
ಮುಂಬಯಿ, : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಮತ್ತು ಗೋಕುಲ ಭಜನಾ ಮಂಡಳಿಯ ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ ಆಷಾಢ ಏಕಾದಶಿ- ದೇವ ಶಯನೀ ಏಕಾದಶಿ ಪರ್ವ ದಿನವಾದ ರವಿವಾರ ದಿನಾಂಕ (ಜು.೦೬)ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಮತ್ತು ಗೋಕುಲ ಭಜನಾ ಮಂಡಳಿಯ ಆಯೋಜನೆಯಲ್ಲಿ ದಿನಪೂರ್ತಿ ಹರಿನಾಮ ಸಂಕೀರ್ತನೆಗಳೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಿತು.

ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ತುಳಸಿ ಮಾಲೆ, ಪುಷ್ಪ ಹಾರಗಳಿಂದ ದೇವಾಲಯದ ಅರ್ಚಕ ವೇ. ಮೂ. ಗಣೇಶ್ ಭಟ್ ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಅಂತೆಯೇ ಸಭಾಗೃಹದಲ್ಲಿ ಅಲಂಕರಿಸಿದ ತುಳಸಿ ವೃಂದಾವನದ ಮಧ್ಯೆ ಶ್ರೀ ವಿಠಲ ರುಕುಮಾಯಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪುಷ್ಪ ಹಾರಗಳಿಂದ ಶೃಂಗರಿಸಿ, ದೇವಾಲಯದಲ್ಲಿ ಪ್ರಾತಃಕಾಲದ ನಿತ್ಯ ಪೂಜೆಯಾದ ನಂತರ ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ಅವರ ಪ್ರಾರ್ಥನೆಯೊಂದಿಗೆ ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ.ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯರು ಕೃಷ್ಣ ಆಚಾರ್ಯ, ಶೈಲಿನಿ ರಾವ್, ಆಶ್ರಯ ಕಾರ್ಯಾಧ್ಯಕ್ಷ ರಾಜಾರಾಮ ಆಚಾರ್ಯ, ಶ್ರೀ ಉಮಾ ಮಹೇಶ್ವರಿ ದೇವಸ್ಥಾನ, ಜೆರಿಮೆರಿ ಅರ್ಚಕ ವೇದಮೂರ್ತಿ ಎಸ್.ಎನ್.ಉಡುಪ, ಗೋಕುಲ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರೊಂದಿಗೆ ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಗೋಕುಲ ಭಜನಾ ಮಂಡಳಿ ಶ್ರೀ ಕೃಷ್ಣ ಭಜನಾ ಮಂಡಳಿಯೊಂದಿಗೆ ಹರಿನಾಮ ಸಂಕೀರ್ತನಾ ಸೇವೆ ನಂತರ ಗೋಕುಲ ಬಾಲಕಲಾವೃಂದ, ಯುವ ಕಲಾವೃಂದ, ಶ್ರೀ ವಿಠ್ಠಲ ಭಜನಾ ಮಂಡಳಿ, ಮೀರಾರೋಡ್, ಶ್ರೀ ಗೋಪಾಲ ಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ಶನೀಶ್ವರ ಭಜನಾ ಮಂಡಳಿ, ನೇರೂಲ್, ಶ್ರೀ ರಾಮ ಭಜನಾ ಮಂಡಳಿ, ನೇರೂಲ್, ಶ್ರೀ ಸ್ಕಂದ ಭಜನಾ ಮಂಡಳಿ, ಚೆಂಬೂರು, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿಮುಂಬಯಿ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ, ನೇರೂಲ್ ಸೇರಿದಂತೆ ೧೫೦ ಕ್ಕೂ ಮಿಕ್ಕಿ ಸದಸ್ಯರು ಪಾಲ್ಗೊಂಡು, ಅತ್ಯಂತ ಭಕ್ತಿಭಾವದಿಂದ ಸಂಕೀರ್ತನಾ ಸೇವೆ ಸಲ್ಲಿಸಿದರು.

ಅಂದು ವಿಶೇಷವಾಗಿ ಆಯೋಜಿಸಿದ ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆಯು ವೇ. ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ ಸೇವಾರ್ಥಿಗಳಿಗೆ ಶ್ರೀ ವಿಷ್ಣು ಸಹಸ್ರ ನಾಮ ತುಳಸಿ ಅರ್ಚನೆ ಸಾಮೂಹಿಕ ಸಂಕಲ್ಪ ನೆರವೇರಿಸಿದರು. ಭಕ್ತಾದಿಗಳು ವಿಷ್ಣು ಸಹಸ್ರ ನಾಮ ಪಠಣೆಯೊಂದಿಗೆ ಶ್ರೀ ಕೃಷ್ಣನಿಗೆ ತುಳಸಿ ಅರ್ಚನೆ ಗೈದರು. ಅಂತೆಯೇ ವೇದಮೂರ್ತಿ ಗಣೇಶ್ ಭಟ್ ರವರು ಶ್ರೀ ಗೋಪಾಲಕೃಷ್ಣ ದೇವರಿಗೆ ವಿಷ್ಣು ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ ಗೈದು ಮಹಾ ಪೂಜೆ, ಮಹಾ ಮಂಗಳಾರತಿ ಬೆಳಗಿದರು. ಈ ವಿಶೇಷ ತುಳಸಿ ಅರ್ಚನೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು, ಭಗವದ್ಗೀತೆ ಪಠನೆ ನೆರವೇರಿತು.
ರಾತ್ರಿ ದೇವಾಲಯದಲ್ಲಿ ನಿತ್ಯ ಪೂಜೆಯಾದ ನಂತರ ಗೋಕುಲ ಭಜನಾ ಮಂಡಳಿಯಿಂದ ಭಜನಾ ಮಂಗಳ ನೆರವೇರಿದ ನಂತರ ವೇ.ಮೂ. ಗಣೇಶ್ ಭಟ್ ಅವರು ಶ್ರೀ ವಿಠಲ ರುಕುಮಾಯಿ ದೇವರಿಗೆ ಮಂಗಳಾರತಿ ಬೆಳಗಿ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಗೋಕುಲ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಣೆ ಗೈದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























