ತುಳುನಾಡು ಜಾನಪದ, ಕಲೆ ಸಂಸ್ಕೃತಿ ಸಂರಕ್ಷಣೆಯ ಮಹಾ ಪಿಲಿಗೊಬ್ಬು-2025 ಕಾರ್ಯಕ್ರಮ- ಸಹಜ್ ರೈ…!!!

ತುಳುನಾಡು ಜಾನಪದ, ಕಲೆ ಸಂಸ್ಕೃತಿ ಸಂರಕ್ಷಣೆಯ ಮಹಾ ಪಿಲಿಗೊಬ್ಬು-2025 ಕಾರ್ಯಕ್ರಮ- ಸಹಜ್ ರೈ…!!!

0Shares

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್‌ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್-28 ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು,ಫುಡ್ ಫೆಸ್ಟ್-2025 ಇದರ ಪೂರ್ವಭಾವಿ ಸಭೆಯು ದರ್ಬೆಯ ಶ್ರೀ ರಾಮಸೌಧ ಕಟ್ಟಡದಲ್ಲಿ ಜರುಗಿತು.

ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ವಿವಿಧ ಜವಾಬ್ದಾರಿಗಳ ಹಂಚಿಕೆ, ಕಾರ್ಯಕ್ರಮದ ವ್ಯವಸ್ಥೆಗಳ ರೂಪುರೇಷೆಯ ಚರ್ಚೆಯನ್ನು ನಡೆಸಲಾಯಿತು.

ಬಳಿಕ ಸಭೆಯನ್ನುದ್ದೇಶಿಸಿ ವಿಜಯಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರು ಮಾತನಾಡುತ್ತಾ, ಸಂಸ್ಥೆಯು ಈಗಾಗಲೇ ಸಾಮಾಜಿಕ ಚಟುವಟಿಕೆಗಳ ಮೂಲಕ,ಅಶಕ್ತ ಕುಟುಂಬಗಳಿಗೆ ನೆರವು ನೀಡುತ್ತಾ ಹೆಜ್ಜೆಯನ್ನಿಡುತ್ತಿದ್ದು, ತುಳುನಾಡಿನ ಕಲೆ,ಸಂಸ್ಕೃತಿ ಜನಪದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗೂ ಆಹಾರ ಮೇಳ ಕಾರ್ಯಕ್ರಮವು ಕಳೆದ ಎರಡು ಸೀಝನ್ ನಲ್ಲಿ ಅತ್ಯಂತ ಯಶಸ್ವಿ ಹಾಗೂ ಅದ್ದೂರಿಯಾಗಿ ನೆರವೇರಿದ್ದು,ಕಲೆ ಸಂಸ್ಕೃತಿ ಉಳಿವಿಗಾಗಿ ಪುತ್ತೂರು ಸೇರಿದಂತೆ ಹತ್ತೂರಿನ ಜನತೆ ಉತ್ತಮ ಸಹಕಾರ, ಸ್ಪಂದನೆ ನೀಡುತ್ತಿರುವುದು ಸಂಸ್ಥೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಈ ಬಾರಿಯ ಸೀಸನ್-3 ಅತ್ಯಂತ ವಿಶಿಷ್ಟ ಹಾಗೂ ವಿನೂತನ ಶೈಲಿಯಲ್ಲಿ ಹೊಸರೂಪುರೇಷೆಯೊಂದಿಗೆ ಜರಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now