ಪೇಜಾವರ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನ ಆಚರಣೆ

ಪೇಜಾವರ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನ ಆಚರಣೆ

0Shares

ಪೇಜಾವರ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನ ಆಚರಣೆ
ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಸಾರಥ್ಯದಲ್ಲಿ ವಿಶೇಷ ಭಜನೆ

ಮುಂಬಯಿ, ಜ.30: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದಲ್ಲಿ ಕಳೆದ ಬುಧವಾರ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನ ನಿಮಿತ್ತ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಸಲ್ಪಟ್ಟಿತು. ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಂದೇಶವಿತ್ತು ಹರಸಿದರು.

ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ಸಂದೇಶದೊಂದಿಗೆ ಗೋರಕ್ಷಣೆ ಪ್ರತಿಯೊಬ್ಬ ಮಾನವನ ಮುಖ್ಯ ಕರ್ತವ್ಯ. ಅದು ಪೂರ್ಣರೂಪದಿಂದ ಯಶಸ್ವಿ ಆಗಬೇಕಾದರೆ ಭಗವಂತನ ಅನುಗ್ರಹವೂ ಅವಶ್ಯವಾಗಿರುತ್ತದೆ. ಈ ಉದ್ದೇಶದಿಂದ ಎಲ್ಲ ಮಠ-ಮಂದಿರ, ಸಂಘ-ಸಂಸ್ಥೆಗಳ ಮೂಲಕ ಎಲ್ಲರೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಸಬೇಕು ಅನ್ನೋದು ನಾವು ಸಂಕಲ್ಪಮಾಡಿದ್ದೇವೆ. ನಮ್ಮ ಆದೇಶನುಸಾರ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನದಂದು ಮುಂಬಯಿಯಲ್ಲಿನ ಸುಮಾರು 30 ಭಜನಾಮಂಡಳಿಗಳ ಕೂಡುವಿಕೆಯಿಂದ ಮುಂಬಯಿಯಲ್ಲಿನ ಶ್ರೀ ಪೇಜಾವರ ಮಠದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ವಿಧಿವತ್ತಾಗಿ ನಡೆದಿರುವುದು ಸ್ತುತ್ಯರ್ಹ. ನಮ್ಮ ಮಠದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಮನಿಸಿ ಪಾಲ್ಗೊಂಡ ಎಲ್ಲಾ ಭಕ್ತಾಭಿಮಾನಿಗಳನ್ನು ತುಂಬು ಹೃದಯದಿಂದ ಆಶೀರ್ವದಿಸುತ್ತೇವೆ ಎಂದರು.

ಗೋರಕ್ಷಣೆಗೋಸ್ಕರ ಗೋವುಗಳೆಲ್ಲ ಕ್ಷೇಮವಾಗಿರಲು ಆರಾಜಕತೆ ದೂರವಾಗುವ ಸಲುವಾಗಿ ದೇವರಿಗೆ ಮೊರೆ ಹೋಗಬೇಕು ಅನ್ನುವ ನೆಲೆಯಲ್ಲಿ ಮುಂಬಯಿ ಮಠದಲ್ಲಿ ಭಜನೆ ಮಂಡಳಿಗಳು ಒಗ್ಗೂಡಿ ಭಜನೆ, ಮಠದ ಆರ್ಚಕ ವೃಂದ ವಿಷ್ಣುಸಹಸ್ರನಾಮ ಪಾರಾಯಣ ನಡೆಸುವ ಮೂಲಕ ಭಗವಂತನಲ್ಲಿ ಪ್ರಾಥಿರ್üಸುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಈ ಪಾರಾಯಣ ಯಜ್ಞದಲ್ಲಿ ಪಾಲ್ಗೋಂಡ ಎಲ್ಲಾ ಸದಸ್ಯರಿಗೂ ನೀವು ಮಾಡುವ ಪ್ರಾರ್ಥನೆಯಿಂದ ಲೋಕ ಕ್ಷೇಮವಾಗಲಿ ಎಂದು ದೇವರಲ್ಲಿ ಪ್ರಾಥಿರ್üಸುತ್ತೇನೆ ಎಂದೂ ಶ್ರೀಪಾದಂಗಳವರು ಆಶೀರ್ವಚನ ನುಡಿಗಳನ್ನಿತ್ತರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now