
ಉಡುಪಿ : ಡಾ. ಜೊಯ್ಲಿಸ್ ನೊರೋನ್ಹಾ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದಿದ್ದಾರೆ. ಡಾ. ಜೊಯ್ಲಿಸ್ ನೊರೋನ್ಹಾ ಅವರು ಕೈಗೊಂಡ ಡೈನಾಮಿಕ್ಸ್ ಆಫ್ ರಿಸ್ಕ್ & ಪ್ರೊಟೆಕ್ಟಿವ್ ಫ್ಯಾಕ್ಟರ್ಸ್ ಫಾರ್ ಅನ್ ರಿಜಿಸ್ಟರ್ಡ್ ಮೆಡಿಕೇಶನ್ ಇನ್ ದ ಯುಇಎ ಮಾರ್ಕೆಟ್ – ಚಾಲೆಂಜರ್ಸ್ ಅಂಡ್ ಸೊಲ್ಯೂಷನ್ಸ್ ಅಧ್ಯಯನ ವಿಷಯಕ್ಕೆ ಈ ಪದವಿ ಲಭಿಸಿದೆ.
ದಾನಿಗಳು, ಪರೋಪಕಾರಿಯೂ ಆಗಿರುವ ಇವರು ಉಡುಪಿಯ ಕಲ್ಮಾಡಿ-ಕೊಡವೂರಿನ ದಿ. ಹೆನ್ರಿ ಮತ್ತು ಡಯಾನ ನೊರೋನ್ಹಾ ದಂಪತಿಗಳ ಪುತ್ರಿ. ಉಡುಪಿ ನಗರಸಭೆಯ ಮಾಜಿ ಸದಸ್ಯ ಹೊರ್ಮಿಸ್ ಸಹಿತ ಸಂತೋಷ್ ಮತ್ತು ಹನೀಶ್ ಇವರ ಸಹೋದರಿ. ಪ್ರಸ್ತುತ ಇವರು ದುಬೈನ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ಕಮರ್ಷಿಯಲ್ ಸೇಲ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now