ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರದಲ್ಲಿ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ

ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರದಲ್ಲಿ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ

0Shares

ಬ್ರಹ್ಮಾವರ: ಸೇಂಟ್ ಮೇರೀಸ್ ಸಿರಿಯನ್ ಕಾಲೇಜು (SMS), ಬ್ರಹ್ಮಾವರ, IQAC ,ಕೆ ಎಂ ಸಿ ಮಣಿಪಾಲ , ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ನವೆಂಬರ್ 20, 2024, ಬುಧವಾರ, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು . ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ. ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೆ. ಫಾ. ಎಂ.ಸಿ ಮಥೈ ಇವರು ವಹಿಸಿದ್ದರು. ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇಲ್ಲಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಅಖಿಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇದರ ವೈದ್ಯಕೀಯ ಸಮುದಾಯ ಕಾರ್ಯಕರ್ತರಾದ ಕು.ಸ್ವಾತಿ, ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿ , ಲಯನ್ಸ್ & ಲಿಯೋ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀ ಜಯರಾಮ ನಾಯಕ್ , ಬಂಟರ ಯನೆ ನಾಡವರ ಸಂಘ, (ರಿ.) ಬ್ರಹ್ಮಾವರ ಇದರ ಅಧ್ಯಕ್ಷರಾದ ಶ್ರೀ ಶ್ರೀಧರ ಶೆಟ್ಟಿ, ಓಂಕಾರ ಸಂಜೀವಿನಿ – ಗ್ರಾಮ ಪಂಚಾಯತ್ ಲೆವೆಲ್ ಒಕ್ಕೂಟ, ವಾರಂಬಳ್ಳಿ ಇದರ ಅಧ್ಯಕ್ಷರಾದ ಶ್ರೀಮತಿ ಹೇಮ ಜಗನ್ನಾಥ್ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಬಿ.ಆರ್, ಅಂಬೇಡ್ಕರ್ ಯುವಕ ಮಂಡಲ (ರಿ.) ತೇಂಕು ಬಿರ್ತೀಯ ಅಧ್ಯಕ್ಷರಾದ ಶ್ರೀ ಹರೀಶ್, ಬ್ರಹ್ಮಾವರ ಕೃಷಿ ಸೇವಾ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕರಾದ ಶ್ರೀ ಬಿರ್ತಿ ರಾಜೇಶ್ ಶೆಟ್ಟಿ , ಮಾರ್ತಾ ಮರಿಯಮ್ ಸಮಾಜ – ಎಸ್‌ಎಮ್‌ಎಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಶ್ರೀಮತಿ ಆಶಾ ಅಲೆನ್ ವಾಜ್, ಗೈನ್ಟ್ ಗ್ರೂಪ್ ನ ಅದ್ಯಕ್ಷರಾದ ಸುಂದರ್ ಪೂಜಾರಿ, ಎಸ್.ಎಂ.ಎಸ್.ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಅಲ್ವರಿಸ್ ಡಿಸಿಲ್ವ , ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೊಡ್ರಿಗಸ್ ಜೆ. ಉಪಪ್ರಾಂಶುಪಾಲ ಶ್ರೀ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಭಾಷಣದಲ್ಲಿ ಡಾ. ರಾಬರ್ಟ್ ರೋಡ್ರಿಗಸ್, ಸೇಂಟ್ ಮೇರೀಸ್ ಸಿರಿಯನ್ ಕಾಲೇಜಿನ ಪ್ರಾಂಶುಪಾಲರು, ಶಿಬಿರದ ಮಹತ್ವವನ್ನು ಉಲ್ಲೇಖಿಸಿದರು. ನಂತರ, ಬಿರ್ತೀ ರಾಜೇಶ್ ಶೆಟ್ಟಿ ಅವರು ಶಿಬಿರವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಸಮುದಾಯ ವೈದ್ಯಕೀಯ ವಿಭಾಗ, ಕೆ ಎಂ ಸಿ ಮಣಿಪಾಲದ ಮುಖ್ಯಸ್ಥರಾದ ಡಾ ಅಶ್ವಿನಿ ಕುಮಾರ್ ಹಾಗೂ ಪ್ರಾಧ್ಯಾಪಕರಾದ ಡಾ ರಂಜಿತಾ ಶೆಟ್ಟಿಯವರ ನೇತೃತ್ವದಲ್ಲಿ ಡಾ ಅಖಿಲಾ ಅವರು ಮಹಿಳೆಯರಲ್ಲಿನ ಕ್ಯಾನ್ಸರ್ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು ಮತ್ತು ಅವರ ತಂಡದಿಂದ ಕ್ಯಾನ್ಸರ್ ತಪಾಸಣೆಯನ್ನು ನಡೆಸಲಾಯಿತು. 90 ಮಹಿಳೆಯರು ಈ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು.

ಪ್ರಶಾಂತ್ ಶೆಟ್ಟಿ ನಿರೂಪಿಸಿ, ಭರತ್ ರಾಜ್ ಎಸ್. ನೇಜರ್ ಸ್ವಾಗತಿಸಿ ಮತ್ತು ವಿಘ್ನೇಶ್ ಪಡಿಯಾರ್ ಅವರು ಧನ್ಯವಾದಗಳನ್ನು ಸಲ್ಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now