ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಬಿ. ಎಸ್.ಕೆ.ಬಿ. ಆಸೋಸಿಯೇಶನ್ ಗೋಕುಲ ದೀಪಾರಾಧನೆ.

ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಬಿ. ಎಸ್.ಕೆ.ಬಿ. ಆಸೋಸಿಯೇಶನ್ ಗೋಕುಲ ದೀಪಾರಾಧನೆ.

0Shares

ಮುಂಬಯಿ (ಆರ್‌ಬಿಐ), ಅ.೧೩: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ. ಎಸ್.ಕೆ.ಬಿ. ಎಸೋಸಿಯೇಶನ್‌ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾ ನವಮಿ ಪುಣ್ಯ ದಿನವಾದ ಶನಿವಾರ(ಅ.೧೨) ರಂದು ದೀಪಾರಾಧನೆಯನ್ನು ಗೋಕುಲ ಸಭಾಗೃಹದಲ್ಲಿ ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿತು.

ಪ್ರಧಾನ ಪುರೋಹಿತ, ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ಸಾಂಗವಾಗಿ ನೆರವೇರಿತು. ಸಭಾಗೃಹದಲ್ಲಿ ಪುರೋಹಿತ ವರ್ಗದವರು ಬೃಹತ್ ಮಂಡಲ ರಚಿಸಿ, ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಸಪ್ತಶತಿ ಪಾರಾಯಣ, ಭುವನೇಶ್ವರಿ ಪೂಜೆ, ಲಲಿತಾ ಸಹಸ್ರನಾಮ ಪಠನೆ ಇತ್ಯಾದಿ ಪೂಜಾ ವಿಧಿ – ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ದೀಪಾರಾಧನೆ ನೆರವೇರಿಸಿದರು. ಯಜಮಾನ ಸ್ಥಾನವನ್ನು ಸಂಘದ ಉಪಾಧ್ಯಕ್ಷರಾದ ಅವಿನಾಶ್ ಶಾಸ್ತ್ರೀ, ಶ್ರೀಮತಿ ಶ್ಯಾಮಲಾ ಶಾಸ್ತ್ರಿ ದಂಪತಿ ವಹಿಸಿದ್ದರು. ಶ್ರೀ ರಾಮವಿಠಲ ಕಲ್ಲೂರಾಯರು ಸೇವಾಥಿsಗಳಿಗೆ ಸಂಕಲ್ಪ ನೆರವೇರಿಸಿದರು.

ಇದೇ ಸಂದರ್ಭದಲ್ಲಿ, ಸರಸ್ವತಿ ಪೂಜೆಯ ಅಂಗವಾಗಿ, ಶಾರದಾ ಮಾತೆಯ ಭಾವಚಿತ್ರ ಹಾಗೂ ದಾರ್ಮಿಕ ಗ್ರಂಥಗಳನ್ನು ಇರಿಸಿ, ಗೋಕುಲ ಭಜನಾ ಮಂಡಳಿಯವರಿಂದ ಸ್ತೋತ್ರ ಪಠನೆ ಇತ್ಯಾದಿ ನೆರವೇರಿತು. ಶ್ರೀ ರಾಮವಿಠಲ ಕಲ್ಲೂರಾಯರು ಶ್ರೀ ಶಾರದಾ ದೇವಿಗೆ ಮಂಗಳಾರತಿ ಬೆಳಗಿದರು.

ಶ್ರೀ ದೇವಿಗೆ ಮಹಾ ಮಂಗಳಾರತಿಯಾದ ನಂತರ ಬದ್ರಿನಾರಾಯಣ ಪಿಲಿಂಜೆ ಪರಿವಾರದವರ ಪ್ರಾಯೋಜಕತ್ವದಲ್ಲಿ ಕನ್ನಿಕೆ ಮತ್ತು ಸುವಾಸಿನಿ ಪೂಜೆ ನೆರವೇರಿತು. ಕನ್ನಿಕಾ ಸ್ಥಾನವನ್ನು ಕುಮಾರಿ ಆರೋಹಿ ವಾರಂಬಳ್ಳಿ ಹಾಗೂ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಸ್ಥಾನವನ್ನು ಶ್ರೀಮತಿಯರಾದ ಪ್ರಸನ್ನ ಶಾಸ್ತ್ರಿ, ಲತಾ ಚಂದ್ರಶೇಖರ್ ರಾವ್ ಮತ್ತು ಶಾಂತಿ ಅಲೆವೂರು ಅಲಂಕರಿಸಿದ್ದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥರು ಶ್ರೀ ಕೃಷ್ಣ ಆಚಾರ್ಯ ಹಾಗೂ ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಉಪಾಧ್ಕಕ್ಪ ವಾಮನ್ಪ ಹೊಳ್ಳ, ಕೋಶಾಧಿಕಾರಿ ಹರಿದಾಸ್ ಭಟ್, ಗೌ. ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸೇವಾಥಿsಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಪ್ರಸಾದ ಭೋಜನ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now