
ಮುಂಬಯಿ (ಆರ್‍ಬಿಐ),ಏ. .12: ಪುತ್ತೂರು ನಗರದ ಪ್ರತಿಷ್ಠಿತ ಹೆಬ್ಬಾರಬೈಲು ಭಂಡಾರಿ ಮನೆತನದ ಈಶ್ವರ ಭಂಡಾರಿ ಕಂಪೌಂಡು ನಿವಾಸಿ ಹಿರಿಯ ನಾಟಿ ವೈದ್ಯೆ, ಪೂವರಿ ತುಳು ಮಾಸಿಕ ಪತ್ರಿಕೆ ಸಂಪಾದಕ ವಿಕುಭ ಹೆಬ್ಬಾರಬೈಲು ಇವರ ಮಾತೃಶ್ರೀ ಶ್ರೀಮತಿ ನಾಗಮ್ಮ ಈಶ್ವರ ಭಂಡಾರಿ ( 91) ಅವರು ಅಲ್ಪಕಾಲದ ಅನಾರೋಗ್ಯದಿಂದ ಏ. 9 ರಂದು ನಿಧನ ಹೊಂದಿದ್ದಾರೆ.
ಬೆಳ್ಳಿಪ್ಪಾಡಿ ಭಂಡಾರಿ ಮನೆತನದವರಾಗಿದ್ದ ಇವರು ನಾಟಿವೈದ್ಯೆಯಾಗಿ ಮಹಿಳೆಯರ ಬಿಳಿಸೆರಗು, ಬಾಣಂತಿ ಮದ್ದು , ಮಲಬದ್ಧತೆ, ಮೂಲವ್ಯಾಧಿ ಇನ್ನಿತರ ಹಲವು ಸಮಸ್ಯೆಗಳಿಗೆ ಮನೆ ಮದ್ದು ನೀಡುವುದರಲ್ಲಿ ನಿಸ್ಸೀಮರಾಗಿದ್ದರು. ಬಿಸೆರಗು ಸಮಸ್ಯೆಗೆ ಅವರು ಕೊಡುತ್ತಿದ್ದ ಔಷಧಿಯು ಮಂಗಳೂರು, ಚಿಕ್ಕಮಗಳೂರು , ಕೊಪ್ಪವರೆಗೂ ಪ್ರಚಾರದಲ್ಲಿತ್ತು. ಕುರಿಯಬಂದರು, ಬೆಳ್ಳಿಪ್ಪಾಡಿ, ಬೀರ್ನಬಿತ್ತಿಲ್, ನೆಕ್ಕರೆ ಮುಂತಾದ ಕಾಡು ಬೆಟ್ಟಗಳಲ್ಲಿ ಹುಡುಕಾಡಿ ಔಷಧೀಯ ಗಿಡ ಮೂಲಿಕೆಗಳನ್ನು ಸಂಗ್ರಹಿಸಿ ಕೊಳ್ಳುತ್ತಿದ್ದರು.
ಇವರು 2021ರಲ್ಲಿ ನಿಟ್ಟೆ ಗುಲಾಬಿ ಸ್ಮಾರಕ ಔಷಧ ವಿಜ್ಞಾನಗಳ ಸಂಸ್ಥೆ ಹಾಗೂ ನಿಟ್ಟೆ ವಿಶ್ವ ವಿದ್ಯಾಲಯನಿಲಯ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನವಂಬರ್ 18ರಂದು ’ಪ್ರಕೃತಿ ಚಿಕಿತ್ಸಾ ದಿನ” ಆಚರಣೆ ಸಂದರ್ಭದಲ್ಲಿ ಗೌರವಕ್ಕೆ ಪಾತ್ರರಾದ ಮುಖ್ಯ ತುಳು ಜನಪದ ವೈದ್ಯರಲ್ಲಿ ಒಬ್ಭರಾಗಿದ್ದಾರೆ.
ಕೊಡುಗೈ ದಾನಿಗಳಾಗಿದ್ದ ಹಿರಿಯ ಚೇತನ ಶ್ರೀಮತಿ ನಾಗಮ್ಮ ಇವರು ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಸಹೋದರ, ಸಹೋದರಿ ಸಹಿತ ಅಪಾರ ಬಂಧು- ಭಾಂಧವರನ್ನು ಅಗಲಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























