಷ್ಮೀ ಆಗಿರಲಿ ..ಗಂಡಾಗಿ ಮನೆಯ ಕಷ್ಟ ಗಳನ್ನೂ ಹೊರುವ ಕಷ್ಟ ಬೇಡವೇ ಬೇಡ ಆ ಕಷ್ಟ ನನಗೇ ಇರಲಿ ಎಂದಿದ್ದ 😔ಆತನಿಗೂ ಬೇಸರವಿತ್ತು ಗಂಡಾಗಿದ್ದಕ್ಕೆ* ..

ಅತ್ತೆ ಯನ್ನು ಒಳ ಕರೆದು ಅದೇ ಪ್ರಶ್ನೆ ಕೇಳಿದರು ವೈದ್ಯರು ” ಗಂಡಾಗಿರಲಿ ನಮ್ಮ ವಂಶ ಬೆಳಗಲಿ..ಹೆಣ್ಣಾಗಿ ಅನುಭವಿಸಿದ್ದು ಸಾಕು ಎಂದರು ಅವರು

ವೈದ್ಯರಿಗೆ ಸುಸ್ತಾಗಿತ್ತು ..ಯೋಚಿಸಿದರು ಒಂದು ಸಿನಿಮಾದ ಡಿವಿಡಿ ತಂದು ಸತತ 5 ದಿನ ಮೊದಲ 1 ಗಂಟೆಯ ಭಾಗ ಮಾತ್ರ ನೋಡಿದಾಗ ಸಹಜವಾಗಿಯೇ 6 ನೆಯ ದಿನ ನಂತರದ ಭಾಗ ನೋಡಲು ಅಸೆ ಮೂಡುವುದು ಸಹಜವೇ ಎಂದು ಕೊಂಡರು😉😉 ..

ನಕ್ಕು ಹೆರಿಗೆ ಕೋಣೆಯತ್ತ ದೌಡಾಯಿಸಿದರು …ಸ್ವಲ್ಪ ಹೊತ್ತಲ್ಲೇ ಮಗು ಕೂಗುವ ಶಬ್ದ ಕೇಳುತಿತ್ತು ………

ಹೌದು ಜೀವನ ಮುಗಿವ ತನಕ ಗಂಡು ಮೇಲೆಂದು ಗಂಡಸರು, ಹೆಣ್ಣು ಮೇಲೆಂದು ಹೆಂಗಸರು ವಾದ ಮಾಡುತ್ತಲೇ ದಿನ ದೂಡುತ್ತಾರೆ ಆದರೆ ಕಹಿ ಸತ್ಯವೆಂದರೆ ನಿಜಕ್ಕೂ ಗಂಡಾದವನಿಗೆ ಗಂಡಸು ಜಾತಿಯಾ ಬಗ್ಗೆ ಹಾಗೆ ಹೆಣ್ಣಾದವಳಿಗೆ ಹೆಂಗಸು ಜಾತಿಯ ಬಗ್ಗೆ ಸಮಾಧಾನ ಇರುವುದಿಲ್ಲ ..ನಮ್ಮ ಕಷ್ಟ ನಮಗೆ ಕೊನೆಯಾಗಲಿ ಎಂಬ ಅಸೆ ಎಲ್ಲರಲ್ಲೂ ಇದೆ ಆದರೂ ಸಮಾಜದೆದುರು ನಾನೇ ಮೇಲು ನಾನೇ ಮೇಲು ಎಂದು ಬಾಯಿ ಬಾಯಿ ಮಾಡಿಕೊಳ್ಳುತಿರುವ, ನಮಗೇ ದಾಸರು ಹೇಳಿರಬೇಕು.. ಈ ಜೀವನ ಎಂಬುದು ನೀರ ಮೇಲಿನ ಗುಳ್ಳೆ ಅದು ಒಡೆಯುವ ತನಕ ಮಾತ್ರ ಈ ಕ್ಷಣಿಕ ಬಾಳು,…ಈ ಬದುಕನ್ನು ನಾ ಮೇಲೆ ನೀ ಮೇಲೆ ಎಂದು ಹೇಳಿ ಕಳೆದು ಕೊಳ್ಳಬೇಡ ಎಂದು
🙏🙏🙏🙏🙏🙏


🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಪ್ರತಿಕ್ರೀಯೆ ನೇರವಾಗೆ ನನಗೆ ವಾಟ್ಸಪ್ ಮಾಡಿ ..
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now