ಬದುಕ ಬದಲಿಸುವ ಕತೆಗಳು

ಬದುಕ ಬದಲಿಸುವ ಕತೆಗಳು

0Shares

ಕಥೆ ಸಂಖ್ಯೆ 2

ನೀನು ಅವನಾದರೆ ನೀನು ನೀನಾಗುತ್ತಿರಲಿಲ್ಲ
🙏🙏🙏🙏🙏🙏
(ಸಣ್ಣಕಥೆ:ಡಾ.ಶಶಿಕಿರಣ್)
🔴🔴🔴🔴🔴🔴

ಆ ಕಾಗೆ ಅಂದು ನವಿಲನ್ನು ನೋಡುತಿತ್ತು…ಜನ ಅದರ ಅಂದಕ್ಕೆ ಮಾರು ಹೋಗಿ ಫೋಟೋ ತೆಗೆಯುತ್ತಿದ್ದುದು
ಅದಕ್ಕೆ ಅಸೆ ಆಗುತಿತ್ತು ಮನಸ್ಸಲ್ಲಿ ಯೋಚಿಸಿತ್ತು ನಾನು ನಾವಿಲಾಗಿದ್ದರೆ ಎಷ್ಟು ಚೆನ್ನ ಎಂದು …ಸ್ವಲ್ಪ ದೂರದಲ್ಲಿ ಸಿಂಹ ವೊಂದು ನವಿಲನ್ನು ಕೊಂದು ತಿನ್ನುತಿತ್ತು..ದೇಹ ದೊಡ್ಡದಾದ್ದರಿಂದ ನೆಲದಲ್ಲಿ ಕೂತಾಗ ಸಿಂಹ ದ ಆಕ್ರಮಣ ದಿಂದ ರಕ್ಷಿಸಿಕೊಳ್ಳಲಾಗಿರಲಿಲ್ಲ.
ಅಯ್ಯೋ ನವಿಲು ಬೇಡ ಆ ಸಿಂಹ ನಾನಾಗಿದ್ದಿದ್ದರೆ ಜೀವನ ಎಷ್ಟೊಂದು ಸುಖ ಕರ ವಾಗಿತ್ತು ಶಕ್ತಿ ಶಾಲಿ ಯಾದ ಸಿಂಹ ತನಗೆ ಬೇಕಾದದ್ದನ್ನು ಕೊಂದು ತಿನ್ನುತಿತ್ತು ಅದು ಕಾಗೆಗೆ ಆ ಕ್ಷಣ ಇಷ್ಟವಾಗಿತ್ತು ಸ್ವಲ್ಪ ಮುಂದೆ ಹೋದಾಗ ಬೇಟೆಗಾರನೊಬ್ಬ ಸಿಂಹ ವನ್ನು ಗುಂಡು ಹೊಡೆದು ಕೊಂದು ತನ್ನ ಮನೆಗೆ ಹೊತ್ತೊಯ್ಯುತಿದ್ದ..ಕಾಗೆ ಮತ್ತೆ ಯೋಚಿಸಿತು ಮನುಷ್ಯನೇ ಸಿಂಹ ಕ್ಕಿಂತ ಶಕ್ತಿ ಶಾಲಿ ನನ್ನನ್ನು ಮನುಷ್ಯ ನಾಗಿ ಮಾಡು ಎಂದು ದೇವರಲ್ಲಿ ಪ್ರಾರ್ಥಿಸಿ ಕೊಂಡಿತು ..

