
ಮುಂಬಯಿ, March 2 2025: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಯಿಯಲ್ಲಿನ ಜಾತೀಯ ಸಂಸ್ಥೆಗಳಲ್ಲಿನ ಪ್ರತಿಷ್ಠಿತ ಸಂಸ್ಥೆಯಾಗಿದ್ದು ತೊಂಬತ್ತ ಮೂರನೇ ವರ್ಷದಲ್ಲಿ ಸೇವಾ ನಿರತ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಗೌರವ ಅಧ್ಯಕ್ಷರಾಗಿ ಎಲ್.ವಿ.ಅವಿನ್ ದೊಡ್ಡಿಕಟ್ಟೆ ಇವರನ್ನು ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ.






ಸಾಂತಕ್ರೂಜ್‌ನಲ್ಲಿನ ಅಸೋಸಿಯೇಶನ್‌ನ ಬಿಲ್ಲವರ ಭವನದಲ್ಲಿ ಇತ್ತೀಚೆಗೆ ನಡೆಸಲಾದ ಸಭೆಯಲ್ಲಿ ೨೦೨೫-೨೮ರ ಅವಧಿಗೆ ಅಸೋಸಿಯೇಶನ್‌ನ ಮೂರನೇ ಗೌರವ ಅಧ್ಯಕ್ಷರಾಗಿ ಎಲ್.ವಿ.ಅವಿನ್ ಆಯ್ಕೆಯಾದರು. ಈ ಹಿಂದೆ ಅಸೋಸಿಯೇಶನ್‌ನ ಮಾಜಿ ಉಪಾಧ್ಯಕ್ಷ ವೈ.ನಾಗೇಶ್ ತದನಂತರ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಸುಮಾರು ಮೂರು ದಶಕಗಳ ನಿರಂತರವಾಗಿ ಅಮೋಘ ಸೇವೆಗೈದ ಜಯ ಸಿ.ಸುವರ್ಣ ಅವರನ್ನು ಜೀವಮಾನದ ಗೌರವಾಧ್ಯಕ್ಷರನ್ನಾಗಿ ಸೇವೆ ಸಲ್ಲಿಸಿ ಸ್ವರ್ಗಸ್ಥರಾದ ಕಾರಣ ಖಾಲಿಯಾಗಿದ್ದ ಈ ಸ್ಥಾನಕ್ಕೆ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ.ಅವಿನ್ ಮತ್ತು ಪದಾಧಿಕಾರಿಗಳು ಎಲ್.ವಿ ಅವಿನ್ ಇವರನ್ನು ನೇಮಕಗೊಳಿಸಿರುವರು.
ಮಹಾರಾಷ್ಟ್ರದಾದ್ಯಂತ ಸುಮಾರು ೨೧ ಸ್ಥಳೀಯ ಸಮಿಗಳನ್ನೊಳಗೊಂಡ ಅಸೋಸಿಯೇಶನ್‌ನಲ್ಲಿ ಅಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈಗ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಬಲಾಢ್ಯ ಪಡಿಸಲು ನೂತನ ಸಾರಥಿಯಾಗಿ ಎಲ್‌ವೀ ಆಯ್ಕೆಯಾಗಿರುವರು.
ಎಲ್.ವಿ.ಅವಿನ್ :
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಬಜ್ಪೆ ದೊಡ್ಡಿಕಟ್ಟ್ಟಾ ನಿವಾಸಿಗಳಾದ ವೆಂಕಪ್ಪ ಪೂಜಾರಿ ಮತ್ತು ಅಬ್ಬಯ್ಯ ಅವಿನ್ (ಸದ್ಯ ದಿವಂಗತರು) ದಂಪತಿಯ ಐದನೇ ಮಗುವಾಗಿ ಜನನ ಪಡೆದ ಎಲ್ವೀ ಅವರು ದೊಡ್ಡಿಕಟ್ಟಾ ದಿ| ಅಮ್ಮಣ್ಣ ಪೂಜಾರಿ ಎಂಬ ಹಿರಿಯ ಮನೆತನದವರು. ಬಜ್ಪೆಯಲ್ಲೇ ವಿದ್ಯಾಭ್ಯಾಸ ಪೂರೈಸಿ ಮುಂಬಯಿ ಮಹಾನಗರಕ್ಕೆ ಕಾಲಿಟ್ಟು ಕಾರ್ಮಿಕರಾಗಿ ಸೇವಾ ನಿರತರಾಗುತ್ತಲೇ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಡ್ರಾಫ್ಟ್‌ಸ್‌ಮೆನ್‌ಶಿಪ್ ಪದವೀಧರಾಗಿ ಸ್ವಉದ್ಯಮಿ, ಅಂತರ್‌ರಾಜ್ಯ ಸಿದ್ಧಿಯ ರಾಜಕಾರಣಿಯಾಗಿ ಪ್ರಸಿದ್ಧರು.
