15ನೆಯ ವಾರ್ಷಿಕ ಸಮಾವೇಶ ಪೂರೈಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ

15ನೆಯ ವಾರ್ಷಿಕ ಸಮಾವೇಶ ಪೂರೈಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ

0Shares

15ನೆಯ ವಾರ್ಷಿಕ ಸಮಾವೇಶ ಪೂರೈಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ
ಮಯೂರವರ್ಮದ ಸಮಾಜಮುಖಿ ಕಾರ್ಯ ಅರ್ಥಪೂರ್ಣ: ಟಿ.ಆರ್ ಮಧುಸೂದನ

ಮುಂಬಯಿ, ಫೆ.15: ಶ್ರಮದೊಂದಿಗೆ ಪ್ರಾಮಾಣಿಕತೆ, ಶ್ರದ್ದೆ, ಕಾಳಜಿ ಇದ್ದಾಗ ಸಂಘ-ಸಂಸ್ಥೆಗಳು ಮಾಡುವ ಪ್ರತಿ ಸಮಾಜಮುಖಿ ಕಾರ್ಯವು ಅರ್ಥಪೂರ್ಣವಾಗುತ್ತವೆ. ಆ ನಿಟ್ಟಿನಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮಾದರಿಯಾಗಿದೆ. ಇಂತಹ ಸಂಸ್ಥೆಯು ಪಂಚದಶ ವಾರ್ಷಿಕ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರು ವುದು ಅಭಿನಂದನೀಯ ಎಂದು ಕನ್ನಡ ಕಲಾ ಕೇಂದ್ರ ಇದರ ಅಧ್ಯಕ್ಷ ಟಿ.ಆರ್ ಮಧುಸೂದನ ತಿಳಿಸಿದರು.

ಕಳೆದ ಆದಿತ್ಯವಾರ ಅಪರಾಹ್ನ ನವಿಮುಂಬಯಿ ಐರೋಲಿ ಇಲ್ಲಿನ ಸೆಕ್ಟರ್ ಮೆಹ್ತಾ ಕಾಲೇಜ್ ಸಭಾಗೃಹದಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ಹದಿನೈದನೇ ವಾರ್ಷಿಕ ಸಮಾವೇಶ ಆಯೋಜಿಸಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿ ಟಿ.ಆರ್ ಮಧುಸೂದನ ಮಾತನಾಡಿದರು.

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮಂದಿರ ವಿದ್ಯಾವಿಹಾರ್ ಪ್ರಧಾನ ಅರ್ಚಕ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಮುಖ್ಯ ಅತಿಥಿsಯಾಗಿ, ಸಾಹಿತಿ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಮೆಹ್ತಾ ಕಾಲೇಜ್ ಐರೋಲಿ ಇದರ ಅಧ್ಯಕ್ಷ ವಿ.ಎನ್.ಹೆಗಡೆ, ಪ್ರಾಂಶುಪಾಲ ಡಾ| ಬಿ.ಆರ್ ದೇಶಪಾಂಡೆ, ತುಳುಕೂಟ ಅಸಲ್ಪ ಇದರ ಅದ್ಯಕ್ಷ ರಮಾನಾಥ ಕೊಟ್ಯಾನ್ ಅತಿಥಿs ಅಭ್ಯಾಗತರಾಗಿದ್ದರು.

ಪ್ರತಿಷ್ಠಾನದ 2025ನೇ ಸಾಲಿನ ‘ಚಕ್ರಧಾರಿ’ ಪ್ರಶಸ್ತಿಯನ್ನು ಸಂಘಟನಾ ಕ್ಷೇತ್ರದ ಸಾಧಕ, ಹಿರಿಯ ರಂಗ, ಯಕ್ಷಗಾನ ಕಲಾವಿದ, ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ ಹೆಗ್ಡೆ ಇವರಿಗೆ ಮತ್ತು “ಕೃಷಿ ಬಂಧು” ಪುರಸ್ಕಾರವನ್ನು ಕೃಷಿಸಾಧಕ ಉಮಾಮಹೇಶ್ವರ ಹೆಗಡೆ ಅವರಿಗೆ ಪ್ರದಾನಿಸಲಾಯಿತು. ವಿದ್ವಾನ್ ಸಂತೋಷ್ ಭಟ್ ಮುದ್ರಾಡಿ ಮತ್ತು ಹರೀಶ್ ಹೆಜ್ಮಾಡಿ ಅಭಿನಂದನಾ ನುಡಿಗಳನ್ನಾಡಿದರು.

