
ಮುಂಬಯಿ (ಆರ್‌ಬಿಐ) ಮಾ.೧೫: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ನೂತನ ಕಚೇರಿ ಉದ್ಘಾಟನೆಯು ಇಂದಿಲ್ಲಿ ಶನಿವಾರ ಬೆಳಿಗ್ಗೆ ಸಾಂತಾಕ್ರೂಸ್ ಪೂರ್ವದ ವಕೋಳಾ ಇಲ್ಲಿನ ವಿಕ್ಟರಿ ಹೌಸ್ ನಲ್ಲಿ ವಾಸ್ತುಶಾಸ್ತ್ರಜ್ಞ ಅಶೋಕ್ ಪುರೋಹಿತ ತನ್ನ ಪೌರೋಹಿತ್ಯದಲ್ಲಿ ಗಣಹೋಮ, ಉದ್ಘಾಟನ ಪೂಜೆ ನೇರವೇರಿಸಿದರು.
ಪರಿಷತ್ತುವಿನ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಧರ್ಮಪತ್ನಿ ವಿನೋದಿನಿ ಹೆಗ್ಡೆ ಪದಾಧಿಕಾರಿಗಳನ್ನೊಳಗೊಂಡು ರಿಬ್ಬನ್ ಕತ್ತರಿಸಿ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಮಲಾಕ್ಷ ಸರಾಫ್, ಹಿರಿಯ ಸಲಹೆಗಾರರಾದ ಕೆ. ಕೆ. ಶೆಟ್ಟಿ, ದೇವಲ್ಕುಂದ ಭಾಸ್ಕರ್ ಶೆಟ್ಟಿ, ಗೌ. ಕಾರ್ಯದರ್ಶಿ ಚಂದ್ರಶೇಖರ ಭಟ್, ಜತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಸ್ಥಾಪಕ ಕಾರ್ಯದರ್ಶಿ ರಮೇಶ್ ಶಿವಪುರ, ಆಂತರಿಕ ಲೆಕ್ಕ ಪರಿಶೋಧಕ ಜಗದೀಶ್ ರೈ, ವಸಂತ್ ದೇವಾಡಿಗ, ಎನ್. ಪ್ರಥ್ವಿರಾಜ್ ಮುಂಡ್ಕೂರು, ಅಶೋಕ್ ಸಸಿಹಿತ್ಲು, ಕ್ರಷ್ಣರಾಜ್ ಶೆಟ್ಟಿ, ಲಕ್ಷ್ಮಣ್ ಕಾಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಆರ್ ಬಂಗೇರ, ಜೂಲಿಯೆಟ್ ಪಿರೇರಾ, ಸುಶೀಲ ದೇವಾಡಿಗ, ಮತ್ತು ಸಮಿತಿ ಉಪಸಮಿತಿಗಳ ಸದಸ್ಯರು ಉಪಸ್ಥಿತಿಯಲ್ಲಿ ಉದ್ಟಟನಾ ಕಾರ್ಯಕ್ರಮ ನೆರವೇರಿತು.
ಅಧ್ಯಕ್ಷರಾಗಿ ಪದ ಸ್ವೀಕರಿಸಿದಂದಿನಿಂದ ಪರಿಷತ್ತುವಿಗಾಗಿ ಸ್ವಂತ ಕಚೇರಿಯನ್ನು ಮಾಡಲೇಬೇಕು, ಕಲೆ ಮತ್ತು ಕಲಾವಿದರ ಶ್ರೇಯೋಬಿವ್ರದ್ದಿ ಜೊತೆಗೆ, ಪರಿಷತ್ತು ಅನಾರೊಗ್ಯದಲ್ಲಿ ಬಳಲುತ್ತಿರುವಂತಹ ಬಡಕಲಾವಿದರಿಗಾಗಿ ಕ್ಷೇಮ ನಿಧಿಯನ್ನು ಹೊಂದಿರಬೇಕೆಂಬ ಕನಸು ಇಂದು ನನಸಾಗಿದೆ. ತನ್ನ ಸ್ವಂತಕ್ಕಾಗಿ ಯಾರು ಕೂಡ ಏನನ್ನೂ ಮಾಡಲು ಸುಲಭಸಾದ್ಯ ಆದರೆ ಸಮಾಜಕ್ಕಾಗಿ, ಬಡವರಿಗಾಗಿ, ಸಮಾಜ ಸೇವೆ ಮಾಡುವುದು ಸುಲಭ ಸಾಧ್ಯವಲ್ಲ. ಈವೊಂದು ಕೆಲಸಕ್ಕೆ ಹಣಕಿಂತಲೂ ಸಮಯ ವ್ಯಯಮಾಡುವಂತಹ ದೊಡ್ಡ ಮನಸ್ಸು ಶ್ರದ್ದೆ ಬೇಕಾಗುತ್ತದೆ ಎಂದು ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಕೊಡುಗದಾನಿಗಳ ದೊಡ್ಡ ಮನಸ್ಸಿನ ಕನಸಿಗೆ ಸದಾ ಅವರ ಬೆನ್ನಾಹಿಂದೆ ನಿಂತು ಶ್ರದ್ಧೆಯಿಂದ ದುಡಿದ ಸಮಿತಿ ಸದಸ್ಯರೆಲ್ಲರಿಂದಾಗಿ, ಮಾತ್ರವಲ್ಲದೆ ಮುಂಬಯಿ ಮಹಾನಗರದ ಕೊಡುಗೈ ಧಾನಿಗಳಿಂದಾಗಿ ಪರಿಷತ್ತು ಸ್ವಂತ ಕಚೇರಿಯನ್ನು ಹೊಂದುವಂತಾಯಿತು. ನೂತನ ಕಚೇರಿಯನ್ನು ಮಾಡುವರೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸುರೇಂದ್ರ ಕುಮಾರ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು.
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇಂದು ಕಿರು ಕಚೇರಿಯನ್ನು ಹೊಂದಿದೆ, ಮುಂದೆ ಅದು ಕಿರುಸಭಾಗ್ರಹವಾಗಲಿ, ಆನಂತರ ಪರಿಷತ್ತು ಬೆಳೆದು ಹೊರನಾಡಲ್ಲಿ ಮೇರು ಸಭಾಂಗಣವನ್ನೇ

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























