ಕಳ್ಳ ತನ್ನ ಜೀವ,ಜೀವನಕ್ಕಾಗಿ ಮಾತ್ರ ಕದಿಯುತ್ತಾನೆ …
ಕಳ್ಳ ಸನ್ಯಾಸಿ ಬೇರೆಯವರ ಜೀವ, ಜೀವನ ವನ್ನೇ ಕದಿಯುತ್ತಾನೆ.
(ಸನ್ಯಾಸಿ ಅಂದರೆ, ಧರ್ಮಕ್ಕಾಗಿ ಸಂಸಾರ ತ್ಯಾಗ ಮಾಡಿದೆ ಎಂದು ಹೇಳಿಕೊಳ್ಳುವವ,ಇಂತಹ ಸನ್ಯಾಸಿಗಳು ಎಲ್ಲ ಧರ್ಮದಲ್ಲೂ ಇರುತ್ತಾರೆ )
ನಾವೆಲ್ಲ ಚಿಕ್ಕಂದಿನಲ್ಲಿ ಓದಿದ ಕತೆ ನೆನಪಿರಬೇಕು ಅಲ್ಲವೇ. 2 ಗಿಳಿ ಮರಿಗಳು ಒಂದು ಸನ್ಯಾಸಿಯ ಮನೆಯಲ್ಲಿ ಇನ್ನೊಂದು ಕಳ್ಳನ ಮನೆಯಲ್ಲಿ ಬೆಳೆದಿತ್ತು ,ಮತ್ತೆ ಅವೆರಡೂ ಸಭ್ಯ ಮನುಷ್ಯ ನೊಬ್ಬನ ಕೈಗೆ ಬಂತು ..ವಿಶೇಷ ವೆಂದರೆ ಸನ್ಯಾಸಿ ಯ ಬಳಿ ಇದ್ದ ಗಿಳಿ ಹೋಗಿ ಸ್ವಾಮಿ ,ಬನ್ನಿ ಸ್ವಾಮಿ ಎಂದು ಮಾತಾಡಿದ್ದರೆ,ಕಳ್ಳನ ಮನೆಯ ಗಿಳಿ ಲೋಫರ್ ಬಂದ, ಕಚಡಾ ನನ್ ಮಗ ಬಂದಎನ್ನುತಿತ್ತಂತೆ..ಕೊನೆಯಲ್ಲಿ ನೀತಿ ಸಹವಾಸ ದಿಂದ ವ್ಯಕ್ತಿ ಕೆಡುತ್ತಾನೆ ಎಂದು ಸನ್ಯಾಸಿ ಹಾಗು ಕಳ್ಳ ನ ಉದಾಹರಣೆ ಕೊಟ್ಟಿದ್ದರು …ಆದರೆ ಆ ಕಾಲದ ಸನ್ಯಾಸಿ ನಿಜಕ್ಕೂ ಒಳ್ಳೆಯವರಾಗೇ ಇದ್ದರು ಆದರೆ ಈಗ ಕಾಲ ಬದಲಾಗಿದೆ ಎಲ್ಲ ಕಳ್ಳ ಸನ್ಯಾಸಿಗಳೇ ತುಂಬಿದ್ದಾರೆ ಇದೇ ಕತೆಯ ಮುಂದುವರೆದ ಭಾಗ ಹೇಳುತ್ತೇನೆ ಕೇಳಿ ….
ಆ ಗಿಳಿ ಗಳನ್ನು ಕೊಂಡು ತಂದ ವ್ಯಕ್ತಿ ಫ್ಲಾಟ್ ಅಲ್ಲಿ 18 ನೇ ಫ್ಲೋರ್ ಅಲ್ಲಿ ವಾಸವಾಗಿದ್ದಳು,ಆ ಗಿಳಿ ಗಳು ಮನೆಗೆ ಬಂದ ದಿನದಿಂದ ಕೆಲವು ವಿಚಿತ್ರ ಘಟನೆ ಗಳು ನಡೆಯಲಾರಂಭಿಸಿದ್ದವು ..ಆ ಗಿಳಿಗಳನ್ನು ದಿನ ದಲ್ಲಿ 5 ಗಂಟೆ ಮನೆ ಒಳಗೆ ತಿರುಗಾಡಲು ಬಿಡಲಾಗಿತ್ತು.ಸ್ವಾತಂತ್ರ್ಯ ವಾಗಿ ಹಾರಾಡಲಿ ಎಂಬುದು ಮನೆಯ ಒಡತಿಯ ಅಸೆ ಯಾಗಿತ್ತು ..
