ಎಸ್.ಎಂ.ಎಸ್ ಕ್ರಿಕೆಟ್ ಕ್ಲಬ್ ನ ಮಹಿಳಾ ತಂಡವು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಕೂಟದಲ್ಲಿ ಫೈನಲ್ ಪ್ರವೇಶಿಸಿ 22 ಯಾರ್ಡ್ ಟ್ರೋಫಿ 2025 ಮುಡಿಗೇರಿಸಿ ಕೊಂಡಿದೆ

ಎಸ್.ಎಂ.ಎಸ್ ಕ್ರಿಕೆಟ್ ಕ್ಲಬ್ ನ ಮಹಿಳಾ ತಂಡವು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಕೂಟದಲ್ಲಿ ಫೈನಲ್ ಪ್ರವೇಶಿಸಿ 22 ಯಾರ್ಡ್ ಟ್ರೋಫಿ 2025 ಮುಡಿಗೇರಿಸಿ ಕೊಂಡಿದೆ

0Shares

ಬ್ರಹ್ಮಾವರ ಇಲ್ಲಿನ ಎಸ್. ಎಂ. ಎಸ್. ಕ್ರಿಕೆಟ್ ಕ್ಲಬ್ ನ ಮಹಿಳಾ ತಂಡವು ಬೆಂಗಳೂರಿನ ‘ ರಾಮ್ ಸ್ಪೋರ್ಟ್ಸ್ ಕ್ಲಬ್ ‘ ಮೈದಾನದಲ್ಲಿ ನಡೆದ. ರಾಜ್ಯಮಟ್ಟದ ಲೆದರ್ ಬಾಲ್ ಪಂದ್ಯಾಕೂಟದಲ್ಲಿ ಫೈನಲ್ ಪ್ರವೇಶಿಸಿ ಟ್ರೋಫಿ ಜಯಿಸಿದೆ. ಟೂರ್ನಿಯ ಲೀಗ್ ಹಂತದ ಎಲ್ಲಾ ಮೂರು ಪಂದ್ಯಗಳನ್ನು ಜಯಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಫೈನಲ್ ನಲ್ಲಿ ಬೆಂಗಳೂರಿನ ಸಿಟಿ ಜಿಮ್ಕಾನ ತಂಡವನ್ನು ಮಣಿಸಿ ದಿನಾಂಕ 9/9/2025ನೇ ಮಂಗಳವಾರ ನಡೆದ ಫೈನಲ್ ನಲ್ಲಿ ಬಿಜಾಪುರದ ಬಲಿಷ್ಠ “ಕೋಯಿನೂರ್ ಕ್ರಿಕೆಟ್ ಕ್ಲಬ್ ಅನ್ನು ಸೋಲಿಸಿ.” 22ಯಾರ್ಡ್ ಟ್ರೋಫಿ – 2025 ಅನ್ನು ಮುಡಿಗೇರಿಸಿಕೊಂಡಿದೆ.
ಎಸ್.ಎಂ. ಎಸ್. ತಂಡದ ಕುಸುಮ ಗೌಡ ಬೆಸ್ಟ್ ಬ್ಯಾಟರ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅದೇ ತಂಡದ ನಾಯಕಿ ಲಕ್ಷ್ಮೀ ಬಿ. ಬೆಸ್ಟ್ ಬೌಲರ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ, ಎಂದು ತಂಡದ ಕೋಚ್ ಶ್ರೀ ಲಿಂಗಪ್ಪ ಬ್ರಹ್ಮಾವರ ಮಾಹಿತಿ ನೀಡಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now