ರೋಟರಿ ಕ್ಲಬ್ ಶಿರ್ವ ಪೌರ ಕಾರ್ಮಿಕರ ದಿನಾಚರಣೆ

ರೋಟರಿ ಕ್ಲಬ್ ಶಿರ್ವ ಪೌರ ಕಾರ್ಮಿಕರ ದಿನಾಚರಣೆ

0Shares

ತಾರೀಕು 26-09-2025 ಶುಕ್ರವಾರ ಜರಗಿದ ವಾರದ ಸಭೆ ರೋಟರಿ ಕ್ಲಬ್ ಶಿರ್ವ ಈ ಸಂಸ್ಥೆಯಲ್ಲಿ “ಪೌರ ಕಾರ್ಮಿಕರ ದಿನಾಚರಣೆ” ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರು ರೋ ವಿಲಿಯಂ ಮಚಾದೊರವರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಶ್ರೀ ಶಂಕರ್ ಬಂಟಕಲ್ಲು ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರು ಅಲಂಕರಿಸಿದರು. ಸಮುದಾಯ ಸೇವಾ ನಿರ್ದೇಶಕರಾಗಿರುವ ರೊ ಬಿ. ಪುಂಡಲೀಕ ಮರಾಠೆ ಯವರು ಕಾರ್ಮಿಕ ದಿನಾಚರಣೆಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಸವಿಸ್ತಾರವಾಗಿ ತಮ್ಮ ಜ್ಞಾನವನ್ನು ಹಂಚಿಕೊಂಡರು. ಮುಖ್ಯ ಅತಿಥಿಯವರು ಪೌರ ಕಾರ್ಮಿಕರನ್ನು “ಪೌರ ಸೇನೆ” ಎಂದು ಸಂಭೋಧಿಸಿದರು. ಶಿರ್ವ ಗ್ರಾಮದ ನಾಲ್ಕು ಮಂದಿ ಪೌರ ಕಾರ್ಮಿಕರನ್ನು ಫಲಪುಷ್ಪ, ಹಾರ ಹಾಗೂ ಶಾಲು ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ರೊ। ಮೆಲ್ವಿನ್ ಡಿಸೋಜ ಹಾಗೂ ತನು ಮನ ಧನದ ರೂಪದಲ್ಲಿ ಸಹಕರಿಸಿದ ಎಲ್ಲಾ ರೊಟೇರಿಯನ್ ಮಿತ್ರರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now