ಅಂದು ಮನೆಯಲ್ಲಿ ಜೋರು ಜೋರಾಗಿ ಗಲಾಟೆ ಕೇಳುತಿತ್ತು ಮನೆ ಒಡತಿಯ ಟೇಬಲ್ ಮೇಲೆ ಇದ್ದ ಬಂಗಾರದ ಉಂಗುರ ಕಾಣೆಯಾಗಿತ್ತು,ಮನೆ ಯೊಡತಿಗೆ ಕೆಲಸದವಳ ಮೇಲೆ ಸಂದೇಹ ವಿತ್ತು ಇದ್ದ ಮೂವರಲ್ಲಿ ಕದ್ದವರು ಯಾರು ಎಂಬುದು ಅವಳ ವಾದ ವಾಗಿತ್ತು ….
ವಾದ ವಿವಾದ ಜೊರುಜೋರಾಗ ಹತ್ತಿತು …..
ಕೊನೆಗೆ ಮನೆ ಯಲ್ಲೇ ಇರುವ CC tv ನೋಡುವ ಸಲಹೆ ಗೆ ಒಪ್ಪಿಕೊಂಡರು ಇಬ್ಬರೂ..
CCTV ಆನ್ ಆಯಿತು ..ಇಬ್ಬರೂ ಆಶ್ಚರ್ಯದಿಂದ ಅಷ್ಟೇ ಕುತೂಹಲದಿಂದ ಕ್ಷಣ ಕ್ಷಣದ ದೃಶ್ಯ ನೋಡುತಿದ್ದರು ಇವತ್ತು ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿಯುತ್ತೇನೆ ಎಂದು ಕೊಂಡಿದ್ದಳು ಮನೆಯೊಡತಿ..
ಆದಿನ ಬೆಳಿಗ್ಗೆ ಯಿಂದ ಆ ಕಳ್ಳ ನ ಮನೆಯ ಗಿಳಿ 3 ವಸ್ತು ಗಳನ್ನು ಕದ್ದಿತ್ತು,ಬೆಳಿಗ್ಗೆ ಯಾರಿಗೂ ಗೊತ್ತಿಲ್ಲದಂತೆ ಕಿಚನ್ ಇಂದ ಒಂದು ಹಸಿರು ಮೆಣಸು ,ಮದ್ಯಾಹ್ನ 2 ಪಾಲಕ್ ಸೊಪ್ಪು ,ಸಂಜೆ 2 ಪುದಿನ ಸೊಪ್ಪನ್ನು ಕದ್ದು ತಿಂದಿದ್ದು Cc tv ಅಲ್ಲಿ ಅದು ಸ್ಪಷ್ಟವಾಗಿ ಕಾಣುತಿತ್ತು …
ಆದರೆ ಆ ಸನ್ಯಾಸಿ ಯ ಮನೆಯಲ್ಲಿ ಬೆಳೆದ ಗಿಳಿ ಅಂದು ಮದ್ಯಾಹ್ನ ಟೇಬಲ್ ಮೇಲೆ ಇಟ್ಟಿದ್ದ ರಿಂಗ್ ಅನ್ನು ಕೊಕ್ಕಲ್ಲಿ ಕಚ್ಚಿ ತಂದು ಕಿಟಕಿಯ ಪರದೆಯ ಚಿಕ್ಕ ರಂದ್ರದ ಮೂಲಕ ಹೊರಗೆ ಎಸೆದಿತ್ತು .ಅದು18 ನೆಯ ಫ್ಲೋರ್ ನಿಂದ ಕೆಳಗೆ ಬಿದ್ದಿತ್ತು ಆಮೇಲೆ ಗುಟ್ಟಾಗಿ ಏನು ತಿಳಿಯದವರಂತೆ ಕೂತು ಇವರಿಬ್ಬರ ಗಲಾಟೆ,ಜಗಳ ವನ್ನು ಕೇಳುತ್ತ ಖುಷಿ ಯಾಗಿ ಸಂತೋಷ ಪಡುತಿತ್ತು🥱🥱🥱 ….
