ಪುತ್ತೂರು: ಮೂರು ಕಾಲೇಜಿಗೆ ೪ ಕೋಟಿ ಅನುದಾನ ಬಿಡುಗಡೆ :ಮೂಲಸೌಕರ್ಯ ಕೊರತೆಗೆ ಅನುದಾನ ಬಳಕೆ: ಅಶೋಕ್ ರೈ

ಪುತ್ತೂರು: ಮೂರು ಕಾಲೇಜಿಗೆ ೪ ಕೋಟಿ ಅನುದಾನ ಬಿಡುಗಡೆ :ಮೂಲಸೌಕರ್ಯ ಕೊರತೆಗೆ ಅನುದಾನ ಬಳಕೆ: ಅಶೋಕ್ ರೈ

0Shares

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಪ್ರಥಮ ದರ್ಜೆ ಕಾಲೇಜುಗಳಿಗೆ ಒಟ್ಟು ೪ ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ.

ಉನ್ನತ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಕಾಲೇಜು ಶಿಕ್ಷಣ ಇಲಾಖೆಯಿಂದ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೧ ಕೋಟಿ, ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ೧ ಕೋಟಿ ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ೨ ಕೋಟಿ ಹೀಗೆ ಒಟ್ಟು ನಾಲ್ಕು ಕೋಟಿ ಅನುದಾನವನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಶಿಫಾರಸ್ಸಿನಂತೆ ಇಲಾಖೆ ಬಿಡುಗಡೆ ಮಾಡಿದೆ.

ಯಾವುದಕ್ಕೆ ಬಳಕೆ

ಅನುದಾನವನ್ನು ಕಾಲೇಜು ತರಗತಿ ಕೊಠಡಿ ನಿರ್ಮಾಣಕ್ಕೆ, ಶೌಚಾಲಯ ನಿರ್ಮಾಣಕ್ಕೆ ಮಹಿಳಾ ವಿಶ್ರಾಂತಿ ಕೊಠಡಿ ಗೆ, ಪ್ರಯೋಗಾಲಯಕ್ಕೆ, ಗ್ರಂಥಾಲಯಕ್ಕೆ ಅಥವಾ ಅಗತ್ಯವಿದ್ದಲ್ಲಿ ಅಡಿಟೋರಿಯಂ ನಿರ್ಮಾಣಕ್ಕೆ ಮಾತ್ರ ಬಳಸಬಹುದಾಗಿದೆ ಎಂದು ಸೂಚನೆಯನ್ನು ನೀಡಲಾಗಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮೂರು ಪ್ರಥಮ ದರ್ಜೆ ಕಾಲೇಜುಗಳಿಂದ ಮೂಲಸೌಕರ್ಯ ಅಭಿವೃದ್ಧಿಗೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now