ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಪ್ರಥಮ ಆಧ್ಯತೆಯಾಗಲಿ : ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ.

ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಪ್ರಥಮ ಆಧ್ಯತೆಯಾಗಲಿ : ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ.

0Shares

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇವರ ಆಶ್ರಯದಲ್ಲಿ ಉದ್ಯಾವರ ಬಲಾಯಿ ಪಾದೆ ಹೆದ್ದಾರಿ ಬಳಿ ನಿರ್ಮಾಣಗೊಳ್ಳಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿದ ಕರ್ನಾಟಕ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿ ಯವರು ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಿರ್ಮಾಣ ಗೊಳ್ಳಲಿರುವ ಸಾರ್ವಜನಿಕ ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಮೊದಲ ಆಧ್ಯತೆ , ಅದರ ನಿರ್ಮಾಣಕ್ಕೆ ಸಕಲ ಸಮಾಜ ಬಾಂಧವರು ಸಹಕಾರ ನೀಡಬೇಕು ಮತ್ತು ಕರ್ನಾಟಕ ಸರಕಾರದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಈ ಯೋಜನೆಗೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೆಲಸಕ್ಕೆ ಶುಭ ಹಾರೈಸಿದರು ಮತ್ತು ನಾಡಿನ ಸಮಸ್ತ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಶಯ ಸಲ್ಲಿಸಿದರು.

ಈ ಸಂಧರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಗಮಿಸಿದ ಶ್ರೀ ಮಂಜುನಾಥ ಪೂಜಾರಿ ಯವರಿಗೆ ಸನ್ಮಾನ ಮಾಡಲಾಯಿತು , ಈ ಸಂಧರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ್ ಹೇರೂರು, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಶ್ರೀ ಪ್ರವೀಣ್ ಪೂಜಾರಿ, ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಶ್ರೀ ದಿನೇಶ್ ಜತ್ತನ್ ಅರೂರುತೋಟ , ಶ್ರೀ ಕಿರಣ್ ಕುಮಾರ್ ಉದ್ಯವಾರ , ಶ್ರೀ ಗಿರೀಶ್ ಕುಮಾರ್, ಶ್ರೀ ದಿವಾಕರ್ ಉದ್ಯಾವರ , ಶ್ರೀ ಹರೀಶ್ ಪೂಜಾರಿ,ಮಲ್ಪೆ ,ಸುನಿಲ್ ಪೂಜಾರಿ ಮಲ್ಪೆ ,ಸುಜಯ್ ಪೂಜಾರಿ ನಿಟ್ಟೂರು , ಶ್ರೀ ಶೇಖರ್ ಕೋಟ್ಯಾನ್ , ಶ್ರೀ ಸಾಯಿ ರಾಜ್ ಕಿದಿಯೂರು , ಸಚಿನ್ ಸಾಲ್ಯಾನ್, ಲಕ್ಷ್ಮಣ ಸನಿಲ್, ಸತೀಶ್ ಪೂಜಾರಿ , ನವೀನ್ ಪೂಜಾರಿ ,ಸಂದೇಶ ಪೂಜಾರಿ , ರಾಯ್ಸ್ ಫೆರ್ನಾಂಡಿಸ್, ಗುಣಾಕರ ಸನಿಲ್ , ಕೇಶವ ಸನಿಲ್,ಸುಪ್ರೀತ್ ಸುವರ್ಣ,,ಇರ್ಫಾನ್ , ನವೀನ್ ಪೂಜಾರಿ , ಮುಂತಾದವರು ಉಪಸ್ತಿತರಿದ್ದರು.

ಶ್ರೀ ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷರಾದ ಶ್ರೀ ಮಿಥುನ್ ಅಮೀನ್ ಸ್ವಾಗತಿಸಿದರು.

ಶ್ರೀ ದಿನೇಶ್ ಜತ್ತನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಹೇಳಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now