ಶಂಕರರ್ಪುರದ ಏಕಾಂಗಿ ರಿಕ್ಷಾ ಚಾಲಕಿ

ಶಂಕರರ್ಪುರದ ಏಕಾಂಗಿ ರಿಕ್ಷಾ ಚಾಲಕಿ

0Shares

ದೊಡ್ಡ ದೊಡ್ಡ ನಗರ ಪಟ್ಟಣಗಳಲ್ಲಿ, ಮಹಿಳಾ ಆಟೋ ರಿಕ್ಷಾ ಚಾಲಕರ ಬಗ್ಗೆ ನಾವು ಇದೀಗಲೇ, ಕೇಳಿರುತ್ತೇವೆ. ಸಾಮನ್ಯವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರವನ್ನು, ಪ್ರವೇಶಿಸುವುದು ಮಹಿಳಾ ಆಟೋ ಚಾಲಕರಿಗೆ , ಒಂದು ದೊಡ್ಡ ಸವಾಲಾಗುವಲ್ಲಿ, ಏನೂ ಸಂದೇಹವಿಲ್ಲ.

ಅಂತೂ…ಈಗ ನಮ್ಮೂರಿನಲ್ಲೇ, ಒರ್ವ ಮನೆಯೊಡತಿ, ವ್ರತ್ತಿಯಲ್ಲಿ ಆಟೋ ರಿಕ್ಷಾ ಚಾಲಕಿಯಾಗಿ ಪರಿವರ್ತನೆ ಗೊಂಡಿದ್ದಾರೆ.

ಇವರ ಹೆಸರು- ಸೆಲಿನ್ ಪಿಂಟೊ. ಪತಿ ಹಾಗೂ ಮೂವರು ಚಿಕ್ಕ ಮಕ್ಕಳ ಚೊಕ್ಕ ಸಂಸಾರ ಇವರದ್ದು. ಪತಿಗೇ ಇತ್ತೀಚಿನ ದಿನಗಳಿಂದ ಆರೋಗ್ಯದ ಸಮಸ್ಯೆಗಳು ಎದುರಾಗಿ, ಅವರ ಶುಶ್ರುಷೆ, ಮಕ್ಕಳ ಶಾಲ ಜೀವನ, ಇವರ ಹೆಗಲ ಮೇಲಿದ್ದು, ಆರ್ಥಿಕವಾಗಿ ಸಬಲತೆಯನ್ನು ಕಾಯ್ದುಕೊಳ್ಳಲು, ಇವರೀಗ ಮೂರು ಚಕ್ರದ ಚುಕ್ಕಾಣಿ ಹಿಡಿದಿದ್ದಾರೆ.

ಮನೆಯವರ ಉಟೋಪಾಚರ ಮತ್ತು ಇತರೆ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿ, ಮಕ್ಕಳನ್ನು ಸರಿಯಾದ ಸಮಯದಲ್ಲಿ ಶಾಲೆಗೆ ಕಳುಹಿಸಿ, ಪತಿಯ ಉತ್ತಮ ಆರೋಗ್ಯ ಕ್ಕಾಗಿ, ದಿನಾಲೂ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಬಂದು, ನಂತರ ಕುಟುಂಬದ ಅಗತ್ಯಗಳನ್ನು ಪೂರೈಸಲು, ಆಟೋ ಚಾಲಕಿ ವ್ರತ್ತಿಯನ್ನು ಮಾಡುವುದು ಇವರ ನಿತ್ಯದ ಡೈರಿ.

ಉಡುಪಿಯ ಡ್ರೈವಿಂಗ್ ಸ್ಕೂಲೊಂದರಲ್ಲಿ, ತರಬೇತಿ ಪಡೆದು, ಬೇಕಾಗುವ ಪರವಾನಿಗೆ ಪಡೆದು, ನೆಂಟರಿಸ್ಟರ ಸಹಾಯದಿಂದ ಆಟೋ ಖರೀದಿಸಿ, ರಾತ್ರಿ ಹಗಲು, ದುಡಿಯುವ ಸೆಲಿನ್ ಪಿಂಟೊರವರಿಗೆ ನಮ್ಮ ಸಲಾಂ. ಮೂರು ಚಕ್ರದಿಂದ, ಇವರ ನೂರಾರು ಆಶೆ ಆಕಾಂಕ್ಷೆಗಳು ನೆರವೇರಲಿ.

  • ವಿಲ್ಪ್ರೆಡ್ ಆರ್ ಪಾಂಗ್ಳಾ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now