ಉಡುಪಿ, Sept 12, 2024: ಉಡುಪಿಯ ಖ್ಯಾತ ನ್ಯಾಯವಾದಿ ದಿ| ಶಿರ್ತಾಡಿ ವಿಲಿಯಂ ಪಿಂಟೋ ಅವರ ಪತ್ನಿ ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ (72) ಸೆ.12 ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರು 33 ವರ್ಷಗಳಿಂದ ನಿಟ್ಟೂರು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಮತ್ತು ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕಿಯಾಗಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್‌ನ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಮಹಿಳಾ ಸಂಘಟನೆಯ ಅಧ್ಯಕ್ಷೆಯಾಗಿ, ಚೇತನಾ ಮತ್ತು ಪ್ರಗತಿ ಮಹಿಳಾ ಮಂಡಲಗಳ ಸ್ಥಾಪಕಾಧ್ಯಕ್ಷೆಯಾಗಿದ್ದರು. ಹಲವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now