ಭಾರತೀಯ ಜನತಾ ಪಕ್ಷ (ಬಿಜೆಪಿ)ದ ದಕ್ಷಿಣ ಭಾರತೀಯ ಘಟಕ ಮುಂಬಯಿ ಪ್ರದೇಶದ ಅಧ್ಯಕ್ಷರಾಗಿ, ಬಿಜೆಪಿ ಸಾಂತಕ್ರೂಜ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು, ಕೋಶಾಧಿಕಾರಿಯಾಗಿ, ಬಿಜೆಪಿ ವಾಯುವ್ಯ ವಿಭಾಗೀಯ ಉಪಾಧ್ಯಕ್ಷ, ಖಜಾಂಚಿಯಾಗಿ ಶ್ರಮಿಸಿ ಸದ್ಯ ಬಿಜೆಪಿ ಮುಂಬಯಿ ಪ್ರದೇಶದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿರುವ ಅವಿನ ಅವರು ಶೈಕ್ಷಣಿಕ-ಸಾಮಾಜಿಕ ಸೇವೆಗಳಲ್ಲೂ ಸದಾ ಮುಂಚೂಣಿಯಲ್ಲಿದ್ದು, ಸಾಂತಕ್ರೂಜ್ ಪೂರ್ವದ ವಾಕೊಲಾ ಇಲ್ಲಿನ ಚೈತನ್ಯದ ನಗರದ ಶಿವ ಗಣೇಶ್ ಮಂದಿರದ ವಿಶ್ವಸ್ಥ ಅಧ್ಯಕ್ಷ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಬಜ್ಪೆ-ಮಂಗಳೂರು ಇದರ ಗೌರವಾಧ್ಯಕ್ಷ, ವಿಜಯ ವಿಠಲ ಕಲ್ಯಾಣ ಮಂದಿರ ಜೋಕಟ್ಟೆ ಮಂಗಳೂರು ಇದರ ಕೋಶಾಧಿಕಾರಿಯಾಗಿ, ಬಜಪೆ ದೊಡ್ಡಿಕಟ್ಟೆಯ ಶ್ರೀ ಸ್ವಯಂಭೂಲಿಂಗೇಶ್ವರ ಕ್ಷೇತ್ರದ ದೈವ-ದೇವರುಗಳ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಜಾತಿಗಳ ಮುಖಂಡರು ಮತ್ತು ಸಂಸ್ಥೆಗಳ ಬೆಂಬಲದಿಂದ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಅವಳಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸೇವಾ ನಿರತವಾಗಿ ಕಾರ್ಯಚರಿಸುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಡುವ ಏಕೈಕ ಸರಕಾರೇತರ ಸಂಸ್ಥೆ ಎಂದೆಣಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಲ್ಲಿ ಉಪಾಧ್ಯಕ್ಷ, ಅಧ್ಯಕ್ಷರಾಗಿ ಸೇವಾ ನಿರತ ಎಲ್‌ವೀ ಪರಿಸರಪ್ರೇಮಿಯಾಗಿ ತನ್ನ ಕೆಲಸವನ್ನು ನಿರ್ವಾಹಿಸುತ್ತಿದ್ದಾರೆ.
ಅಪ್ಪಟ ಕನ್ನಡವಾದಿಯಾಗಿ ಕನ್ನಡ ಸಂಘ ಸಾಂತಾಕ್ರೂಜ್ (ರಿ.) ಇದರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಸುಮಾರು ೨೧ ವರ್ಷಗಳಲ್ಲಿ ಸಂಘವನ್ನು ಸಕ್ರೀಯವಾಗಿಸಿ ಶಿಖರದತ್ತೆರಕ್ಕೆ ಒಯ್ದ ಕೀರ್ತಿಗೆ ಪಾತ್ರರಾಗಿರುವರು.
ಮಹಾರಾಷ್ಟ್ರ ರಾಜ್ಯ ಸರಕಾರವು ನಿಯೋಜಿಸುವ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ (ಎಸ್‌ಇಒ)ಯಾಗಿ ಮತ್ತು ಕೇಂದ್ರ ಸರಕಾರ ಸ್ವಾಮ್ಯದ ಮಹಾನಗರ್ ಟೆಲಿಕಾಂ ನಿಗಮ್ ನಿಯಮಿತ (ಎಂಟಿಎನ್‌ಎಲ್) ಇದರ ಸಲಹಾ ಸಮಿತಿಯ ಸದಸ್ಯರಾಗಿ ಸೇವಾ ನಿರತರಾಗಿದ್ದ ಇವರು ಬಿಲ್ಲವರ ಅಸೋಸಿಯೇಶನ್‌ನ ಸಂಚಾಲಕತ್ವದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ನಿರ್ದೇಶಕರಾಗಿದ್ದು, ಲೆಕ್ಕಾಚಾರ ಪರಿವೀಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವರು.
