
ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಕಟೀಲು ಶ್ರೀ ದುರ್ಗಾಪರ್ಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು ಪರ್ಯಾಯದ ಹೊರೆಕಾಣಿಕೆ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕಟೀಲು ಕ್ಷೇತ್ರದಿಂದ ಪ್ರತೀ ಪರ್ಯಾಯ ಸಂದರ್ಭದಲ್ಲಿ ವಿಶೇಷವಾದ ಸಹಕಾರ ನೀಡಲಾಗುತ್ತಿದ್ದು ಕಟೀಲು ಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಶೀರೂರು ಪರ್ಯಾಯವನ್ನು ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಭಾಗದಿಂದ ಎಲ್ಲಾ ಭಕ್ತಾದಿಗಳು ಒಟ್ಟಾಗಿ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಗೋಪಾಲಕೃಷ್ಣ ಆಸ್ರಣ್ಣ ಹೇಳಿದರು.
ಬಳಿಕ ಮಾತನಾಡಿದ ಮಠದ ದಿವಾನ ಡಾ ಉದಯಕುಮಾರ್ ಸರಳತ್ತಾಯ ತಾಯಿ ಭ್ರಮರಾಂಭೆಯ ಸನ್ನಿಧಿಯಲ್ಲಿ ನಡೆಯುತ್ತಿರುವ ಸಮಾಲೋಚನಾ ಸಭೆ ನಮಗೆ ಅನುಗ್ರಹದ ಸಭೆ ಇದ್ದಂತೆ. ಈ ಕ್ಷೇತ್ರದ ಆಸ್ರಣ್ಣ ಬಂಧುಗಳು ಅದೆಷ್ಟೋ ವರ್ಷಗಳಿಂದ ನಿರಂತರವಾಗಿ ಅಷ್ಠಮಠಗಳಿಗೆ ಸೇವೆ ಸಲ್ಲಿಸಿದ್ದಾರೆ. ಪ್ರತಿ ಪರ್ಯಾಯ ಸಂದರ್ಭದಲ್ಲಿಯೂ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈಜೋಡಿಸಿ ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ. ಈ ಬಾರಿಯ ಶೀರೂರು ಪರ್ಯಾಯದಲ್ಲೂ ಕಟೀಲು ಆಸ್ರಣ್ಣರ ಮತ್ತು ಇಲ್ಲಿನ ಭಕ್ತರ ಸಹಕಾರ ನಮಗೆ ವಿಶೇಷ ಬಲ ನೀಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಕ್ಷೇತ್ರದ ಟ್ರಸ್ಟಿ ವಾಸುದೇವ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now