ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 13

ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 13

0Shares

ದೇವರಾಗಬೇಕೇ ..ಕಿವಿ ಹೆಚ್ಚು ಉಪಯೋಗಿಸಿ ಹಾಗು ಬಾಯಿ ಯ ಉಪಯೋಗ ಕಮ್ಮಿ ಮಾಡಿ ….🙏🙏

ಅಂದು ಶಾಂತ ಮೂರ್ತಿಯಾದ ಭಗವಂತ ಎಲ್ಲವನ್ನೂ ಕೇಳಿಸಿಕೊಳ್ಳುತಿದ್ದ …ಒಬ್ಬರು ದೇವರಲ್ಲಿ ಭಕ್ತಿ ಪೂರ್ವಕ ಬೇಡಿಕೆ ಇಡುತ್ತಿದ್ದರು,ಇನ್ನೊಬ್ಬರು ನೀನು ಕಟುಕ,ನನ್ನ ತಂದೆ ಯನ್ನು ನನ್ನಿಂದ ಕಸಿದು ಕೊಂಡೆ ಎಂದು ಬಯ್ಯುತಿದ್ದರು ,ಮತ್ತೊಬ್ಬ ನೋಡು ಈ ಬಾರಿ ಪರೀಕ್ಷೆ ಯಲ್ಲಿ ಪಾಸ್ ಆದರೆ ಮಾತ್ರ ನಾನು ಇನ್ನು ನಿನ್ನ ಸನ್ನಿಧಾನಕ್ಕೆ ಬರುವುದು ಎಂದು ಧಮ್ಕಿ ಹಾಕುತಿದ್ದ ಇದೆಲ್ಲ ವನ್ನು ಕೇಳಿಯೂ ಕಲ್ಲಿನಂತೆ ನಗುತ್ತ ನಿಂತಿರುವ ದೇವರನ್ನು ನೋಡಿ ಆತನಿಗೆ ಆಶ್ಚರ್ಯ ವಾಗಿತ್ತು ,ದೇವರಲ್ಲಿ ಕೇಳಿಯೇ ಬಿಟ್ಟಿದ್ದ …..

ಇಷ್ಟೊಂದು ಜನರ ಭಾವನೆ ಗಳನ್ನೂ ಕೇಳಿಯೂ ನೀನು ಅಷ್ಟೊಂದು ತಾಳ್ಮೆ ಯಿಂದ ನಗುತ್ತ ನಿಂತಿರಲು ಹೇಗೆ ಸಾಧ್ಯ? ಎಂದು

ದೇವರು ನಗುತ್ತ ಉತ್ತರಿಸುತ್ತಾನೆ ನಾನಿರುವ ಜಾಗ ಹಾಗಿದೆ, ನಾವು ಕೆಲವು ಉನ್ನತ ಹುದ್ದೆಗೆ ಹೋದಂತೆ ಜಾಸ್ತಿ ತಾಳ್ಮೆ ಇಟ್ಟುಕೊಳ್ಳ ಬೇಕು, ಹುದ್ದೆಯ ಘನತೆ ಕಾಪಾಡುವುದು ಮುಖ್ಯ ವಾಗಿರುತ್ತದೆ ಎರಡನೆಯದಾಗಿ ನಾನು ಕಿವಿಗಳನ್ನು ತೆರೆದು ಬಾಯಿಗಳನ್ನು ಮುಚ್ಚಿ ಕೂತಿರುತ್ತೇನೆ..ಭಕ್ತರ ಎಲ್ಲ ಕಷ್ಟಗಳನ್ನೂ ತೆರೆದ ಕಿವಿಗಳಲ್ಲಿ ಆಲಿಸಿ ಅವನ್ನು ಪರಿಹರಿಸುವ ಉಪಾಯ ಗಳನ್ನೂ ಅವರ ಆತ್ಮಕ್ಕೆ ನೀಡುತ್ತೇನೆ ..ಹಾಗೆ ಮುಚ್ಚಿರುವಬಾಯಿ ನಮ್ಮನ್ನು ಹೆಚ್ಚು ಖುಷಿ ಯಾದಾಗ,ಹಾಗೆ ಹೆಚ್ಚು ಸಿಟ್ಟು ಬಂದಾಗ ಬರುವ ಮಾತು ಗಳಿಂದ ರಕ್ಷಿಸುತ್ತದೆ ಅದೆಷ್ಟೋ ಬಾರಿ ಸಂದಿಗ್ಧತೆಗೆ ದೂಡುವ ಪ್ರಸಂಗ ಗಳಿಂದ ಬಚಾವಾಗಬಹುದು ಕೂಡಾ ಎಂದರಂತೆ ಭಗವಂತ …. ನೋಡಿ ಎಷ್ಟೊಂದು ಮನೋಜ್ಞ ವಾಗಿದೆ ಉತ್ತರ

ನಿಜ ನಾವು ಕೂಡ ಹೆಚ್ಚು ತಾಳ್ಮೆ ಯುತ ವಾಗಿದ್ದು,
ಇತರರನ್ನು,ಅವರ ಕಷ್ಟಗಳನ್ನು ಕೇಳಲು ಕಿವಿಗಳೆರಡೂ ತೆರೆದಿಟ್ಟು,ರಸ್ತೆಯಲ್ಲಿ ಎದುರಿನವ ರಾಂಗ್ ಸೈಡ್ ಅಲ್ಲಿ ನುಗ್ಗಿದಾಗ,ಇನ್ನೊಬ್ಬ ಮೋಸ ಮಾಡಿದಾಗ,ಹಾಗೆ ಇನ್ನೊಬ್ಬರಿಗೆ ಮೋಸ ಮಾಡುವ ಸಲುವಾಗಿ ತಕ್ಷಣ ಪ್ರತಿಕ್ರೀಯೆ ತೋರುವುದನ್ನು ನಿಲ್ಲಿಸಬೇಕಿದೆ ..ಹಾಗಾದರೆ ಮಾತ್ರ ನಾವೂ ಕೂಡ ಶಾಂತ ಮೂರ್ತಿ ಯಾಗ ಬಲ್ಲೆವು..ನೆನಪಿಡಿ ದೇವರಾಗಲು ನೀವು ಮಾಡ ಬೇಕಾದ್ದಿಷ್ಟೇ

ಕಿವಿ ಹೆಚ್ಚು ಉಪಯೋಗಿಸಿ ಹಾಗು ಬಾಯಿಯ ಉಪಯೋಗ ಕಮ್ಮಿ ಮಾಡಿ


🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
(ನಿಮ್ಮ ಪ್ರತಿಕ್ರೀಯೆ ಗಳನ್ನೂ ನೇರವಾಗಿ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ )
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now