ರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಶಂಕರಪುರದ – ಹೆನ್ಜ್ ಜೋಶ್ವಾ ಪಿಂಟೊ*

ರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಶಂಕರಪುರದ – ಹೆನ್ಜ್ ಜೋಶ್ವಾ ಪಿಂಟೊ*

0Shares

ರಾಷ್ಟೀಯ ಫುಟ್ಬಾಲ್ ಟೂರ್ನಿಯಲ್ಲಿ ಶಂಕರಪುರದ ಪ್ರತಿಭೆಯೊಂದು ಮಿಂಚುತ್ತಿರುವುದು ಹೆಮ್ಮೆಯ ವಿಶಯ. ಇವರೇ- ಹೆನ್ಜ್ ಜೋಶ್ವಾ ಪಿಂಟೊ ( Henz Joshua Pinto).
ಶಂಕರಪುರ ಮೂಡಬೆಟ್ಟು ಗ್ರಾಮದ ಶ್ರೀ ರೋಶನ್ ಪಿಂಟೊ ಹಾಗೂ ಮೇರಿ ಟಾಂಗ್ ದಂಪತಿಗಳ ಎಕೈಕ ಪುತ್ರ.
ಕುವೈಟ್‌ ನಲ್ಲಿ ಜನಿಸಿ, ತನ್ನ ಪ್ರಾಥಮಿಕ ವಿಧ್ಯಾಭ್ಯಾಸ ಅಲ್ಲಿಯೇ ಮುಗಿಸಿ, ತದನಂತರ ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ, ಪ್ರಸ್ತುತ ಶಂಕರಪುರದ ಸೈಂಟ್ ಜೋನ್ಸ್ ಅಕಾಡೆಮಿಯಲ್ಲಿ ಪಿಯುಸಿ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ.

ಬಾಲ್ಯದಿಂದಲೂ ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷ ಅಭಿರುಚಿ ಹೊಂದಿರಿರುತ್ತಾರೆ. ಟ್ರ್ತಾಕ್ ಆಂಡ್ ಫೀಲ್ಡ್, ಮಾರ್ಶಲ್ ಆರ್ಟ್ಸ್, ಸಂಗೀತ ಹಾಗೂ ಫುಟ್ಬಾಲ್ ಆಟದಲ್ಲಿ ಇವರ ಎತ್ತಿದ ಕೈ.

ಮಂಗಳೂರಿನ ಯೆನೆಪೊಯಾ ಒಡೆತನದ FC Mangalore ಫುಟ್ಬಾಲ್ ತಂಡದ Mid Field ಆಟಗಾರರಾಗಿದ್ದಾರೆ. ಅಲ್ಲದೇ ಇವರು ಆನೇಕ ರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ತಂಡದ ಪರವಾಗಿ ದೇಶದ ಅನೇಕ ಭಾಗದಲ್ಲಿ ಆಡಿರುತ್ತಾರೆ.
ಬೆಂಗಳೂರಿನ ಮಿನಾರ್ವ ಫುಟ್ಬಾಲ್ ಆಕಾಡೆಮಿಯಲ್ಲಿ ಹೆಚ್ಚಿನ ತರಬೇತಿ ಪಡೆದು, ನಂತರ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಆಕಾಡೆಮಿ ಯಲ್ಲಿ ತರಬೇತಿ ಪಡೆದು, ಈ ಕ್ಲಬ್ ನಲ್ಲಿ ಆಡಿರುತ್ತಾರೆ. ಪ್ರಸ್ತುತ ಸೆಪ್ಟೆಂಬರ್ 30 ರಿಂದ, ಜಮ್ಮು ಕಾಶ್ಮೀರ ದ ಶ್ರಿನಗರದಲ್ಲಿ ನಡೆಯುತ್ತಿರುವ, ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಲ್ಲಿ, ಕರ್ನಾಟಕ ತಂಡದಲ್ಲಿ ಮಿಡ್ ಪ್ಲೇಯರ್ ಆಗಿ, ಆಡುತ್ತಿದ್ದಾರೆ.

ಅಷ್ಟೇ ಅಲ್ಲ, ಇವರು ಸಂಗೀತದ ಪರಿಕರ- ಡ್ರಮ್ಸ್ ಬಾರಿಸಲು ಹಾಗೂ ಗೀಟಾರ್ ನುಡಿಸುವುದರಲ್ಲ್ ಪರಿಣತರು. ಇವರ ಸಹಪಾಠಿಗಳ NH66 ಎಂಬ ಸಂಗೀತ ಪಂಗಡದಲ್ಲಿ ಗುರುತಿಸಿದ್ದಾರೆ.

ಕ್ರೀಡೆಯಲ್ಲಿ , ಫುಟ್ಬಾಲ್ ನಲ್ಲಿ ಹಾಗೂ ಸಂಗೀತದಲ್ಲಿ ಮುನ್ನಡೆಯುವ ಜೋಶ್ವಾ ಪಿಂಟೊರವರಿಗೆ ಅಭಿನಂದಿಸಿ, ಶುಭ ಹಾರೈಸುತ್ತೇನೆ.

ವಿಲ್ಪ್ರೆಡ್ ಆರ್ ಪಾಂಗ್ಳಾ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now