ಮಾತೃಭಾಷಾಪ್ರೇಮ ಹಾಗೂ ಸಂಘಟನೆ ಕುರಿತಾದ ಅನುಭವಿ ಲೇಖಕರ ಬರಹದಿಂದ ಕೂಡಿದ ಹೊರನಾಡಿನಲ್ಲಿ ತುಳುವರು ಕೃತಿಯನ್ನು ಪೆರ್ಣಂಕಿಲ ಹರಿದಾಸ ಭಟ್ ಬಿಡುಗಡೆ ಒಟ್ಟು ಕಾರ್ಯಕ್ರಮದ ಚೌಕಟ್ಟು ಅರ್ಥಪೂರ್ಣವಾಗಿದೆ ಎಂದು ಶುಭಶಂಸನೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗೀತಾಂಬಿಕಾ ಮಂದಿರ ಮಹಿಳೆಯರು, ಡೊಂಬಿವಲಿ ಫ್ರೆಂಡ್ಸ್ ಸ್ವಾವಲಂಬನ ಕೇಂದ್ರದ ಸದಸ್ಯೆಯರು, ಘಣ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ ಮಕ್ಕಳು, ಡೊಂಬಿವಲಿ ಹವ್ಯಕ ಮಹಿಳಾ ಸದಸ್ಯೆಯರು, ರಜಕ ಸಂಘದ ನವಿ ಮುಂಬಯಿ ಮಹಿಳಾ ಸದಸ್ಯೆಯರು ಹಾಗೂ ಕು| ಕೃತಿ ಚಡಗ ಮತ್ತು ಕು| ಡೇಲಿಶಾ ಇವರು ನೃತ್ಯ ವೈಭವ ಪ್ರಸ್ತುತ ಪಡಿಸಿದರು. ವಿಷ್ಣು ಭಟ್ ಹೊಸ್ಮನೆ ಅವರ ಮೂಲ ಕಥೆಯ, ವಿಶ್ವನಾಥ ದೊಡ್ಮನೆ ರಚಿತ ಅಶೋಕ ಕುಮಾರ್ ಕೊಡ್ಯಡ್ಕ ಇವರ ನಿರ್ದೇಶನದಲ್ಲಿ ‘ಸೂರ್ಯಪ್ರಭ’ ಪೌರಾಣಿಕ ನಾಟಕವನ್ನು ಕೊಡ್ಯಡ್ಕ ಕ್ರೀಯೇಷನ್ ಮುಂಬಯಿ ಪ್ರಸ್ತುತ ಪಡಿಸಿತು.

ಜ್ಞಾನ ವಿಕಾಸ ಮಂಡಳ ಐರೋಲಿ ಮತ್ತು ತುಳುಕೂಟ ಅಸಲ್ಪ ಇವರ ಸಂಪೂರ್ಣ ಸಹಕಾರದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮವು ಮಾಲತಿ ಪುತ್ರನ್ ಪ್ರಾರ್ಥನೆಯೊಂದಿಗೆ ಆದಿಗೊಂಡಿತು. ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ ಪಿ.ಗೌಡ ಸಿಂಧೂರ, ಕೋಶಾಧಿಕಾರಿ ರಾಜ್‌ವರ್ಮ ಜೈನ್ ಅತಿಥಿಗಳಿಗೆ ಪುಷ್ಪಗುಚ್ಫಗಳನ್ನೀಡಿ ಗೌರವಿಸಿದರು. ಡಾ| ಜಿ.ಪಿ ಕುಸುಮಾ ಕೃತಿ ಪರಿಚಯಿಸಿದರು. ವೇದಾವತಿ ಭಟ್ ಮತ್ತು ಉಮಾ ಭಟ್ ಸನ್ಮಾನಪತ್ರ ವಾಚಿಸಿದರು. ಸುರೇಶ್ ಶೆಟ್ಟಿ ಕಣಂಜಾರು ಮತ್ತು ಸರೋಜ ಅಮಾತಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿ ದೊಡ್ಮನೆ ಪ್ರಸ್ತಾವನೆಗೈದು ವಂದನಾರ್ಪಣೆಗೈದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now