
ನವದೆಹಲಿ: ದೆಹಲಿಯ ಸೋನಿ ಎಂಬ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಸಲೀಂ ಮತ್ತು ಆತನಿಬ್ಬರು ಸಹಚರರು ಕೊಂದು ಹೂತು ಹಾಕಿದ್ದಾರೆ. ಆಕೆ ಆತನಿಂದ ಗರ್ಭಿಣಿಯಾದ ನಂತರ ಮದುವೆಯಾಗಲು ಒತ್ತಾಯಿಸಿದಳು. ಆದರೆ ಆತನಿಗೆ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ.
ಪಶ್ಚಿಮ ದೆಹಲಿಯ ನಾಗ್ಲೋಯ್ ನಿವಾಸಿಯಾಗಿರುವ ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು. ಆಗಾಗ ಆಕೆ ಮತ್ತು ಸಲೀಂ ಇಬ್ಬರು ಇದ್ದ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.
ಎನ್ ಡಿ ಟಿವಿ ವರದಿಯ ಪ್ರಕಾರ ಸಂಜು ಎಂದು ಹೇಳಿಕೊಂಡಿದ್ದ ಸಲೀಂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ.
ಸೋನಿಯಾ ಕುಟುಂಬದವರ ಪ್ರಕಾರ ಆಕೆಗೆ ಪ್ರಿಯಕರ ಇದ್ದಾನೆ ಎಂಬುದು ಅವರಿಗೆ ತಿಳಿದಿತ್ತು. ಆದರೆ ಆಕೆ ಯಾರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಕೇಳಿದಾಗ ಸೋನಿ ಆಗಾಗ ತಮಾಷೆ ಮಾಡುತ್ತಿದ್ದಳು. ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆದರೆ ಈ ವಿಷಯ ಮನೆಯವರಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























