ಮತ್ಸ್ಯ ಗಂಧ ಟ್ರೈನ್ ತಪ್ಪಿದ್ದು ಒಳ್ಳೇದೇ ಆಗಿತ್ತು
ಆತ ದೃಢ ಮನಸ್ಸು ಮಾಡಿದ್ದ ಇಂದು ಜೀವನ ಮುಗಿಸಬೇಕು ಎಂದು, ಮತ್ಸ್ಯ ಗಂಧ ಟ್ರೈನ್ ಹಳಿ ಗೆ ತಲೆ ಇಟ್ಟು ಬಿಡಬೇಕೆಂದು ನಿರ್ಧರಿಸಿ ಬಿಟ್ಟಿದ್ದ 😔 ..ಅಸೆ ಇಂದ ಸಾಲ ಮಾಡಿ 3 ವ್ಯಾಪಾರ ಆರಂಭಿಸಿದ್ದ ಒಂದು ಹೋಟೆಲ್ ,ಇನ್ನೊಂದು ಮಸಾಲೆ ಪೌಡರ್ ತಯಾರಿಯ ಚಿಕ್ಕ ಕಾರ್ಖಾನೆ ಮತ್ತೊಂದು ಸಾವಯವ ಸ್ಟೋರ್ ಮೂರೂ ಕೈಕೊಟ್ಟಿತ್ತು ..ಇದೀಗ 5ನೆಯ ತಿಂಗಳು ಮಾಡಿದ್ದ ಸಾಲ ಖಾಲಿಯಾಗಿತ್ತು. ನಾಳೆಯ ದಿನ ಹೋಟೆಲ್ನ ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು ನಿಜಕ್ಕೂ ಹಣ ಇರಲಿಲ್ಲ ಇವನ ಬಳಿ 😔ಮುಚ್ಚಲು ಮನಸ್ಸಿರಲಿಲ್ಲ ಚುಚ್ಚಿ ಮಾತಾಡುವ ಮಂದಿ ಇಂದ ಬೇಸತ್ತಿದ್ದ ಅಷ್ಟರಲ್ಲಿ ರೈಲ್ವೆ ಸ್ಟೇಷನ್ ಬಂದಿತ್ತು …
ಬೇಗ ಬೇಗ ಓಡಿದ…ಅಲ್ಲಿ ಅಂಗಡಿಯೊಂದರಲ್ಲಿ ಕೇಳಿದ್ದ ಸರ್ ..ಮತ್ಸ್ಯಗಂದ್ಯಾ ಎಕ್ಸ್ಪ್ರೆಸ್ ಬರಲು ಎಷ್ಟು ಹೊತ್ತಿದೆ” ಎಂದು . ಅಯ್ಯೋ ಸರ್ ಅದು ಹೋಗಿ 5 ಮಿನ್ ಆಗಿದೆ ಎಂದಿದ್ದ ಅಂಗಡಿಯವ ..ಅವನಿಗೇನು ಗೊತ್ತು ಇವ ಹೊರಟದ್ದು ಸಾಯಲು ಎಂದು😀,ಬೇಸರ ಆದರೂ ತೋರಿಸಲಿಲ್ಲ ಈತ ಸಾಯಲು ಮತ್ಸ್ಯಗಂಧವೇ ಬೇಕೆಂದೇನೂ ಇಲ್ಲವಲ್ಲ? ..ನೆಕ್ಸ್ಟ್ ಎಷ್ಟು ಗಂಟೆಗೆ ಮತ್ತೆ ಕೇಳಿದ “ಇನ್ನೊಂದರ್ಧ ಗಂಟೆ ಸರ್ ಕುರ್ಲಾ ಎಕ್ಸ್ಪ್ರೆಸ್ ಇದೆ” ಎಂದ ಅಂಗಡಿಯವ …
ಸಾಯುವ ಮಹೂರ್ತ ಬದಲಾಗಿದೆ ಅಷ್ಟೇ ಸೀದಾ ಹೋಗಿ ಹಳಿ ಪಕ್ಕದ ಸಿಮೆಂಟ್ ಬೆಂಚ್ ನ ಮೇಲೆ ಕೂತ..ಟ್ರೈನ್ ಬರೋವಾಗ ಓಡಿ ಹೋಗಿ ಹಳಿ ಮೇಲೆ ಮಲಗಬೇಕೆಂದು ಎಂದುಕೊಂಡ..ಈ ಬಾರಿ ತಪ್ಪಿಸಿ ಕೊಳ್ಳಬಾರದು ಎಂದು ನಿರ್ಧರಿಸಿದ್ದ ..
