ವಡಾಲ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ-ಬ್ರಹ್ಮರಥೋತ್ಸವ

ವಡಾಲ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ-ಬ್ರಹ್ಮರಥೋತ್ಸವ

0Shares

ಮುಂಬಯಿ, ಎ.೦೬: ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ರವಿವಾರ ೬೧ನೇ ವಾರ್ಷಿಕ ಶ್ರೀ ರಾಮ ನವಮಿಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಲ್ಪಟ್ಟಿತು.

ರಾಮನಾಮ ಸಂಕೀರ್ತನೆಯೊಂದಿಗೆ ಎಂದಿನಂತೆ ಪೂರ್ವಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವಸರಳವಾಗಿ ಸಂಭ್ರಮಿಸಲಾಗಿದ್ದು ರಾಮ ನವಮಿ ಪ್ರಯುಕ್ತ ಮುಂಜಾನೆಯಿಂದ ಪ್ರಧಾನ ಆರ್ಚಕರು ದೇವತಾ ಪ್ರಾರ್ಥನೆ, ರಥಾರೋಹಣ, ರಥ ವಾಸ್ತು ಹವನ, ರಥ ಶೋಭಯಾತ್ರೆ, ಮಹಾ ಮಂಗಳಾರತಿ, ರಾತ್ರಿ ಪೂಜೆ, ಸಮಾರಾಧನೆ ಇತ್ಯಾದಿ ಪೂಜಾಧಿಗಳು ನೆರವೇರಿಸಲ್ಪಟ್ಟವು.

ಮಹಿಳಾ ವೃಂದವು ಶ್ರೀರಾಮನ ಉತ್ಸವಮೂರ್ತಿಯನ್ನು ತೊಟ್ಟಿಲ್ಲರಿಸಿ ಶ್ರದ್ಧಾಪೂರ್ವಕವಾಗಿ ನಾಮಕರಣೋ ತ್ಸವ ನಡೆಸಿ ಶ್ರೀ ರಾಮ ಜನ್ಮೋತ್ಸವ ಸಂಭ್ರಮಿಸಿದ್ದು, ಮಧ್ಯಾಹ್ನ ಬ್ರಹ್ಮರಥ ಶೋಭಾಯಾತ್ರೆ, ರಥೋರೋಹಣ ನಡೆಸಲಾಗಿ ರಾತ್ರಿ ಪೂಜೆಯೊಂದಿಗೆ ವಾರ್ಷಿಕ ಉತ್ಸವ ಸಂಪನ್ನ ಗೊಂಡಿತು. ವಿದ್ವಾನರು ಮತ್ತು ಪುರೋಹಿತರು ವಿವಿಧ ಪೂಜಾಧಿಗಳನ್ನು ನೆರವೇರಿಸಿದ್ದು, ಮಂದಿರದ ವೈಧಿಕರು ನಾನಾ ಪೂಜೆಗಳನ್ನು ನೆರವೇರಿಸಿ ನೆರೆದ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಅಧ್ಯಕ್ಷ ಮುಕುಂದ್ ವೈ.ಕಾಮತ್, ಉಪಾಧ್ಯಕ್ಷ ಅನಂತ್ ಪಿ.ಪೈ, ಕಾರ್ಯದರ್ಶಿ ಮಧುಕರ್ ಪೈ, ಕೋಶಾಧಿಕಾರಿ ಪ್ರವೀಣ್ ಕಾಮತ್, ಉಲ್ಲಾಸ್ ಕಾಮತ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ವಿವಿಧ ಸೇವೆಗಳನ್ನು ಪೂರೈಸಿ ಶ್ರೀ ರಾಮೋತ್ಸವ ಆಚರಿಸಿದರು. ಅರುಣಾ ನಾಯಕ್ ಮತ್ತು ತಂಡವು ಸಂಗೀತ ಕಚೇರಿ ಹಾಗೂ ಲಿಖಿತಾ ಪೈ ನೃತ್ಯ ವೈಭವ ಪ್ರದರ್ಶಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now