
ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ 05 ಬನ್ನೂರು ಮಾರ್ನಡ್ಕ ಅಬ್ದುಲ್ಲಾ ಅವರ ಅಂಗಡಿ ಬದಿಯಿಂದ ನಾರಾಯಣ ಆಚಾರಿ ಅವರ ಮನೆಗೆ ಹೋಗುವ ದಾರಿಯ 100 ಮೀಟರ್ ಇಂಟರ್ ಲಾಕ್ ರಸ್ತೆ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 03 ಆದಿತ್ಯವಾರ ನಡೆಯಿತು.
ಸ್ಥಳೀಯ ನಿವಾಸಿ ನಾರಾಯಣ ಆಚಾರಿ ಹಾಗೂ ಇಸ್ಮಾಯಿಲ್ ಅವರು ರಸ್ತೆಯನ್ನು ರಿಬ್ಬನ್ ಕತ್ತರಿಸುವ ಮುಖೇನ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭಾ ಸದಸ್ಯೆ ಕೆ ಫಾತಿಮತ್ ಝೂರಾ ಮಾತನಾಡಿ ವಾರ್ಡ್ ಸಂಖ್ಯೆ 05 ರಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಅನುಧಾನದಲ್ಲಿ ಅಭಿವೃದ್ದಿ ಕಾರ್ಯಗಳು ನಡೆದಿರುತ್ತದೆ.ಇದಕ್ಕೆ ಸಹಕರಿಸಿದ ನಗರಸಭಾ ಅಧಿಕಾರಿಗಳಿಗೂ, ಗುತ್ತಿಗೆದಾರರನ್ನು,ನಗರಸಭಾ ಸಿಬ್ಬಂದಿ ವರ್ಗದವರಿಗೂ, ಪ್ರಮುಖವಾಗಿ ತನ್ನೊಂದಿಗೆ ಎಲ್ಲಾ ಸಮಯದಲ್ಲೂ ಕೈ ಜೋಡಿಸುವ ಎಸ್ಲಿಪಿಐ ಪಕ್ಷದ ಕಾರ್ಯಕರ್ತರಿಗೂ ಮತದಾರರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now