
ಬ್ರಹ್ಮಾವರ, 1 ಮಾರ್ಚ್ 2025: ಫೆಬ್ರವರಿ 2025ರಲ್ಲಿ ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಕಾಲೇಜು ನಲ್ಲಿ ಎನ್‌ಸಿಸಿ B ಮತ್ತು C ಪ್ರಮಾಣಪತ್ರ ಪರೀಕ್ಷೆಗಳು ಯಶಸ್ವಿಯಾಗಿ ನಡೆಸಲಾಯಿತು.

B ಪ್ರಮಾಣಪತ್ರ ಪರೀಕ್ಷೆ 15 ಮತ್ತು 16ನೇ ಫೆಬ್ರವರಿ 2025ರಂದು ನಡೆಯಿತು, ಇದರಲ್ಲಿ ಉಡುಪಿ 21 KAR BN NCC ಘಟಕದ ಸುಮಾರು 450 ಎನ್‌ಸಿಸಿ ಕ್ಯಾಡೆಟ್ಗಳು ಭಾಗವಹಿಸಿದರು. C ಪ್ರಮಾಣಪತ್ರ ಪರೀಕ್ಷೆ 22 ಮತ್ತು 23ನೇ ಫೆಬ್ರವರಿ 2025ರಂದು ನಡೆದಿದ್ದು, ಸುಮಾರು 400 ಕ್ಯಾಡೆಟ್ಗಳು ಪಾಲ್ಗೊಂಡರು.

ಈ ಪರೀಕ್ಷೆಗಳ ಯಶಸ್ವಿ ಆಯೋಜನೆ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ , ಶ್ರೀ ವಿಘ್ನೇಶ್ ಪಡಿಯಾರ್ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಆಯೋಜನೆಯಲ್ಲಿ ಸಹಕಾರ ನೀಡಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























