
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆಯಾಗಿದ್ದಾರೆ
ರಂಗ ಕಲಾವಿದ, ನಾಟಕ ಕಲಾವಿದ ಮತ್ತು ನಿರ್ದೇಶಕರಾಗಿರುವ ಬಾಲಕೃಷ್ಣ ರೈ ಪೊರ್ದಾಲ್ ಉತ್ತಮವಾಗ್ನಿ, ಸಂಪನ್ಮೂಲ ವ್ಯಕ್ತಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಕೆಸರುಗದ್ದೆ ಕ್ರೀಡಾಕೂಟದ ವೀಕ್ಷಕ ವಿವರಣೆಕಾರರಾಗಿ ಹಲವು ಕಡೆ ಕ್ರೀಡಾಮನ್ನಣೆಗೆ ಪಾತ್ರರಾಗಿರುವರು. ಪುತ್ತೂರು ತಾಲೂಕಿನ ಸರಕಾರಿ ಕಾರ್ಯಕ್ರಮದ ನಿರೂಪಕರಾಗಿ, ಉತ್ತಮ ಸಂಘಟಕ, ಉತ್ತಮ ಬರಹಗಾರ, ಉತ್ತಮ ಕ್ರೀಡಾಪಟು,ಕಬಡ್ಡಿ ರಾಷ್ಟ್ರ ಮಟ್ಟದ ತರಬೇತುದಾರರಾಗಿ, ದುಶ್ಚಟ ಮುಕ್ತ ಸಮಾಜ ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಉತ್ತಮ ಒಬ್ಬ ಸೌಟ್ ಶಿಕ್ಷಕನಾಗಿ ಜನಾನುರಾಗಿಯಾದವರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























