
ಬ್ರಹ್ಮಾವರ, ಜೂನ್ 12, 2026:
ಎಸ್‌ಎಂಎಸ್ ಕಾಲೇಜು ಬ್ರಹ್ಮಾವರದ ಐಕ್ಯುಎಸಿ ಹಾಗೂ ಮದರ್ ಸ್ವಯಂ ಸೇವಾ ಗ್ರಾಮೀಣ ಅಭಿವೃದ್ದಿ ಸಂಸ್ಥೆ (ರಿ.), ರೋಣ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 12, 2026 ರಂದು ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ KYC ಮೋಸ ಮತ್ತು ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಫೈನಾನ್ಷಿಯಲ್ ಇನ್‌ಕ್ಲೂಷನ್ ಫಂಡ್ ಅನುದಾನದಡಿ ಹಾಗೂ Reserve Bank of India ಅವರ ಡೆಪಾಸಿಟರ್ಸ್ ಎಜುಕೇಶನ್ ಅಂಡ್ ಅವೇರ್‌ನೆಸ್ ಫಂಡ್ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ Canara Bank ನ ಲೀಡ್ ಡಿಸ್ಟ್ರಿಕ್ಟ್ ಡಿವಿಷನಲ್ ಮ್ಯಾನೇಜರ್ ಶ್ರೀ ಹರೀಶ್ ಜಿ ಅವರು ಭಾಗವಹಿಸಿ KYC ಮೋಸಗಳು, ಫಿಷಿಂಗ್ ದಾಳಿಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಅಪಾಯಗಳ ಕುರಿತು ವಿವರಿಸಿದರು. OTP, PIN ಹಾಗೂ ಬ್ಯಾಂಕ್ ಸಂಬಂಧಿತ ಗೌಪ್ಯ ಮಾಹಿತಿಗಳನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್, ಶ್ರೀ ವರ್ಷಿತ್ ಮತ್ತು ವಾಣಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸುರಕ್ಷಿತ ಬ್ಯಾಂಕಿಂಗ್ ಹಾಗೂ ಹಣಕಾಸು ಜಾಗೃತಿ ಕುರಿತು ಮಹತ್ವದ ಅರಿವು ಮೂಡಿಸಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now