
ಮುಂಬಯಿ (ಆರ್‍ಬಿಐ), ಜು.10: ಗುರು ಪೂರ್ಣಿಮಾ ನಿಮಿತ್ತ ಇಂದು ಗುರುವಾರ ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಸಂಸ್ಥಾನದಲ್ಲಿ ಚಾತುರ್ಮಾಸ ನಿಮಿತ್ತ ಆಚಾರ್ಯ ಗುಲಾಬ್ ಭೂಷಣ ಮಹಾರಾಜ್, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆಯಿಂದ ಅಭಿಷೇಕ ಪೂಜೆ ಶ್ರಾವಕರಿಂದ ಕಲಶ ಸ್ಥಾಪನೆ ಶ್ರೀ ಮಠ ಹಾಗೂ ಶಾಂತಿ ಭವನದಲ್ಲಿ ಲಘು ಸಿದ್ದ ಚಕ್ರ ವಿಧಾನ ಪೂಜೆ ನೆರವೇರಿತು.
ಮಹಾರಾಜ್ ಆಚಾರ್ಯರು ಆಶೀರ್ವಾದಗೈದು ಗುರುಗಳ ಉಪಕಾರ ಶ್ರೇಷ್ಠ ತಪಸ್ಸು ಜ್ಞಾನದ ಮೂಲಕ ನಮ್ಮನ್ನು ಸಂಸ್ಕಾರವಂತರಾಗಿ ರೂಪಿಸುವರು ಎಂದರು.
ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಹರಸಿ ನಾಲ್ಕು ಜೈನ ವೇದ ದಿವ್ಯ ಧ್ವನಿಯಿಂದ ಸಿಗಲು ಗೌತಮ ಗಣಧರರ ಉಪಕಾರ ಅತ್ಯಂತ ಶ್ರೇಷ್ಠ ಸರ್ವರಿಗೂ ಹಿತವಾದ ಮಧುರ ಓಂಕಾರ ಧ್ವನಿಯನ್ನು ಗೌತಮ ಸ್ವಾಮಿ ಸಂಸಾರದಿಂದ ಮೋಕ್ಷ ಪಡೆಯುವ ಪ್ರಶ್ನೆ ಮಾಡುವ ಮೂಲಕ ಜ್ಞಾನ ಹರಿಯಲು ಕಾರಣರಾದರು. ಅವರಿಗೆ ಕೇವಲ ಜ್ಞಾನವಾದ ದಿನ ಗುರು ಪೂರ್ಣಿಮಾ ಎಂದು ತಿಳಿಸಿದರು.
ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಬೆಳಿಗ್ಗೆ ಪ್ರತಾಪ್ ಚಂದ್ರ (ಪ್ರಭಾತ್ ಸಿಲ್ಕ್ಸ್), ಅಜಿತ್ ಎಸ್., ಸ್ವರ್ಣಲತಾ, ಡಾ| ಅನ್ವಿತಾ ಕುಪ್ಪೆಪದವು, ಮಕರಂದ ಪಡಿವಾಳ್, ತಿಲಕ್ ಪ್ರಸಾದ್, ಸುಜಾತಾ ಬಕ್ಕಾರು, ಸ್ವಯಂಪ್ರಭ ಬಲ್ಲಾಳ್, ಸಂಪತ್ ಬೆಳ್ತಂಗಡಿ, ಕೇಸರಿ ರವಿರಾಜ್ ಮತ್ತಿತರರು ಉಪಸ್ಥಿತರಿದ್ದು ಮಠದಲ್ಲಿ ಆಚಾರ್ಯರ, ಭಟ್ಟಾರಕರ ಆಶೀರ್ವಾದ ಪಡೆದುಕೊಂಡು ವಿವಿಧ ಕಲಶಶ್ರೀ ಮಠದಲ್ಲಿ ಸ್ಥಾಪನೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಸಹಕಾರ ದಲ್ಲಿ ವಿನಾಯಕ ಭಟ್ ಆಯೋಜನೆ ಯಲ್ಲಿ ಸಂಜೆ ತಾಳಮದ್ದಳೆ ಜರುಗಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























