ಹೀಗೊಂದು ಮಕ್ಕಳ ಸಂತೆ

ಹೀಗೊಂದು ಮಕ್ಕಳ ಸಂತೆ

0Shares


ಉಡುಪಿ, 2 ಜನವರಿ 2025: ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ ಇಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಅನುಷಾ. ಎಸ್. ಶೆಟ್ಟಿ ಇವರು ಮುಂದಾಳತ್ವದಲ್ಲಿ ದಿನಾಂಕ 30/01/2025 ರಂದು ಮಕ್ಕಳ ಸಂತೆ ನಡೆಯಿತು. ವಿದ್ಯಾರ್ಥಿಗಳಿಗೆ ಅವರ ಸಾಮಾನ್ಯ ಜ್ಞಾನವನ್ನು ಮತ್ತು ವ್ಯವಹಾರ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅವರ ಅಭಿವೃದ್ದಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಯಿತು.

ಮಕ್ಕಳು ತರಕಾರಿ, ಹಣ್ಣು ಹಂಪಲು , ಸಾಂಬಾರು ಪದಾರ್ಥ, ಹೂವು ಹಾಗೂ ಇತರ ಸಾಮಾನುಗಳನ್ನು ತಂದು ಸಂತೆಯಲ್ಲಿ ಮಾರಾಟಮಾಡಿದರು.ಮಕ್ಕಳ ಪೋಷಕರು ಗ್ರಾಹಕರಾಗಿ ಪಾಲ್ಗೊಂಡರು. ಈ ಸಮಯದಲ್ಲಿ ಶಾಲಾ ಮುಖ್ಯಶಿಕ್ಷಕರಾದ ಶ್ರೀಮತಿ ಸರಸ್ವತಿ ಹಾಗೂ ಎಲ್ಲಾ ಅಧ್ಯಾಪಕರು, ಆಯಾ,ಅಡುಗೆ ಸಿಬ್ಬಂದಿ ಹಾಜರಿದ್ದರು. ಹಾಗೂ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಸುಕೇಶ್ ಮಡಿವಾಳ,ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ಕೊಳಲಗಿರಿ ಹಾಗೂ ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಬ್ರಹ್ಮಾವರ ಇದರ ಅಧ್ಯಕ್ಷರಾದ ವಿಶ್ವನಾಥ್ ಬೆಳ್ಳಂಪಳ್ಳಿ ಹಾಗೂ ಶಾಲಾಭಿವೃದ್ದಿ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now