
ಮುಂಬಯಿ (ಆರ್‍ಬಿಐ), ಸೆ.29: ಪ್ರತಿವರ್ಷ ಸೆ.29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದ್ದು, ವಿಶ್ವ ಹೃದಯ ಮಹಾಸಂಘವು ವರ್ಷವೂ ವಿಶೇಷ ವಿಷಯವನ್ನು ಘೋಷಿಸಿ ಹೃದಯ ರೋಗಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಒಂದು ಸೋಲನ್ನೂ ತಪ್ಪಿಸಿ ಕೊಳ್ಳದಿರಿ (ಡೋಂಟ್ ಮಿಸ್ ಎ ಬೀಟ್) ಈ ವರ್ಷದ ವಿಷಯವಾಗಿದ್ದು, ಹೃದಯದ ಆರೈಕೆಯಲ್ಲಿ ನಿರ್ಲಕ್ಷ ್ಯ ಮಾಡಬಾರದು ಎಂಬುದೇ ಇದರ ಅರ್ಥ. ಹೃದಯಾಘಾತ ಅಕಸ್ಮಿಕವಾಗಿ ಉಂಟಾಗುವುದಿಲ್ಲ. ದೇಹವು ಮೊದಲು ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ. ಆದರೆ ಅನೇಕರು ನಿರ್ಲಕ್ಷ ್ಯ ಮಾಡುವುದರಿಂದ 30-40ರ ವಯಸ್ಸಿನಲ್ಲೇ ಗಂಭೀರ ಸಮಸ್ಯೆ ಎದುರಾಗುತ್ತದೆ. ಎಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯರ ಸಂಪರ್ಕ ಅತ್ಯಗತ್ಯ ಎಂದು ಕೆ.ಜೆ ಸೋಮಯ್ಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸೋಮಯ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ| ಸದಾನಂದ ಅರ್.ಶೆಟ್ಟಿ ಎಚ್ಚರಿಸಿದರು.
ಕೆ.ಜೆ.ಸೋಮಯ್ಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಂಸ್ಥೆಗಳು ಸೋಮಯ್ಯ ಟ್ರಸ್ಟ್‍ನ ಸಹಯೋಗದಲ್ಲಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ಸಯಾನ್ ಈಸ್ಟರ್ನ್ ಎಕ್ಸ್‍ಪ್ರೆಸ್‍ನ ಸೋಮಯ್ಯ ಆಯುರ್‍ವಿಹಾರ್ ಇಲ್ಲಿನ ಹಾರ್ಟ್ ಕೇರ್ ಕಿಯೋಸ್ಕ್‍ನಲ್ಲಿ ವಿಶ್ವ ಹೃದಯ ದಿನ ಆಚರಿಸಿದ್ದು ಔಟ್ ಲುಕ್ ಬೆಸ್ಟ್ ಡಾಕ್ಟರ್ಸ್ ಮುಂಬಯಿ ಪುರಸ್ಕೃತ ಹಿರಿಯ ಹೃದ್ರೋಗ ತಜ್ಞ, ಡಾ| ಸದಾನಂದ ಶೆಟ್ಟಿ ಪ್ರಧಾನ ಭಾಷಣಕಾರರಾಗಿದ್ದು ಹೃದಯ ಆರೋಗ್ಯದ ಕುರಿತು ಜಾಗೃತಿ ಸಂದೇಶ ನೀಡಿ ಇಂದಿನ ಜೀವನ ಶೈಲಿ, ಒತ್ತಡ, ಅಸ್ವಸ್ಥ ಆಹಾರ ಪದ್ಧತಿ, ನಿಯಮಿತ ವ್ಯಾಯಾಮದ ಕೊರತೆ, ಧೂಮಪಾನ ಹಾಗೂ ನಿದ್ರಾಹೀನತೆ ಹೃದಯ ರೋಗಗಳ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ಯುವ ಪೀಳಿಗೆಯವರು ಇದರಿಂದ ಹೆಚ್ಚು ಬಾಧಿತರಾಗುತ್ತಿದ್ದಾರೆ. ಆದ್ದರಿಂದಲೇ ಹೃದಯ ಸಂಬಂಧಿ ರೋಗಗಳನ್ನು ತಡೆಯಲು ಸರಿಯಾದ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದರು.
