ನಾಗರಿಕರ ಬಂದೂಕು ತರಬೇತಿ ಶಿಬಿರ ಪ್ರಮಾಣ ಪತ್ರ ವಿತರಣಾ ಸಮಾರಂಭ

ನಾಗರಿಕರ ಬಂದೂಕು ತರಬೇತಿ ಶಿಬಿರ ಪ್ರಮಾಣ ಪತ್ರ ವಿತರಣಾ ಸಮಾರಂಭ

0Shares

Hi

ದಿನಾಂಕ 30-10-2025 ರಂದು ನಾಗರಿಕ ಬಂದೂಕು ತರಬೇತಿ ಶಿಬಿರ ಪ್ರಮಾಣ ಪತ್ರ ವಿತರಣಾ ಸಮಾರಂಭ ಹಾಗೂ ಸೈಬರ್ ಭದ್ರತಾ ಜಾಗೃತಿ ಮಾಸಾಚಾರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಬೆಳಿಗ್ಗೆ 8:00 ಗಂಟೆಗೆ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನ ಉಡುಪಿಯಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐ ಪಿ ಎಸ್ ಅವರು ಹಾಜರಿದ್ದರು. ನಾಗರಿಕ ಬಂದೂಕು ತರಬೇತಿ ಪಡೆದ 200 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು ಹಾಗೂ ಸೈಬರ್ ಭದ್ರತಾ ಜಾಗೃತಿ ಮಾಸಾಚಾರಣೆಯ ಅಂಗವಾಗಿ ಸೈಬರ್ ಸುರಕ್ಷತೆ ಕುರಿತಾಗಿ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ರೀಲ್‌ಗಳು, ಮೀಮ್ಸ್‌ಗಳು ಅಥವಾ ಚಿತ್ರಗಳು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ #CyberJagruthiUdupi ಮತ್ತು #CyberSafeUdupi ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್ ಮಾಡಲು ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ :

ಸಾರ್ವಜನಿಕ ವಿಭಾಗ

📌ರೀಲ್ಸ್

ಪ್ರಥಮ :
ಆಕ್ಷನ್ ಕ್ರಿಯೇಷನ್ ಟೀಮ್ ಕಟಪಾಡಿ

ದ್ವಿತೀಯ:
1)ಡಿಪಾರ್ಟ್ಮೆಂಟ್ ಆಫ್ ಸೈಬರ್ ಸೆಕ್ಯೂರಿಟಿ ವಿಥ್ ಪ್ರೊಟೋನ್ ಅಸೋಸಿಯೇಷನ್ and NSS IT Wing
NMAM Institute of Technology, Nitte (Deemed to be University)

2) ಜಾಲಿ ರೈಡ್ (ಇನ್ಸ್ಟಾಗ್ರಾಮ್ ಪೇಜ್)

📌ಮೆಮ್ಸ್

ಪ್ರಥಮ:ಮೇಡ್ ಇನ್ ಕುಂದಾಪ್ರ (ಇನ್ಸ್ಟಾಗ್ರಾಮ್ ಪೇಜ್)
ದ್ವಿತೀಯ :ಪ್ರಣತಿ

📌ಡ್ರಾಯಿಂಗ್ಸ್
ಪ್ರಥಮ:ಪರೀಕ್ಷಿತ್ ಆಚಾರ್
ದ್ವಿತೀಯ :ಆರ್ಯ

ಪೊಲೀಸ್ ವಿಭಾಗ:
📱ಸೈಬರ್ ಜಾಗೃತಿ ವಿಡಿಯೋ
ಪ್ರಥಮ:
ಮಂಜುನಾಥ್ CHC 60 ಶಿರ್ವ ಠಾಣೆ

ದ್ವಿತೀಯ:
1)ದಿನೇಶ್ ಎಂ CHC 1184, ಅಜೆಕಾರ್ ಠಾಣೆ
2)ಪವನಕುಮಾರ್ ಎಂCPC 358, ಸೆನ್ ಠಾಣೆ

ಹಾಗೂ ಸೈಬರ್ ಭದ್ರತಾ ಜಾಗೃತಿ ಅಭಿಯಾನದಲ್ಲಿ ಸಹಕರಿಸಿದ ಸೃಜನ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now