ತ್ರಿವೇಣಿ ಸಂಗಮದಲ್ಲಿ ತುಳುನಾಡ ಬಾವುಟ ಹಾರಿಸಿದ ಹರೀಶ್ ಪೂಜಾರಿ ಅಂಕಲೇಶ್ವರ್

ತ್ರಿವೇಣಿ ಸಂಗಮದಲ್ಲಿ ತುಳುನಾಡ ಬಾವುಟ ಹಾರಿಸಿದ ಹರೀಶ್ ಪೂಜಾರಿ ಅಂಕಲೇಶ್ವರ್

0Shares

ಮುಂಬಯಿ (ಆರ್‌ಬಿಐ), ಫೆ.25: ಕಳೆದ ಜ.14ರ ಕ್ರೋಧಿ ಸಂವತ್ಸರದ ಪುಷ್ಯ ಕೃಷ್ಣ ಪಕ್ಷ ಹೇಮಂತ ಋತು ಉತ್ತರಾಯಣ, ಮಕರ ಸಂಕ್ರಮಣ, ತಿಲ ಸಂಕ್ರಾಂತಿ ಶುಭಾವಸರದಿ ಆದಿಗೊಂಡು ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳುವ ಐತಿಹಾಸಿಕ ಪಾವಿತ್ರ ತಾ ಮಹಾ ಕುಂಭಮೇಳದಲ್ಲಿ ಹರೀಶ್ ಪೂಜಾರಿ ಅಂಕಲೇಶ್ವರ್ ತುಳುನಾಡ ಧ್ವಜವನ್ನು ಹಾರಿಸಿ ಮಾತೃಭಾಷೆ, ಹುಟ್ಟೂರ ಋಣವನ್ನು ಪೂರೈಸಿ ಶೀಘ್ರವಾಗಿ ತುಳುಭಾಷೆ ರಾಷ್ಟ್ರೀಯ ಮಾನ್ಯತೆಯ ಭಾಷೆಯಾಗಿ ರೂಪುಗೊಳ್ಳಲಿ ಎಂದು ಪ್ರಾಥಿಸಿದರು.

ಗುಜರಾತ್ ಬಿಲ್ಲವರ ಸಂಘ ಇದರ ಅಂಕಲೇಶ್ವರ್ ಸಮಿತಿಯ ಅಧ್ಯಕ್ಷ, ಅಂಕಲೇಶ್ವರ್ ತುಳು ಸಂಘದ ಉಪಾಧ್ಯಕ್ಷ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮತ್ತು ಗೆಜ್ಜೆಗಿರಿ ಮೇಳದ ಪೋಷಕ, ಹೆಸರಾಂತ ಸಮಾಜ ಸೇವಾಕರ್ತ, ಕೊಡುಗೈದಾನಿ, ಪ್ರಸಿದ್ಧ ಯುವ ಹೊಟೇಲು ಉದ್ಯಮಿ, ಹರೀಶ್ ವಿ.ಪೂಜಾರಿ ಕುಟುಂಬ ಸಮೇತರಾಗಿ ಉತ್ತರಪ್ರದೇಶದಲ್ಲಿನ ನಡೆಯುತ್ತಿರುವ ಐತಿಹಾಸಿಕ ಪ್ರಯಾಗ್ರಾಜ್‌ನ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯಸ್ನಾನಗೈದರು.

ಕೋಟ್ಯಾಂತರ ಭಕ್ತಾದಿಗಳ ಮಧ್ಯೆ ಭಾರೀ ಸಂಚಾರದಟ್ಟಣೆಯ ಮಧ್ಯೆಯೂ ಪತ್ನಿ ಶೋಭಾ ಪೂಜಾರಿ, ಮಕ್ಕಳಾದ ಮನ್ವಿತ್ ಹಾಗೂ ವರ್ಣಿತ್ ಅವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಗೈದು ಪುನೀತರೆಣಿಸಿದರು.

ಯಾತ್ರೆಯುದ್ದಕ್ಕೂ ತುಳುನಾಡ ಮತ್ತು ತನ್ನ ಆರಾಧಕ ಬ್ರಹ್ಮಶ್ರೀ ನಾರಾಯಣ ಗುರುಗಳ ಬಾವುಟಗಳನ್ನು ಎತ್ತಿಹಿಡಿದು ಬಿಲ್ಲವತನ ಮತ್ತು ತುಳುನಾಡ ಪ್ರೇಮವನ್ನು ಸಾರುತ್ತಾ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ತುಳುವ ಆಚಾರ, ಸಂಸ್ಕೃತಿ ಭಕ್ತಿಯನ್ನು ವ್ಯಕ್ತಪಡಿಸಿ ತನ್ನತನದ ವಿಶೇಷತೆಯನ್ನು ಮೆರೆದಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now