
ಸಾಗರದ ಎಲ್ ಬಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ ಎಚ್ ಎಲ್ ಎಸ್ ರಾವ್(87 ವರ್ಷ)ಅವರು ಇಂದು (12/09/2025) ವಯೋಸಹಜ ಅನಾರೋಗ್ಯದ ನಿಮಿತ್ತ ರಾತ್ರಿ 10:15ಕ್ಕೆ ನಿಧನರಾಗಿದ್ದಾರೆ.
ಶ್ರೀಯುತರ ಕೊನೆಯ ಆಸೆಯಂತೆ ಅವರ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ದಾನ ಮಾಡಲಾಗುತ್ತದೆ.
ಶ್ರೀಯುತರು ಅಸಂಖ್ಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದು, ತಮ್ಮ ನಿವೃತ್ತಿ ಜೀವನದಲ್ಲಿ ಸಾಗರ ಸೈನ್ಸ್ ಫೋರಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.
ಪಾರ್ಥಿವ ಶರೀರವನ್ನು ನಾಳೆ(13/09/2025) ಶಿವಮೊಗ್ಗಕ್ಕೆ ವರ್ಗಾಯಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಾಗರ ಸೈನ್ಸ್ ಫೋರಮ್ ಗೆ ಸಂಪರ್ಕಿಸಲು ಕೋರಿದೆ: 9901151545
ಮಾಹಿತಿ: ಡಾ. ಅಭಿಷೇಕ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now