ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 12

ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 12

0Shares

ಮರ ಭೂಮಿಗೆ ಭಾರ ವಾದರೆಕತ್ತರಿಸಬಹುದು, ನರ (ಮನುಷ್ಯ) ಭೂಮಿಗೆ ಭಾರವಾದಾಗ ??

ವಾಮನ ರಾಯರಿಗೆ ವಯಸ್ಸು 91, ಈಗಲೂ ಬೆಳಿಗ್ಗೆ ಒಂದು ಗಂಟೆ ವಾಕ್ ಮಾಡುತ್ತಾರೆ..ಅಂದು ವಾಕ್ ಮಾಡಿ ಪಾರ್ಕ್ ನ ಸಿಮೆಂಟ್ ಕುರ್ಚಿ ಮೇಲೆ ಕೂತಿದ್ದರು..ಅಲ್ಲೇ ಸಮೀಪದಲ್ಲಿ ದೊಡ್ಡ ಆಲದ ಮರವೊಂದು ಅರ್ಧ ಸತ್ತಿತ್ತು ಅದೆಷ್ಟೋ ದಶಕ ಗಳಷ್ಟು ವರುಷ ಅದೆಷ್ಟೋ ಸಾವಿರ ಮಂದಿಗೆ ನೆರಳು ಕೊಟ್ಟ ಮರ ಇಂದು ಎಲೆ ಉದುರಿಸಿ ಕೊಂಡು ಈಗಲೋ,ಆಗಲೋ ಬೀಳುವ ಸ್ಥಿತಿಯಲ್ಲಿದೆ ಅದರ ಸುತ್ತ ಒಂದಷ್ಟು ಜನ ಸೇರಿದ್ದರು ..ಮರ ವನ್ನು ಕಡಿದು ಉರುಳಿಸಲು ಸಜ್ಜಾಗಿದ್ದರು.ಅದೆಷ್ಟೋ ಮಕ್ಕಳು ,ಜನರು ಇರುವಾಗ ಮರ ಬಿದ್ದರೆ ಅವರ ಜೀವಹಾನಿ ಯಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಇಷ್ಟು ದೊಡ್ಡ ಮರಕ್ಕೆ ಗರಗಸ ಹಾಕಲು ನಿರ್ಧರಿಸಿತ್ತು..ಜನರೆಲ್ಲಾ ಗರಗಸ ದೊಂದಿಗೆ ತಯಾರಾಗಿಯೇ ಬಂದಿದ್ದರು …..

*ಕಳೆದ ವರ್ಷ ಮಡದಿಯ ಅಕಾಲಿಕ ಮರಣ ದ ನಂತರ ರಾಯರು ತುಸು ಮಂಕಾಗಿದ್ದರು. ಇತೀಚಿಗೇಕೋ ಒಂಟಿತನ ಬಹಳಷ್ಟು *ಕಾಡುತಿತ್ತು😔 ..ಮಕ್ಕಳು ಮೊಮ್ಮಕ್ಕಳು,ಮರಿಮಕ್ಕಳು,ಸೊಸೆ ಅಳಿಯಂದಿರು ಎಲ್ಲರೂ ಅವರವರ ಪ್ರಪಂಚ ದಲ್ಲಿ ಬುಸ್ಸಿ ಆಗಿದ್ದರು*
ಎಷ್ಟೋ ಬಾರಿ ಊಟ ಮಾಡಿದ್ದೆಯೋ,ಇಲ್ಲವ ಎಂದು ವಿಚಾರಿಸುವುದಿರಲಿ ಮನೆಯ ಯಾವುದೇ ದೊಡ್ಡ ದೊಡ್ಡ ಸಮಾರಂಭ ಕ್ಕೆ ಕೂಡ ರೂಪು ರೇಷೆಯ ಬಗ್ಗೆ ಮಾತುಕತೆಗೂ ಕರೆಯುತ್ತಿರಲಿಲ್ಲ …ಒಟ್ಟಿನಲ್ಲಿ 90 ರ ನಂತರ ಬದುಕು ನರಕ ಸದೃಶ ವಾಗಿತ್ತು ..ಮಡದಿ ಪತಿವ್ರತೆ ಯಾಗಿಯೇ ಸತ್ತಿದ್ದಳು ನಾನೂ ಅಂದೇ ಸತ್ತಿದ್ದರೆ ಒಳ್ಳೆಯ ಮರಣ ಸಿಗುತ್ತಿತ್ತೋ ಏನೋ ಆದರೆ ಇಂದು ನಾನೇನಾದರೂ ಹಾಸಿಗೆ ಹಿಡಿದರೆ ನನ್ನ ಸೇವೆ ಮಾಡಲು ಯಾರೂ ಇರಲಿಲ್ಲ ಇಲ್ಲಿ .

ಆ ಸನ್ನಿವೇಶ ನೆನೆದರೆ ಒಂದು ಕ್ಷಣ ಹೆದರಿಕೆ ಆಗುತಿತ್ತು ರಾಯರಿಗೆ …ದೇವರಲ್ಲಿ ಕೈ ಮುಗಿದು ಮನಸ್ಸಲ್ಲೇ ಬೇಡಿಕೊಂಡರು ದೇವ ಒಳ್ಳೆಯ ಸಾವು ಕೊಡು ನನಗೆ ಎಂದು …ಆದರೂ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು …ಸಾವು ದೇವರ ಆಟವೇ ಹೊರತು ನಮ್ಮ ಆಸೆ ಅಲ್ಲ ಎಂದು ….ಅಷ್ಟರಲ್ಲಿ ದೊಡ್ಡ ಶಬ್ದದೊಂದಿಗೆ ನೆಲಕ್ಕುರುಳಿತ್ತು ಆ ಆಲದ ಮರ …..

ಬದುಕು ಎಷ್ಟು ಮುಖ್ಯವೋ ಅಷ್ಟೇ ಸಾವೂ ಕೂಡ ..ಕಾಲಿ ಕೈ ಯಲ್ಲಿ ಬಂದವರೆಲ್ಲ ಒಂದು ದಿನ ಹೋಗಲೇ ಬೇಕು ..ಆದರೆ ನಮ್ಮ ವಿದಾಯ ಗೌರವ ಯುತ ವಾಗಿರಲಿ …ಸುಖಮರಣ ನಮ್ಮದಾಗಿರಲಿ ಎಂಬುದಷ್ಟೇ ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ…🙏🙏🙏🙏
🔴🔴🔴🔴🔴🔴


ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
( ನಿಮ್ಮ ಪ್ರತಿಕ್ರಿಯೆ ಗಳನ್ನೂ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ)….

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now