ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್‌ ಘಟಕ ಉದ್ಘಾಟನೆರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್‌ ಘಟಕ ಉದ್ಘಾಟನೆರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ

0Shares

ಪುತ್ತೂರು: ನಗರದ ಪುತ್ತೂರು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಮಕ್ಕಳ ರಕ್ಷಣೆಗಾಗಿ ಸಜ್ಜುಗೊಂಡಿರುವ ಮಕ್ಕಳ ವಿಶೇಷ ಪೊಲೀಸ್‌ ಘಟಕ (Special Juvenile Police Unit – SJPU) & ಉದ್ಘಾಟನಾ ಸಮಾರಂಭವು ಫೆಬ್ರವರಿ 18, ಬುಧವಾರ ಸಂಜೆ 7:00 ಗಂಟೆಗೆ ನಡೆಯಲಿದೆ. ಈ ಘಟಕವನ್ನು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಮಕ್ಕಳ ಸ್ನೇಹಿ ವಿನ್ಯಾಸದಲ್ಲಿ ಅಲಂಕರಿಸಿ ಸಜ್ಜುಗೊಳಿಸಲಾಗಿದೆ.

ಈ ಉದ್ಘಾಟನೆಯ ವಿಶೇಷತೆ ಎಂದರೆ ರೋಟರಿ ಯುವ ಕುಟುಂಬದ ಪುಟಾಣಿ ಮಕ್ಕಳೇ ಈ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. “ಮಕ್ಕಳ ಕೈಯಿಂದಲೇ ಮಕ್ಕಳ ರಕ್ಷಣೆಗೆ ಮೀಸಲಾದ ಘಟಕ” ಆರಂಭಗೊಳ್ಳುತ್ತಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಪುತ್ತೂರಿನ ಡಿವೈಎಸ್ಪಿ ಶ್ರೀ ಪ್ರಮೋದ್ ಕುಮಾರ್ ಉಪಸ್ಥಿತರಿರಲಿದ್ದು, ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಶ್ರೀ ಚಕ್ರಪಾಣಿ ಎ ಕೆ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸೆಕ್ಟ‌ರ್ ಶ್ರೀ ಜಾನ್ಸನ್ ಕಿರಣ್ ಡಿ ಸೋಜ ವಿಶೇಷವಾಗಿ ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಶ್ರೀ ಕುಸುಮ್ ರಾಜ್ ಉಪಸ್ಥಿತರಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now