
ಬ್ರಹ್ಮಾವರ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ, ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಗಸ್ಟ್ 29, 2025ರಂದು ಆಯೋಜಿಸಲಾಯಿತು. 18 ಕ್ಕೂ ಹೆಚ್ಚು ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ಒಟ್ಟು 100 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
ಒ.ಎಸ್.ಸಿ. ಶಿಕ್ಷಣ ಸಂಸ್ಥೆ (ರಿ) ಬ್ರಹ್ಮಾವರ ಅಧ್ಯಕ್ಷರಾದ ರೆವ. ಫಾ. ಎಂ.ಸಿ. ಮಥಾಯ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಅಧ್ಯಕ್ಷ ಶ್ರೀ ಜಯಂತ್ ಅಮೀನ್ ಅಧ್ಯಕ್ಷರು ಮೊಗವೀರ ಯುವ ಸಂಘಟನೆ ಉಡುಪಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಅಲೆನ್ ರೋಹನ್ ವಾಝ್ – ಕಾರ್ಯದರ್ಶಿ, ಓ.ಎಸ್.ಸಿ.ಇ, ಬ್ರಹ್ಮಾವರ
ಡಾ. ರಾಬರ್ಟ್ ರೊಡ್ರಿಗ್ಸ್ ಜೆ – ಪ್ರಾಂಶುಪಾಲರು, ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ
ಶ್ರೀ ಬಿರ್ತಿ ರಾಜೇಶ್ ಶೆಟ್ಟಿ – ಅಧ್ಯಕ್ಷರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ
ಶ್ರೀ ಏರಿಕ್ ಡಿಸೋಜಾ, ಕಾರ್ಯದರ್ಶಿ ಎಸ್ ಎಮ್ ಎಸ್ ಸ್ಪೋರ್ಟ್ಸ್ ಕ್ಲಬ್,
ರೋಟೀರಿಯನ್. ಸತೀಶ ಶೆಟ್ಟಿ – ಅಧ್ಯಕ್ಷರು, ರೋಟರಿ ಕ್ಲಬ್, ಬ್ರಹ್ಮಾವರ
ರೋಟೀರಿಯನ್. ಚಂದ್ರಶೇಖರ್ ನ್ಯಾಯರಿ – ಅಧ್ಯಕ್ಷರು, ರೋಟರಿ ರಾಯಲ್ ಬ್ರಹ್ಮಾವರ
ಲಯನ್ಸ್. ಸುಧೇಶ್ ಹೆಗ್ಡೆ – ಲಯನ್ಸ್ ಕ್ಲಬ್, ಬ್ರಹ್ಮಾವರ
ಶ್ರೀ ಸಚಿನ್ ಪೂಜಾರಿ – ಉಡುಪಿಯನ್ ಕ್ರೆಡಿಟ್ ಕೂಪೆರೇಟಿವ್ ಸೊಸೈಟಿ ಬ್ರಹ್ಮಾವರ
ಶ್ರೀ ಮಿಲ್ಟನ್ ಒಲಿವೆರಾ – ಅಧ್ಯಕ್ಷರು, ಎಸ್ ಎಂ ಎಸ್ ಕ್ಯಾತೆದ್ರಲ್ ಬ್ರಹ್ಮಾವರ
. ಶ್ರೀಮತಿ ಆಶಾ ಅಲೆನ್ ವಾಝ್ – ಅಧ್ಯಕ್ಷರು,ಮಾರ್ಥ ಮರಿಯಾ ವನಿತಾ ಸಮಾಜ್, ಬ್ರಹ್ಮಾವರ
ಕುಮಾರಿ ರೆಚೆಲ್ ಲೆವಿಸ್- ಎಸ್ ಎಮ್ ಎಸ್ ಯೂಥ್ ಅಸೋಸಿಯೇಷನ್.
ಕುಮಾರಿ ಎವಿಟಾ ಡಿ’ಸೊಝಾ – ಅಧ್ಯಕ್ಷರು, ಜೆ ಸಿ ಐ ಕಲ್ಯಾಣಪುರ
ಶ್ರೀ ಅಣ್ಣಯ್ಯ ದಾಸ್ – ಗೈಟ್ಸ್ ಗ್ರೂಪ್ ಬ್ರಹ್ಮಾವರ
ಶ್ರೀ ರಮೇಶ್ ನಾಯ್ಕ್ – ಬ್ರಹ್ಮಾವರ ವಾಹನ ಚಾಲಕ ಮಾಲಕರ ಸಂಘ
ಶ್ರೀ ರಾಜರಾಮ ಶೆಟ್ಟಿ – ರೆಡ್ ಕ್ರಾಸ್ ಯೂನಿಟ್, ಬ್ರಹ್ಮಾವರ
ಶ್ರೀ ಹರೀಶ್ ಚಂದ್ರ ಬಿರ್ತಿ – ಅಂಬೇಡ್ಕರ್ ಯುವಕ ಮಂಡಳ, ತೆಂಕಬಿಟ್ಟು
ಶ್ರೀ ಸಕಾರಾಮ ಸೊಮಯಾಜಿ –ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ
ಶ್ರೀಮತಿ ಪುಷ್ಪಾ – ರಕ್ಷಕ ಶಿಕ್ಷಕರ ಸಂಘ ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ
ಡಾ. ಅನಿತಾ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ – ಹೃದ್ರೋಗ ವಿಭಾಗ, ಕೆ.ಎಂ.ಸಿ ಮಣಿಪಾಲ
ಶ್ರೀಮತಿ ಹೇಮ ಜಗನಾಥ ಪೂಜಾರಿ – ಸಂಜೀವಿನಿ ಒಕುಟಾ,ಹಾಗೂ ಹಲವಾರು ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಹಕಾರ ತೋರಿದರು.
ಡಾ ರಾಬರ್ಟ್ ರೋಡ್ರಿಗಸ್ ಸ್ವಾಗತಿಸಿ, ಪ್ರಶಸ್ತಿ ಪ್ರಧಾನ ಕಾರ‌್ಯಕ್ರಮ ಅಶ್ವಿನ್ ಶೆಟ್ಟಿ ನೆರವೇರಿಸಿ, ವೆಂಕಟೇಶ ಭಟ್ ಧನ್ಯವಾದ ಸಮಾರ್ಪಿಸಿದರು. ಭರತ್ ರಾಜ್ ಎಸ್ ನೇಜಾರ್ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now