ತನ್ನ ಬದುಕು ನಿರ್ವಹಣೆಗಾಗಿ ಉದ್ಯಮ ನಡೆಸುತ್ತಿರುವ ಇವರು ಅಂಬಿಕಾ ಮೌಲ್ಡ್‌ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದು, ಅಂಬಿಕಾ ಗ್ರೂಪ್ ಆಫ್ ಕಂಪೆನೀಸ್ ಇದರ ಕಾರ್ಯಾಧ್ಯಕ್ಷರಾಗಿರುವರು. ಪತ್ನಿ ಸುಧಾ ಎಲ್.ಅವಿನ್ ಮತ್ತು ಮೂವರು ಸುಪುತ್ರಿಯರು ಅವರೊಂದಿಗೆ ಸಾಂತಕ್ರೂಜ್ ಪೂರ್ವದ ಕಲೀನಾ ಇಲ್ಲಿ ಸುಖಮಯ ಸಾಂಸರಿಕ ಬದುಕನ್ನು ನಡೆಸುತ್ತಿದ್ದಾರೆ.
ಪ್ರಶಸ್ತಿಗಳು
ಬಿಲ್ಲವರ ಅಸೋಸಿಯೇಶನ್ ಸಂಸ್ಥೆಯು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ಅನನ್ಯ ಸೇವೆಯನ್ನು ಪರಿಗಣಿಸಿ ಫೆಬ್ರವರಿ -೨೦೧೧ರಲ್ಲಿ ಸನ್ಮಾನಿಸಿದೆ. ಎಪ್ರಿಲ್ ೨೦೦೧ರಲ್ಲಿ ಸಾಹಿತ್ಯ ಬಳಗ ಮುಂಬಯಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಂಸ್ಥೆಗಳಿಂದ ತುಳು ಸಂಸ್ಕೃತಿಯ ಅಭಿವೃದ್ಧಿಗಾಗಿ ಸನ್ಮಾನ, ರಾಜಕೀಯ ಕ್ಷೇತ್ರ ಮತ್ತು ಆಥಿsಕ ವಲಯದ ಸೇವೆಗಾಗಿ ಮುಂಬಯಿ ಚಾನೆಲ್‌ನ ೨೦೦೨ರಲ್ಲಿ ‘ಸ್ಯಾಲ್ಯೂಟ್ ಮುಂಬಯಿ ಪ್ರಶಸ್ತಿ’ಪ್ರದಾನಿಸಿದೆ. ನವೆಂಬರ್ ೨೦೦೫ ರಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಸೇವೆಗೆ ಜ್ಞಾನ ಮಂದರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕಾಡೆಮಿಯು ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿತು. ಅದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನೇರದ ಸಮಾರಂಭದಲ್ಲಿ ಅರಳುವ ಮಲ್ಲಿಗೆ ಬಿರುದು ನೀಡಿ ಸನ್ಮಾನಿಸಿತ್ತು. ಮೇ ೨೦೦೬ರಲ್ಲಿ ಕರ್ನಾಟಕ ಸಂಘ ನವ ದೆಹಲಿ ಮತ್ತು ಜ್ಞಾನ ಮಂದರ ಬೆಂಗಳೂರು ವತಿಯಿಂದ ಅಖಿಲ ಭಾರತ ಕನ್ನಡ ವಾಚನ ಸಾಹಿತ್ಯ ಸಮ್ಮೇಳನ ವತಿಯಿಂದ ‘ಭಾರತ ಜ್ಯೋತಿ’ ಬಿರುದು ನೀಡಿ ಗೌರವಿಸಿದೆ. ಡಿಸೆಂಬರ್ ೨೦೦೬ರಲ್ಲಿ ಕರ್ನಾಟಕ ಸಂಘ ಮುಂಬಯಿ ಮತ್ತು ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ವಾಚನ ಸಾಹಿತ್ಯ ಸಮ್ಮೇಳನದಲ್ಲಿ ‘ಸುವರ್ಣ ಕನ್ನಡಿಗ’ ಬಿರುದು ನೀಡಿ ಸನ್ಮಾನಿಸಿದೆ. ಡಿಸೆಂಬರ್ ೨೦೦೭ರಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಇದರ ವತಿಯಿಂದ ‘ಸಮಾಜ ಭೂಷಣ’ ಬಿರುದು ನೀಡಿ ಗೌರವಿಸಿದೆ.
೨೦೧೮ರಲ್ಲಿ ಗ್ಲೋಬಲ್ ಫೌಂಡೇಶನ್ ಅಚೀವರ್ ಸಂಸ್ಥೆಯು ರಷ್ಯಾದ ಟಶ್ಖೆಂಟ್ (ಉಝ್ಬೆಕೀಸ್ತಾನ್)ನಲ್ಲಿ ನಡೆಸಿದ ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್‌ಮೆಂಟ್ ವಿಚಾರಿತ ಮಹಾಸಮ್ಮೇಳನ-ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ (ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್) ಇವರ ಸಾಧನೀಯ ಸೇವೆ ಪರಿಗಣಿಸಿ ‘ಏಷಿಯಾ ಪೆಸಿಫಿಕ್ ಅಚೀವರ್‍ಸ್ ಅವಾರ್ಡ್’ ಪುರಸ್ಕಾರ ಪ್ರದಾನಿಸಿ ಗೌರವಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