ಸ್ವಲ್ಪ ದೂರ ದಲ್ಲಿ ಆ ವಿಷದ ಹಾವೊಂದು ಬೇಟೆಗಾರನಿಗೆ ಕಚ್ಚಿತ್ತು ಬೇಟೆಗಾರ ಸತ್ತಿದ್ದ ಕಾಗೆ ಗನ್ನಿಸಿತ್ತು ಹಾವಲ್ಲಿ ವಿಷ ಇದ್ದುದರಿಂದ ತನ್ನ ರಕ್ಷಣೆ ಮಾಡಬಲ್ಲದು ಹಾಗಾಗಿ ಹಾವಾಗಿದ್ದರೆ ಚೆನ್ನ ಎಂದೆನಿಸಿತ್ತು
ಸ್ವಲ್ಪ ದೂರದಲ್ಲಿ ಆ ಹಾವನ್ನು ನವಿಲೊಂದು ಕಚ್ಚಿ ತೆಗೆದುಕೊಂಡು ಕುಕ್ಕಿ ತಿನ್ನುತಿತ್ತು …ಮತ್ತೆ ಆ ನವಿಲು ಮುಂದೆ ವಿದ್ಯುತ್ ತಂತಿ ತಾಗಿ ಸತ್ತು ಬಿದ್ದಿತ್ತು ..ತನ್ನ ಬಂದು ಗಳೆಲ್ಲ ಕುಕ್ಕಿ ಕುಕ್ಕಿ ತಿನ್ನುತಿದ್ದವು.. ಮತ್ತೆ ಕಾಗೆ ಯೋಚಿಸಿತು ನಾನು ಕಾಗೆ ಯಾಗಿದ್ದರೇ ಚೆನ್ನ ಎಂದು ದೇವರಿಗೆ ಧನ್ಯವಾದವನ್ನರ್ಪಿಸಿ ನವಿಲಿನ ಮಾಂಸ ತಿನ್ನಲು ಹಾರಿ ಹೋಗಿತ್ತು

ನಾವೂ ಕಾಗೆಯ ಹಾಗೆ ಎಷ್ಟೋ ಸಲ ಯೋಚಿಸುವುದುಂಟು ನಮ್ಮ ದೂ ಒಂದು ಬದುಕ ಅದ್ಯಾಪಕ ನಾಗಿದ್ದರೆ ಎಷ್ಟು ಒಳ್ಳೆದಿತ್ತು ವರ್ಷದಲ್ಲಿ 3 ತಿಂಗಳು ರಜೆ ಅಲ್ಲೂ ಸಂಬಳ,ವೈದ್ಯ ನಾಗಿದ್ದರೆ ನೋಟಿನ ಕಟ್ಟು ಕಟ್ಟು ಎಣಿಸ ಬಹುದಿತ್ತು,ಪೊಲೀಸ್ ಅಧಿಕಾರಿ ಆಗಿದ್ದಿದ್ದರೆ ಜನರ ಗೌರವ ಸಿಗುತ್ತಿತ್ತು,ಸ್ವಂತ ಉದ್ಯಮ ಇದ್ದಿದ್ದರೆ ಯಾರಿಗೂ ಹೆದರದೆ ಇರಬಹುದಿತ್ತು…ಇನ್ನು ಕೆಲವರಂತೂ ಟಾಟಾ ಬಿರ್ಲಾ,ಪ್ರಧಾನಿ,ರಾಷ್ಟ್ರ ಪತಿಯ ಕನಸು ಕಂಡವರಿದ್ದಾರೆ.. ಆದರೆ ಒಂದು ಸತ್ಯ ನೆನಪಿರಲಿ ಯಾವುದೇ ಹುದ್ದೆ ಇರಲಿ ಅದರ ಹಿಂದಿನ ಕಷ್ಟ ಅನುಭವಿಸಿದವರಿಗೆ ಗೊತ್ತಿರುತ್ತದೆ..ಕಲ್ಲು ಕೂಡ ಉಳಿಯ ಪೆಟ್ಟು ತಿಂದರೇನೇ ಮೂರ್ತಿ ಯಾಗುವುದು ಹಾಗಾಗಿ ನೀವು ಮಾಡುವ ಕೆಲಸ ವನ್ನೇ ಮನಸ್ಸಿಟ್ಟು ಪ್ರಾಮಾಣಿಕವಾಗಿ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ…ನೆನಪಿಡಿ

ನೀನು ಅವನಾದರೆ ನೀನು ನೀನಾಗುತ್ತಿರಲಿಲ್ಲ …..
🙏🙏🙏🙏🙏🙏
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
ನಿಮ್ಮ ಅನಿಸಿಕೆಗಳನ್ನು ಮೇಲಿನ ವಾಟ್ಸಪ್ ನಂಬರ್ಗೆ ಕಳುಹಿಸಿ
🔴🔴🔴🔴🔴🔴

ಡಾಕ್ಟರ್ ಶಶಿಕಿರಣ್ ಶೆಟ್ಟಿ ಕೊಳಲಗಿರಿ
ಹೋಂ ಡಾಕ್ಟರ ಫೌಂಡೇಶನ್
+91 99451 30630

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now