
ಉಡುಪಿ: ಜನವರಿ 12,2025: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ದೈಹಿಕ ಶಿಕ್ಷಕಿಯೋರ್ವರು ಮನೋರೋಗಕ್ಕೆ ತುತ್ತಾಗಿ ಹಗಲು ರಾತ್ರಿ ಎನ್ನದೇ ರಸ್ತೆ ಬೀದಿಗಳಲ್ಲಿ ಸುತ್ತಾಡುತ್ತಾ ಕಿರಿಚಾಡಿಕೊಂಡಿದ್ದ ಅಸಹಾಯಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರ ದೈಗೋಳಿಯ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ ಘಟನೆ ಜ. 11ರಂದು ನಡೆದಿದೆ.

ಉಡುಪಿಯ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಲವು ವರ್ಷಗಳಿಂದ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಮೊಗವೀರ ಸಮಾಜದ ವಿವಾಹಿತ ಮಹಿಳೆ ಸಬಿತಾ (45) ನೊಂದವರಾಗಿದ್ದು, ಮೂಲಸೌಕರ್ಯವಿಲ್ಲದ ಪಾಳು ಮನೆಯಲ್ಲಿ ವಾಸಿಸುತ್ತಿದ್ದು ಹಗಲಿಡೀ ಬೀದಿ ಸುತ್ತುತ್ತ ಕಾಲ ಕಳೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಖಾಯಿಲೆ ಇನ್ನಷ್ಟು ಉಲ್ಬನಗೊಂಡಿದ್ದು ರಾತ್ರಿಯೂ ತಿರುಗಾಡಲು ಪ್ರಾರಂಭಿಸಿದರು. ಈ ಬಗ್ಗೆ ಬೈಕಾಡಿಯ ಮೊಗವೀರ ಗ್ರಾಮ ಸಭಾ ಸಂಘಟನೆಯವರು ವಿಶು ಶೆಟ್ಟಿಗೆ ಮಾಹಿತಿ ನೀಡಿದ್ದು ಗಂಡನಿಂದ ಯಾವುದೇ ಸ್ಪಂದನೆ ಸಿಗದೇ ಮಹಿಳೆ ಅನ್ನ ಆಹಾರವೂ ಸರಿಯಾಗಿ ಇಲ್ಲದೇ, ಜೊತೆಗೆ ಉಡುಗೆ ತೊಡುಗೆ ಕೂಡಾ ಸರಿಯಾಗಿ ಇಲ್ಲದೇ, ಚಿಕಿತ್ಸೆಯೂ ಇಲ್ಲದೆ ಇದ್ದು, ಮಹಿಳೆಗೆ ಆಗುವ ದುರಂತ ತಪ್ಪಿಸುವುದರ ಜೊತೆಗೆ ದೀರ್ಘಕಾಲದ ಚಿಕಿತ್ಸೆ ಹಾಗೂ ಪುನರ್ವಸತಿ ಆಗಲು ಸಹಕರಿಸಲು ಹೇಳಿದ್ದು ವಿಶು ಶೆಟ್ಟಿ ಆಶ್ರಮದ ಮುಖ್ಯಸ್ಥರಾದ ಡಾ| ಉದಯ್ ಕುಮಾರ್ ದಂಪತಿಗಳಲ್ಲಿ ಅನುಮತಿ ಪಡೆದು, ಮಹಿಳೆಯನ್ನು ವಶಕ್ಕೆ ಪಡೆದು, ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ದೈಗೋಳಿ ಶ್ರೀ ಸಾಯಿ ಸೇವಾಶ್ರಮದಲ್ಲಿ ದಾಖಲಿಸಿದರು.
ರಕ್ಷಣಾ ಕಾರ್ಯದಲ್ಲಿ ಸಾಂತ್ವನದ ನಿಕಟ ಪೂರ್ವ ಸಾ. ಕಾರ್ಯಕರ್ತೆ ಶಕಿಲಾ ಕಟಪಾಡಿ, ಬ್ರಹ್ಮಾವರ ಠಾಣಾ ಮಹಿಳಾ ಪೊಲೀಸ್, ಬೈಕಾಡಿ ಚಂದ್ರಶೇಖರ, ಜನಾರ್ಧನ ಕುಂದರ್, ಸಂದೇಶ್ ಉಚ್ಚಿಲ್ ಸಹಕರಿಸಿದರು. ಮಹಿಳೆಗೆ ಸ್ಪಂದಿಸುವವರು ಶ್ರೀ ಸಾಯಿ ಸೇವಾಶ್ರಮ ಸಂಪರ್ಕಿಸಬಹುದು. ಆಶ್ರಮದ ಮೊಬೈಲ್ ಸಂಖ್ಯೆ 9448626500.
ದೈಹಿಕ ಶಿಕ್ಷಕಿಯ ಬದುಕು ಇಂತಹ ಅಸಹಾಯಕ ಸ್ಥಿತಿಗೆ ಬಂದಿರುವುದು ದುರಂತ. ದೈಹಿಕ ಶಿಕ್ಷಕರ ಮನೋಬಲ ಬಹಳಷ್ಟು ಗಟ್ಟಿಯಾಗಿರುತ್ತದೆ. ಅವರು ಮಾನೋರೋಗಿಯಾಗುವುದು ಬಹಳ ವಿರಳ. ವಿವಾಹ ನಂತರ ಸಮಸ್ಯೆ ಬಂದಿದೆ ಎಂಬುದು ಸಾರ್ವಜನಿಕ ಅಭಿಪ್ರಾಯ. ಶಿಕ್ಷಕಿಯ ಬದುಕು ಈ ರೀತಿ ಆಗಲು ಮೂಲಕಾರಣ ಪತ್ತೆಯಾಗಿ ಹಾಗೂ ಚಿಕಿತ್ಸೆಯಿಂದ ಗುಣಮುಖರಾಗಲಿ. ಜನವರಿ 10ರಂದು ಮಹಿಳೆ, ರಾತ್ರಿ 12 ಗಂಟೆಗೆ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವ ಮಾಹಿತಿ ಲಭಿಸಿ ಕೂಡಲೇ ಬೆಳಗಿನ ಜಾವ ಸ್ಥಳೀಯರಾದ ಚಂದ್ರಶೇಖರ್ ಹಾಗೂ ಜನಾರ್ಧನ ಕುಂದರ್ ಸಹಾಯದಿಂದ ರಕ್ಷಣೆ ಮಾಡಲಾಯಿತು. ಮಹಿಳೆಗೆ ಇಂತಹ ಪರಿಸ್ಥಿತಿ ಬರುವಾಗ ಸ್ಥಳೀಯ ಆಡಳಿತ ಅಧಿಕಾರಿಗಳು ಯಾಕೆ ಸ್ಪಂದನೆ ನೀಡಲಿಲ್ಲ. ಇಂತಹ ಪರಿಸ್ಥಿತಿಯ ಮಹಿಳೆಯರ ರಕ್ಷಣೆ ಶೀಘ್ರದಲ್ಲಿ ಆಗಬೇಕು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























