
ತುಳುನಾಡ ಐಸಿರಿ ಸಂಸ್ಥೆ ಆಯೋಜಿತ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯಾಟ
ಟ್ರೋಫಿ ಮುಡಿಗೇರಿಸಿದ ಎಸ್‌ಕೆಸಿ ದಮನ್ (ಪ್ರಥಮ) ಕೆಎಫ್‌ಸಿ ಸೂರತ್ (ದ್ವಿತೀಯ)
ಮುಂಬಯಿ (ಆರ್‌ಬಿಐ), ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ವಾಪಿ, ದಮ್ಮನ್, ವಲ್ಸಡ್, ಸಿಲ್ವಾಸ ಮತ್ತು ಉಮ್ಮರ್‌ಗಾಂವ್) ಸಂಯೋಗದೊಂದಿಗೆ ತುಳುನಾಡ ಐಸಿರಿ ಪ್ರಿಮಿಯಾರ್ ಲೀಗ್ ೨೦೨೫ ಕ್ರಿಕೆಟ್ ಪಂದ್ಯವು ಕಳೆದ ಭಾನುವಾರ ಗುಜರಾತ್ ರಾಜ್ಯದ ವಾಪಿ ಪ್ರರಿಸರದಲ್ಲಿನ ಕೆ.ಕೆ ಭಂಡಾರಿ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟಿತು. ತುಳುನಾಡ ಐಸಿರಿಯ ಅಧ್ಯಕ್ಷರು ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕ್ರಿಕೆಟ್ ಪಂದ್ಯಾಟವನ್ನು ಸಿಲ್ವಾಸದ ಮೇಯರ್ ರಜನಿ ಗೋವಿಂದ ಶೆಟ್ಟಿ ದೀಪ ಪ್ರಜ್ವಳಿಸಿ, ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಕ್ರೀಡಾಕೂಟದಲ್ಲಿ ಗುಜರಾತ್‌ನ ಬರೋಡ, ಸೂರತ್, ಸಿಲ್ವಾಸ ಮತ್ತು ದಮನ್ ಇಲ್ಲಿನ ಸ್ಥಾನೀಯ ೮ ತಂಡಗಳು ಪಾಲ್ಗೊಂಡಿದ್ದು, ಎಸ್‌ಕೆಸಿ ದಮನ್ ಪ್ರಥಮ ಸ್ಥಾನದೊಂದಿಗೆ ವಿಜೇತ ತಂಡವಾಗಿದ್ದು, ಕೆಎಫ್‌ಸಿ ಸೂರತ್ ದ್ವಿತೀಯ ಸ್ಥಾನ, ಶಶಿ ಹಂಟರ್ ತೃತೀಯ ಸ್ಥಾನಗಳಿಗೆ ಪಾತ್ರವಾದವು. ಅವಿನಾಶ್ ಶೆಟ್ಟಿ ಎಸ್‌ಕೆಸಿ ದಮನ್ (ಮ್ಯಾನ್ ಆಫ್ ದ ಸಿರೀಸ್), ರಿಶಿ ಮಾಥುರ್ ಕೆಎಫ್‌ಸಿ ಸೂರತ್ (ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್), ನಿತೀನ್ ಪವನ್ ಎಸ್‌ಕೆಸಿ ದಮನ್ (ಅತ್ಯುತ್ತಮ ಬೌಲರ್), ವಿಜಯ್ ನಾಯಕ್ ಎಸ್‌ಕೆಸಿ ದಮನ್ (ಮ್ಯಾನ್ ಆಫ್ ದ ಮ್ಯಾಚ್), ಚೇತನ್ ಸೂರತ್ (ಅತ್ಯುತ್ತಮ ಫಿಲ್ಡಿಂಗ್), ಚೇತನ್ ಗೌಡ ಎಸ್‌ಕೆಸಿ ದಮನ್ (ಅತ್ಯುತ್ತಮ ವಿಕೇಟ್ ಕಿಪರ್) ಪ್ರಶಸ್ತಿಗಳಿಗೆ ಭಾಜನರಾದರು.
ಆನಿಲ್ ಶೆಟ್ಟಿ ಮತ್ತು ಸುಕೇಶ್ ಶೆಟ್ಟಿ (ಹೋಟೆಲ್ ಹನಿ ಗಾರ್ಡನ್) ಇವರು ಪಾರಿತೋಷಕಗಳ ಪ್ರಾಯೋಜಕತ್ವ ವಹಿಸಿದ್ದು, ಅತಿಥಿಗಳು ವಿಜೇತರಿಗೆ ಸ್ಮರಣಿಕೆ, ನಗದು ಹಣ, ವಿಜೇತ ಫಲಕಗಳನ್ನಿತ್ತು ಹಾಗೂ ಎಲ್ಲ ತಂಡಗಳ ನಾಯಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.


ತುಳುನಾಡ ಐಸಿರಿ ಉಪಾಧ್ಯಕ್ಷ ನವೀನ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಬಿ. ಶೆಟ್ಟಿ, ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಮಿತಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ಪುತ್ತೂರು, ಆನಿಲ್ ಶೆಟ್ಟಿ, ಕಿರಣ್ ಅಂಚನ್, ಯುವ ವಿಭಾಗದ ಅಧ್ಯಕ್ಷ ರಾಜೀವ ಶೆಟ್ಟಿ, ಆಶ್ವಿನ್ ಶೆಟ್ಟಿ, ಕೌತ್ತುಬ್ ಶೆಟ್ಟಿ, ನಾಗರಾಜ ಅಂಚನ್, ನೀತಿನ್ ಪವರ್, ಕರುಣಾಕರ ಶೆಟ್ಟಿ, ವೆಂಕಟೇಶ ಪೂಜಾರಿ ಸಿಲ್ವಾಸ, ಶಿವ ಮತ್ತಿತರರ ಸಹಯೋಗದಲ್ಲಿ ನಡೆಸಲ್ಪಟ್ಟಿತು.
ತಾರಾ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ಕ್ರೀಡಾ ಪ್ರಧಾನ ಸಂಯೋಜಕ ಸುಕೇಶ್ ಶೆಟ್ಟಿ (ಹನಿ ಗಾರ್ಡನ್) ಮತ್ತು ಚೇತನ್ ಗೌಡ ಕಾರ್ಯಕ್ರಮ ನಿರ್ವಾಹಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