ಇಬ್ಬರಿಗೂ ಶಾಕ್ ಆಗಿತ್ತು🥱 ಯಾರೂ ಊಹಿಸಿರಲಿಲ್ಲ ಕಳ್ಳ ಹೀಗೂ ಸಿಕ್ಕಿ ಬೀಳಬಹುದು ಎಂದು,ಅಷ್ಟೊಂದು ಉತ್ತಮ ವಿಚಾರ ಗಳನ್ನು ಮಾತನಾಡುವ ಈ ಸಭ್ಯ ಗಿಳಿ ಇಂತಹ ಕೆಲಸ ಮಾಡುವುದು ಊಹಿಸಲು ಅಸಾದ್ಯವಿತ್ತು ಅಂದೇ ಆ ಗಿಳಿ ಯನ್ನು ಅಂದಿನಿಂದ ಪಂಜರದಿಂದ ಹೊರ ಬಿಡದಿರಲು ನಿರ್ದರಿಸಲಾಯಿತು
ಆದರೂ ನೋಡಿ ಇಲ್ಲಿ ನೀತಿ ಕತೆಯ ಸಾರಾಂಶವೇ ಬದಲಾಗಿತ್ತು 🥱🥱..
ಲೋಕದಲ್ಲಿ ಸಭ್ಯರಂತೆ ಮುಖವಾಡ ಹಾಕಿದವರೆಲ್ಲ ಸನ್ಯಾಸಿ ಗಳಾಗಲಾರರು..ಹಾಗೆ ಕಳ್ಳರಂತೆ ತೋರುವವರೆಲ್ಲ….ಕಳ್ಳರಾಗಿರರು ಅಲ್ಲವೇ ???👌👌
ಹೌದು ಧರ್ಮದ ಹೆಸರಲ್ಲಿ ಜನರನ್ನು ಪಕ್ಷ ,ಪ್ರಾಂತ್ಯ ,ಭಾಷೆ,ದೇವರ ಹೆಸರಲ್ಲಿ ವಿಭಾಗಿಸಿ,ಪರಸ್ಪರ ಕಚ್ಚಾಡು ವಂತೆ ಮಾಡಿ ದೂರದಲ್ಲಿ ಕೂತು ಆನಂದ ಸವಿಯುವ ಈ ಧರ್ಮ ಕ್ಕಾಗಿ ಸಂಸಾರ ಸುಖ ತ್ಯಾಗ ಮಾಡಿದೆ ಎಂದು ಸುಳ್ಳು ಹೇಳಿಕೊಳ್ಳುತ್ತಾ ಮೆರೆದಾಡುವ ಈ ಕಳ್ಳ ಸನ್ಯಾಸಿಗಳು ಹಿಂದೂ ,ಕ್ರೈಸ್ತ,ಮುಸಲ್ಮಾನ ಮೂರೂ ಪಂಗಡ ಗಳಲ್ಲಿ ಇರುವುದು ಪವಿತ್ರ ಗ್ರಂಥ ಗಳನ್ನೂ ತಪ್ಪು ತಪ್ಪಾಗಿ ಜನರಿಗೆ ಬೋಧಿಸಿ ಅವರ ತಲೆಗೆ ತನ್ನ ಜಾತಿ ಶ್ರೇಷ್ಠ ,ಅವನದ್ದು ನಿಕೃಷ್ಟ ಎಂದು ಹೇಳಿಕೊಟ್ಟು ಮತಾಂತರ,ರಕ್ತಪಾತ ಕ್ಕೆ ಕರೆ ಕೊಟ್ಟು ಅದೆಷ್ಟೋ ಮುಗ್ಧ ಜೀವಗಳನ್ನು ಬಲಿಕೊಟ್ಟು ತಾವು ಮಾತ್ರ ಗುಪ್ತವಾಗಿ ಎಲ್ಲಾ ಸುಖವನ್ನು ಅನುಭವಿಸುವ ಮಂದಿ ಯನ್ನು ಶಾಶ್ವತ ವಾಗಿ ಪಂಜರದೊಳಗಿಟ್ಟಾಗ ಮಾತ್ರ ಸಮಾಜ ಉಳಿಯಬಹು😡😡……
ಹಾಗಾಗಿ ನೆನಪಿಡಿ…
ಕಳ್ಳ ತನ್ನ ಜೀವ,ಹಾಗು ಜೀವನ ಕ್ಕಾಗಿ ಮಾತ್ರ ಕದಿಯುತ್ತಾನೆ ..
ಕಳ್ಳ ಸನ್ಯಾಸಿ ಬೇರೆಯವರ ಜೀವ ,ಜೀವನವನ್ನೇ ಕದಿಯುತ್ತಾನೆ😡😡 ……
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
(ನಿಮ್ಮ ಅಭಿಪ್ರಾಯ ನೇರವಾಗಿ ನನ್ನ ವಾಟ್ಸಪ್ ಸಂಖ್ಯೆಗೆ ಕಳುಹಿಸಿ )
🔴🔴🔴🔴🔴🔴
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now