ಆದರೆ ಈ ಅರ್ಧ ಗಂಟೆ ಯಲ್ಲ..ಅಲ್ಲಿ ಕೆಲವು ವಿಚಿತ್ರಗಳನ್ನು ಗಮನಿಸಿದ ಅಲ್ಲೊಬ್ಬಳು 2 ಕಣ್ಣು ಕಾಣದ ಹುಡುಗಿ ಹಾಡುತಿದ್ದಳು, ಜನರು ಅವಳ ಹಾಡಿಗೆ ಹಣ ಕೊಡುತಿದ್ದರು ,ಒಬ್ಬ ಒಂದೇ ಕಾಲಿರುವ ವ್ಯಕ್ತಿಯೊಬ್ಬ ಅಲ್ಲಿ ಬಂದ ಪ್ರಯಾಣಿಕರ ಲಗೇಜುಗಳನ್ನೂ ಹೊತ್ತು ಸಾಗುತಿದ್ದ ದೊಡ್ಡ ಮರದ ಕೋಲೊಂದರ ಸಹಾಯದಿಂದ ,ಅಲ್ಲಿ ಒಂದೇ ಕೈ ಇರುವ ವ್ಯಕ್ತಿಯೊಬ್ಬ ಪೇಪರ್ ಮಾರುತಿದ್ದ ..ಕಣ್ಣು,ಕಾಲು ಕೈ ಇಲ್ಲದ ವ್ಯಕ್ತಿಗಳು ಬದುಕಲು ಹೋರಾಡುತಿದ್ದರೆ ಎಲ್ಲ ಸರಿ ಇರುವ ತಾನು ಸಾಯಲು ಕಾಯುತಿದ್ದೆ ..ತನ್ನ ಬಗ್ಗೆ ಅಸಹ್ಯ ವಾಗಿತ್ತು ಅವನಿಗೆ ….
ಇಲ್ಲ ನಾನು ಸಾಯುವುದಿಲ್ಲ
ಈ ಬದುಕನ್ನು ಬದುಕಿ ತೋರಿಸುತ್ತೇನೆ ,ನಿಂದಿಸುವ ಜನರ ಬಗ್ಗೆ ಇನ್ನು ಎಂದಿಗೂ ಯೋಚಿಸುವುದಿಲ್ಲ ಈ ಬರಿ ಇನ್ನಷ್ಟು ಗಟ್ಟಿ ಗೊಂಡಿದ್ದ..
ಸೋಲಿಗೆ ಕಾರಣ ಗಳೇನು ಮತ್ತೆ ಆ ಕಾರಣ ಸರಿಪಡಿಸಿ ಕೊಂಡು ಪ್ರಯತ್ನಿಸುವೆ ಎಂದವನೇ ಅಲ್ಲಿಂದ ಎದ್ದಿದ್ದ
ದೇವರಿಗೊಂದು ಕೈಮುಗಿದು ಏನೋ ನೆನೆದು ಕೊಂಡ ಮತ್ಸ್ಯಗಂಧ ಟ್ರೈನ್ ತಪ್ಪಿದ್ದು ತನಗೆ ಒಳ್ಳೆದೇ ಆಗಿತ್ತು ಎಂದು …😀😀
ಅಷ್ಟರಲ್ಲಿ ದೊಡ್ಡ ಸೈರನ್ ನೊಂದಿಗೆ ಕುರ್ಲಾ ಎಕ್ಸ್ಪ್ರೆಸ್ ಬರುತಿತ್ತು …ಅಲ್ಲಿ ನಿಂತು ಮತ್ತೆ ಹೋಗಿತ್ತು ಯುವಕ ನೋಡುತ್ತಾ ನಿಂತಿದ್ದ ಆ ಹಳಿಗಳನ್ನು …ಅಂಗಡಿ ಯವ ನೂ ನೋಡುತ್ತಾ ನಿಂತಿದ್ದ ಯುವಕನನ್ನು 🙏🙏🙏🙏
ಹೌದು ಈ ಬದುಕು ದೇವರು ಕೊಟ್ಟ ಅಮೂಲ್ಯ ಬಹುಮಾನ
ಅದನ್ನು ಚಿಕ್ಕ ಪುಟ್ಟ ಕಾರಣಕ್ಕೆ ಮುಗಿಸುವ ಮೊದಲು 100 ಸಲ ಯೋಚಿಸಿ,ಯಾಕೆಂದರೆ ಆ ಒಂದು ಕ್ಷಣ ತಪ್ಪಿಸಿ ಕೊಂಡರೆ ಮತ್ತೆ ನೀವು ಸಾಯುವ ಮನಸ್ಸು ಮಾಡಲಾರಿರಿ…..ನೀವು ಅದೃಷ್ಟ ವಂತರಾದರೆ ಮಾತ್ರ
ಟ್ರೈನ್ ಮಿಸ್ ಆಗಬಹುದು .ಅಲ್ಲವೇ????🙏🙏🙏🙏🙏🙏
🔴🔴🔴🔴🔴🔴
ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
(ಇಂತಹ ಸಣ್ಣ ಕಥೆ ಗಳು ನಿಮಗೂ ಬೇಕೇ , ನನಗೆ ವಾಟ್ಸಪ್ ಮಾಡಿ )
🔴🔴🔴🔴🔴🔴
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now