ಹಿಟ್ ಅಂಡ್ ರನ್ 30 ನಿಮಿಷದಲ್ಲಿ ಪಚ್ಚೆ ಹತ್ತಿದ ಶಿರ್ವ ಪೊಲೀಸ್*

ಹಿಟ್ ಅಂಡ್ ರನ್ 30 ನಿಮಿಷದಲ್ಲಿ ಪಚ್ಚೆ ಹತ್ತಿದ ಶಿರ್ವ ಪೊಲೀಸ್*

0Shares

ಶಿರ್ವ: ಫೆಬ್ರವರಿ 3 ರ ರಾತ್ರಿ 7:00 ಗಂಟೆಗೆ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಶಿರ್ವ ಪೊಲೀಸ್ 30 ನಿಮಿಷದಲ್ಲಿ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.

ವಿವರ: ಮೂಡುಬಳ್ಳೆಯಿಂದ ಶಿರ್ವ ವಾರ್ಷಿಕ ಹಬ್ಬಕ್ಕೆ ತೆರಳುತ್ತಿದ್ದ ಸ್ಕೂಟರ್ ಚಾಲಕ ಚಾರ್ಲ್ಸ್ ಡಿಸೋಜಾ (58) ಅವರ ಸ್ಕೂಟರ್‌ಗೆ ಕಟಪಾಡಿಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಸ್ಕೂಟರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.ಗಾಯಾಳನ್ನು ತಕ್ಷಣ ಸ್ಥಳೀಯರು ಶಿರ್ವ ಸಮುದಾಯ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಸ್ಥಳೀಯರು

ಸ್ಥಳೀಯರು ಟಿಪ್ಪರ್ ಅನ್ನು ತಡೆಯಲು ಪ್ರಯತ್ನಿಸಿದರೂ ಟಿಪ್ಪರ್ ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಠಾಣಾಧಿಕಾರಿ ಮಂಜುನಾಥ ಮರಬದ ನೇತೃತ್ವದಲ್ಲಿ ಪೊಲೀಸ್ ತಂಡ ಟಿಪ್ಪರ್ ಅನ್ನು ಬೆನ್ನಟ್ಟಿ ಹೋಗಿ ನಂದಿಕೂರಿನಲ್ಲಿ ವಶಕ್ಕೆ ಪಡೆದಿದೆ. ಟಿಪ್ಪರ್ ಚಾಲಕ ಹುಬ್ಬಳ್ಳಿ ಮೂಲದ ಶಿವ ಎಂದು ಗುರುತಿಸಲಾಗಿದೆ.

ತ್ವರಿತ ಕಾರ್ಯಾಚರಣೆಗಾಗಿ ಶಿರ್ವ ಪೊಲೀಸರನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now