ಈ ಕ್ಷಣ ನಿನ್ನದು
ಶವ ದಹನ ಭೂಮಿ ಯಲ್ಲಿ ಶವ ವೊಂದು ಬಂದಿತ್ತು ಅದಾಗಲೇ ಇದ್ದ 4 ದಹನ ಕುಂಡ ಗಳಲ್ಲಿ ಹೆಣ ಸುಡುತಿತ್ತು. ಹಾಗಾಗಿ ಮೊದಲ ದಹನ ಕುಂಡ ಸಂಪೂರ್ಣ ಸುಡಲು ಇನ್ನೂ 6 ಗಂಟೆ ಕಾಯ ಬೇಕಿತ್ತು …
ಅಲ್ಲೇ ಸಿಮೆಂಟ್ ದಂಡೆಯ ಮೇಲೆ ಶವವನ್ನು ಹಾರ ಗಳೊಂದಿಗೆ ಮಲಗಿಸಿದ್ದರು..ಶವ ಅದರಷ್ಟಕ್ಕೆ ಯೋಚಿಸುತಿತ್ತಂತೆ …
ಹುಟ್ಟು ವಾಗ ಉಸಿರಿಗಾಗಿ ಕಾದೆ,
ಆಮೇಲೆ ನನ್ನ ಸ್ವಂತ ಹೆಸರಿಗಾಗಿ ಕಾದೆ,ಆಮೇಲೆ ಒಂದಷ್ಟು ವರ್ಷ ಹೆಸರು ಮಾಡ ಲೋಸ್ಕರ ಕಾದೆ,ಬಳಿಕ ಹೆಸರಿನೊಂದಿಗೆ ಬಂದ ಹಣ ಒಟ್ಟುಮಾಡಲು ಒಂದಷ್ಟು ವರ್ಷ ಕಾದೆ,ಬಳಿಕ ಸಂಗ್ರಹಿಸಿದ ಹಣವನ್ನು ಉಳಿಸಿಕೊಳ್ಳಲು ಒಂದಷ್ಟು ವರ್ಷ ಕಾದೆ…ಈ ಕಾಯುವಿಕೆ ಯಲ್ಲಿ ನನ್ನ ಜೀವನದ ಸವಿ ಯನ್ನು ಸವಿಯುವುದನ್ನೇ ಮರೆತಿದ್ದೆ..ಅಷ್ಟರಲ್ಲಿ ಕಾದಿದ್ದ ಯಮ ನನ್ನ ಕರೆಕೊಂಡು ಹೋಗಿದ್ದ …
ಇನ್ನು ಈ ಭೂಮಿಯ ಋಣ ತೀರಿಸೋಣ ವೆಂದರೆ ಇಲ್ಲೂ ಕಾಯಬೇಕಾಗಿದೆ ನೋಡಿ …ನಮ್ಮ ಜನ್ಮ ಎಂದು ಕೊಂಡಿತ್ತಂತೆ ಆ ದೇಹ😔😔 …
ಅಷ್ಟರಲ್ಲಿ ಯಾರೋ ಎತ್ತಿ ಶವ ಕುಂಡ ದೊಳಗೆ ಇಳಿಸಿದ್ದರು ಅದನ್ನು ….
ನಾವೂ ಹೀಗೆ ಅಲ್ಲವೇ ನಾಳೆಯ ಸಂತೋಷಕ್ಕಾಗಿ, ಹಣದ ಹಿಂದೆ ಹೋಗಿ ಇಂದಿನ ಸುಂದರ ಬದುಕನ್ನ ಹಾಳು ಮಾಡಿಕೊಂಡು ನಾಳೆ ಆಗುವ ಮೊದಲೇ ಜೀವನ ಮುಗಿಸಿ …ಕಷ್ಟ ಪಟ್ಟದ್ದನ್ನು ಬೇರೆ ಯಾರೋ ಅನುಭವಿಸುವುದನ್ನು ನೋಡೋ ಬದಲು ಇಂದು ನನ್ನ ದಿನ ನಾಳೆ ಬಂದದ್ದು ಬರಲಿ ಇಂದು ರಾಜ/ರಾಣಿ ಯಂತೆ ಬದುಕುವುದ ಕಲಿಯೋಣವೇ ?
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
(9945130630)
ವಾಟ್ಸಪ್
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯ ನನಗೆ ವಾಟ್ಸಪ್ ಮಾಡಿ .
🔴🔴🔴🔴🔴🔴
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now