
ಶಿರ್ವ: ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ,
ಶಿಕ್ಷಣಪ್ರೇಮಿ ಬಂಟಕಲ್ಲು ಬಿಸಿರೋಡ್ ನಿವಾಸಿ ಸಿರಿಲ್ ಕ್ವಾಡ್ರಸ್ (85) ಅವರು ಜ. 5 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಉದ್ಯಮಿ, ಸಿವಿಲ್ ಕಂಟ್ರಾಕ್ಟರ್ ಪ್ರದೀಪ್ ಕ್ವಾಡ್ರಸ್, ದಂತ ವೈದ್ಯ ಡಾ| ದಿಲೀಪ್ ಕ್ವಾಡ್ರಸ್ ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಅಗರ್ತಲಾ, ಬೀದರ್, ಬೆಂಗಳೂರು,ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಚರ್ಚು, ಮಸೀದಿ, ದೇವಸ್ಥಾನ, ಶಾಲೆ, ಕಾಲೇಜುಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಸಭಾಂಗಣಗಳನ್ನು ನಿರ್ಮಿಸಿದ್ದು, ಕರ್ನಾಟಕ ಸರಕಾರದಿಂದ ಉಡುಪಿ ಜಿಲ್ಲೆಯ ಅತ್ಯುತ್ತಮ ಕಂಟ್ರಾಕ್ಟರ್ ಪ್ರಶಸ್ತಿಯನ್ನು ಪಡೆದಿದ್ದರು.
ಪಡುಬೆಳ್ಳೆ ಶ್ರೀ ನಾರಾಯಣ ಗುರು ಪ್ರೌಢ ಶಾಲೆ ಮತ್ತು ಪಾಂಬೂರು ಮಾನಸ ತರಬೇತಿ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪನೆಗೆ ಶ್ರಮಿಸಿದ್ದ ಅವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದವು.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now