ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಜಯ ಎ.ಶೆಟ್ಟಿ

ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಜಯ ಎ.ಶೆಟ್ಟಿ

0Shares

ಮುಂಬಯಿ, (ಆರ್‌ಬಿಐ) ಮುಂಬಯಿ ಹಾಗೂ ಉಪನಗರಗಳ ಬಂಟ ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಬೇಕೆ ಎನ್ನುವ ಉದ್ದೇಶದಿಂದ 25 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಬಂಟ್ಸ್ ನ್ಯಾಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಕಬಡ್ಡಿ ಕ್ರೀಡಾಪಟು, ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರರಾಗಿರುವ ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ, ಸೌತ್ ಕೆನರಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಜಯ ಎ. ಶೆಟ್ಟಿ ಶಿಮಂತೂರು ಆಯ್ಕೆಯಾಗಿದ್ದಾರೆ.

ಫೆ.22ರಂದು ಕುರ್ಲಾ ಪೂರ್ವದ ಬಂಟರ ಸಂಘದ ಎನೆಕ್ಸ್ ಸಭಾಗೃಹದಲ್ಲಿ ನಡೆದ ಬಂಟ್ಸ್ ನ್ಯಾಯ ಮಂಡಳಿ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜಯ ಎ ಶೆಟ್ಟಿ ಅವರಿಗೆ. ನ್ಯಾಯಮಂಡಳಿ ಯ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಕಡಂದಳೆಯವರು ಹೂಗುಚ್ಚ ನೀಡಿ ಅಭಿನಂದಿಸಿದರು.

ಜಯ ಎ.ಶೆಟ್ಟಿ ಅವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ಅಧಿಕಾರಿ ಬಂಟರ ಸಂಘ ಮುಂಬಯಿ ಮಾಜಿ ಕಾರ್ಯದರ್ಶಿಯಾಗಿ, ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಮಾಜಿ ಕಾರ್ಯದರ್ಶಿಯಾಗಿ ಹಲವು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಮಾರ್ಗದರ್ಶನದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯುವಲ್ಲಿ ಸಹಕಾರಿಯಾಗಿದೆ. ಪ್ರತಿ ವರ್ಷ ಬಂಟರ ಸಂಘ ನಡೆಸುವ ಕ್ರೀಡಾಕೂಟವು ಯಶಸ್ವಿಗೆ ಇವರ ಪೂರ್ಣ ಸಹಕಾರ ಮುಖ್ಯ ಕಾರಣವಾಗಿದೆ. ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿ ಎರಡು ಬಾರಿನಡೆದ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾಟಕ್ಕೆ ಮುಖ್ಯ ಮಾರ್ಗದರ್ಶಕರಾಗಿದ್ದಾರು. ದೇಶದ ಪ್ರಮುಖ ರಾಜ್ಯಗಳಲ್ಲಿ ಕಬ್ಬಡಿ ಆಟವಾಡಿದ ಅನುಭವ ಅಲ್ಲದೆ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸಿದವರು,

ಕ್ರೀಡಾ ಮೈದಾನದಲ್ಲಿ ಆಟಗಾರರಿಗೆ ನ್ಯಾಯ ನೀಡುವಲ್ಲಿ ಸಮರ್ಥ ರಿನಿಸಿಕೊಂಡವರು, ಇವರು ಕ್ರೀಡಾ ಅಭಿಮಾನವನ್ನು ಗುರುತಿಸಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಜಯ ಶೆಟ್ಟಿ ಅವರ ಪರಿವಾರ ಕಬ್ಬಡಿ ಆಟಗಾರರ ತಂಡವಾಗಿದೆ ಪತ್ನಿ ರಾಷ್ಟ್ರೀಯ ಕಬಡ್ಡಿ ಆಟಗಾರರಾಗಿದ್ದು ಮಗ ಕೂಡ ರಾಷ್ಟ್ರೀಯ ಕಬಡ್ಡಿ ಆಟಗಾರರಾಗಿ ಇವರಿಬ್ಬರಿಗೂ ಛತ್ರಪತಿ ಶಿವಾಜಿ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರಕಾರ ನೀಡಿ ಗೌರವಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now