ಹೃದಯ ಆರೈಕೆ ಜಾಗೃತಿಗಾಗಿನ ಈ ಕಾರ್ಯಕ್ರಮದಲ್ಲಿ ಪ್ರತಿಭಾಶಾಲಿ ಸಂಗೀತಕಾರ (ಮ್ಯೂಸಿಕಲ್ ಲುಮಿನರಿ) ಸುಖವಿಂದರ್ ಸಿಂಗ್ ಅತಿಥಿü ಅಭ್ಯಾಗತರಾಗಿದ್ದು ದೀಪ ಬೆಳಗಿಸಿ ಚಾಲನೆಯನ್ನಿತ್ತರು ಹಾಗೂ ಸಂಗೀತವನ್ನಾಡಿಯೇ ನೆರೆದವರ ಹೃನ್ಮಣಗಳಿಗೆ ಸ್ವಸ್ಥತೆಯ ಸಂದೇಶವನ್ನಿತ್ತÀರು.
ಹಿಂದಿನ ಕಾಲದಲ್ಲಿ ಜನರಿಗೆ ಶತಾಯುಷ್ಯವು ಕಟ್ಟಿಟ್ಟ ಬುತ್ತಿಯಂತಿತ್ತು. ಆದರೆ ಈಗ ಅರ್ವತ್ತರ ಜೀವನವೇ ಬೋನಸ್ ಬದುಕು ಎಂದಾಗಿದೆ. ಕಾರಣ ಆಗಿನ ಜೀವನಕ್ಕೂ ಈಗಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮುಖ್ಯನಾಗಿ ಸೇವನೆಯ ಆಹಾರ ಜನಜೀವನದ ಮೇಲೆ ಪರಿಣಾಮಕಾರಿಯಾಗಿದೆ. ಆರೋಗ್ಯ ಏರುಪೇರಾದಾಗ ಬಾರದ ಕಾಯಿಲೆಗಳೂ ನಿತ್ಯವಾಗಿ ಪರಿಣಮಿಸುತ್ತಿವೆ ಎಂದು ಸೋಮಯ್ಯ ಸಂಸ್ಥೆಯ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್ ಕಹ್ಲೋನ್ ಪ್ರಸ್ತಾವನೆಯಲ್ಲಿ ತಿಳಿಸಿದರು.
ಸೋಮಯ್ಯ ಆಸ್ಪತ್ರೆಯ ಎಸ್‍ಎಸ್ ಪಡಸಾಲೆಯಲ್ಲಿ ಅತಿಥಿüವರ್ಯರನ್ನು ಬರಮಾಡಿಕೊಂಡು ಹಾರ್ಟ್ ಕೇರ್ ಕಿಯೋಸ್ಕ್‍ನಲ್ಲಿ ಕುಶಲೋಪರಿಗೈದು ಬಳಿಕ ಸಭಾಗೃಹದಲ್ಲಿ ಹೃದಯ ದಿನ ಸರಳ ಕಾರ್ಯಕ್ರಮ ನಡೆಸಲಾಗಿದ್ದು ಸಿಇಒ ಲೆ| ಜ| ಹೆಚ್.ಎಸ್ ಕಹ್ಲೋನ್ ಸ್ವಾಗತಿಸಿದರು. ಡಾ| ಮನೀಶಾ ಬೋಬಡೆ ಧನ್ಯವಾದ ಸಮರ್ಪಿಸಿದರು.
ಈ ಶುಭಾವಸರದಿ ಸುಖ್‍ವಿಂದರ್ ಮತ್ತು ಡಾ| ಸದಾನಂದ ಶೆಟ್ಟಿ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸೋಮಯ್ಯ ಆಸ್ಪತ್ರೆಯ ಹಿರಿ-ಕಿರಿಯ ವೈದ್ಯರು, ಉನ್ನತಾಧಿಕಾರಿಗಳು, ವೈದ್ಯಕೀಯ ವಿದ್ಯಾಥಿರ್üಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಅಂಗವಾಗಿ ಧರ್ಮಾರ್ಥವಾಗಿ ರಕ್ತ ತಪಾಸಣೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಬ್ಲಡ್ ಪ್ರೆಷರ್, ಮಧುಮೇಹ ತಪಾಸಣೆಗಳು ನಡೆಸಲ್ಪಟ್ಟಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























